ಎನ್ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಕ್ರಮಕ್ಕೆ ಕೇಂದ್ರ ಆದೇಶ
ಕಳೆದ ವರ್ಷ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದ 'ಕ್ರೂಸ್ ಡ್ರಗ್ಸ್' ಪ್ರಕರಣದ ಬಗ್ಗೆ ಕಳಪೆ ತನಿಖೆ ನಡೆಸಿದ ಎನ್ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಸೂಕ್ತ ಕ್ರಮ...
Published: 27th May 2022 08:50 PM | Last Updated: 27th May 2022 08:50 PM | A+A A-

ಸಮೀರ್ ವಾಂಖೆಡೆ
ನವದೆಹಲಿ: ಕಳೆದ ವರ್ಷ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದ 'ಕ್ರೂಸ್ ಡ್ರಗ್ಸ್' ಪ್ರಕರಣದ ಬಗ್ಗೆ ಕಳಪೆ ತನಿಖೆ ನಡೆಸಿದ ಎನ್ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಹಣಕಾಸು ಸಚಿವಾಲಯ ಆದೇಶಿಸಿದೆ ಎಂದು ಶುಕ್ರವಾರ ಅಧಿಕೃತ ಮೂಲಗಳು ತಿಳಿಸಿವೆ.
ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ವಾಂಖೆಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ: ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಎನ್ ಸಿಬಿಯಿಂದ ಕ್ಲೀನ್ ಚಿಟ್!
ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಗೆ ಮುಂಬೈನ ಎನ್ ಸಿಬಿ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಪ್ರಕರಣದಲ್ಲಿ ಪ್ರಧಾನವಾಗಿ ತನಿಖೆ ನಡೆಸಿ, ಆರ್ಯನ್ ಖಾನ್ ರನ್ನು ಬಂಧಿಸಿದ್ದ ಸಮೀರ್ ವಾಂಖೆಡೆ ವಿರುದ್ಧ ಕಳಪೆ ತನಿಖೆಯ ಆರೋಪವನ್ನು ಸರ್ಕಾರ ಮಾಡಿದೆ.
ವಾಂಖೆಡೆ ಅವರು ಭಾರತೀಯ ಕಂದಾಯ ಸೇವಾ ಅಧಿಕಾರಿಯಾಗಿದ್ದು, ಕಳಪೆ ತನಿಖೆಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಣಕಾಸು ಸಚಿವಾಲಯ ಸಕ್ಷಮ ಪ್ರಾಧಿಕಾರವನ್ನು ಕೇಳಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಉದ್ಯೋಗ ಗಿಟ್ಟಿಸಲು ವಾಂಖೆಡೆ ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಿದ್ದರು, ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಥವಾ ಎನ್ಸಿಬಿ ಅಧಿಕಾರಿ ಕಳೆದ ನವೆಂಬರ್ನಲ್ಲಿ ತಾನು ದಲಿತ ಎಂದು ಸಾಬೀತುಪಡಿಸಲು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ತಮ್ಮ ಮೂಲ ಜಾತಿಯ ದಾಖಲೆಗಳನ್ನು ನೀಡಿದ್ದರು.