2 ದಿನಗಳ ಕಾರವಾರ ಪ್ರವಾಸದಲ್ಲಿ ಕೇಂದ್ರ ರಕ್ಷಣಾ ಸಚಿವ: ಯೋಗ ಮಾಡಿ ನೌಕಾನೆಲೆ ಸಿಬ್ಬಂದಿಗೆ ಸ್ಫೂರ್ತಿ ನೀಡಿದ ರಾಜನಾಥ್ ಸಿಂಗ್
2 ದಿನಗಳ ಕಾಲ ಕಾರವಾರ ಪ್ರವಾಸ ಕೈಗೊಂಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ನೌಕಾನೆಲೆ ಸಿಬ್ಬಂದಿಗಳೊಂದಿಗೆ ಶುಕ್ರವಾರ ಯೋಗಭ್ಯಾಸ ಮಾಡಿದರು.
Published: 27th May 2022 09:05 AM | Last Updated: 27th May 2022 09:12 AM | A+A A-

ನೌಕಾನೆಲೆ ಸಿಬ್ಬಂದಿಗಳೊಂದಿಗೆ ಯೋಗ ಮಾಡುತ್ತಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್.
ಕಾರವಾರ: 2 ದಿನಗಳ ಕಾಲ ಕಾರವಾರ ಪ್ರವಾಸ ಕೈಗೊಂಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ನೌಕಾನೆಲೆ ಸಿಬ್ಬಂದಿಗಳೊಂದಿಗೆ ಶುಕ್ರವಾರ ಯೋಗಭ್ಯಾಸ ಮಾಡಿದರು.
ಜೂನ್ ತಿಂಗಳಿನಲ್ಲಿ ವಿಶ್ವಯೋಗ ದಿನಾಚರಣೆ ನಡೆಯಲಿದ್ದು, ಇದರ ಭಾಗವಾಗಿ ಇಂದು ಯೋಗ ತಾಲೀಮು ನಡೆಯಿತು. ಇಂದು ಮುಂಜಾನೆ ಕಾರವಾರದ ನೌಕಾನೆಲೆ ಸಿಬ್ಬಂದಿಯ ಜೊತೆ ರಾಜನಾಥ್ ಸಿಂಗ್ ಯೋಗ ಮಾಡಿ ಸ್ಫೂರ್ತಿ ನೀಡಿದರು.
#WATCH | Defence Minister Rajnath Singh who is on a two-day visit to Karwar participates in a yoga session with Indian Navy personnel at Karwar Naval Base, Karnataka pic.twitter.com/LlDslFu96u
— ANI (@ANI) May 27, 2022
ಗುರುವಾರ ಕಾರವಾರ ನೌಕಾನೆಲೆಗೆ ಆಗಮಿಸಿದ ರಾಜನಾಥ್ ಸಿಂಗ್ ಅವರಿಗೆ ನೌಕಾನೆಲೆಯ ಅಧಿಕಾರಿಗಳು, ಸಿಬ್ಬಂದಿಗಳು ಆತ್ಮೀಯ ಸ್ವಾಗತ ಕೋರಿದರು. ಬಳಿಕ ಅಲ್ಲಿಯೇ ರಕ್ಷಣಾ ಸಚಿವರು ವಾಸ್ತವ್ಯ ಹೂಡಿದರು. ಇದರಂತೆ ಇದು ಬೆಳಿಗ್ಗೆ ಸಿಬ್ಬಂದಿಗಳೊಂದಿಗೆ ಯೋಗಾಭ್ಯಾಸ ಮಾಡಿ, ಸ್ಫೂರ್ತಿ ನೀಡಿದರು. ಇಂದು ರಾಜರಾತ್ ಸಿಂಗ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲೆಗೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಕಾರವಾರಕ್ಕೆ ನಿನ್ನೆ ಆಗಮಿಸಿದ ರಾಜನಾಥ್ ಸಿಂಗ್ ಅವರು, ನೌಕಾನೆಲೆ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದ ಜೊತೆಗೆ ಮಾತನಾಡಿದರು.
ದೇಶಕ್ಕಾಗಿ ತ್ಯಾಗ ಮಾಡುವ ಸೈನಿಕರನ್ನು ಸದಾ ಗೌರವಿಸಬೇಕು. ಹಿಂದೊಮ್ಮೆ ನನಗೆ ಜಲಾಂತರ್ಗಾಮಿಯಲ್ಲಿ ಹೋಗುವ ಅವಕಾಶ ಒದಗಿಬಂದಿತ್ತು. ಅಲ್ಲಿ ಜೀವನ ನಡೆಸುವುದು ಅತ್ಯಂತ ಕಠಿಣವಾಗಿತ್ತು. ನೀರನ್ನು ಮಿತವಾಗಿ ಅಳೆದು ಬಳಸಬೇಕು. ಇಂತಹ ಸ್ಥಿತಿಯಲ್ಲಿ ಸೈನಿಕರು ತಿಂಗಳುಗಟ್ಟಲೆ ಕುಟುಂಬದಿಂದ ದೂರವಿರುತ್ತಾರೆ. ಸುತ್ತಮುತ್ತ ಎಲ್ಲಿ ನೋಡಿದರಲ್ಲಿ ನೀರು. ಮಾತನಾಡಲು ಬೇರಾರೂ ಇಲ್ಲ. ಸಮುದ್ರದ ಅಲೆಗಳ ಶಬ್ದವನ್ನಷ್ಟೇ ಕೇಳಿಸಿಕೊಂಡು ಅವರು ದೇಶ ರಕ್ಷಣೆಯಲ್ಲಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ನಮ್ಮ ಸೈನ್ಯದ ಕೊಡುಗೆ ಅಪಾರ. ಪ್ರಧಾನಿ ಮೋದಿ ಅವರು ಬಂದ ನಂತರ ಭಾರತವನ್ನು ಇತರೆ ದೇಶಗಳು ನೋಡುವ ರೀತಿ ಬದಲಾಗಿದೆ. ಈ ಹಿಂದೆ ಭಾರತದ ವಿಚಾರಗಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿರಲ್ಲಿಲ್ಲ. ಈಗ ಗಂಭೀರವಾಗಿ ಕೇಳುತ್ತಾರೆ ಎಂದು ತಿಳಿಸಿದರು.
ಭಾರತದ ಸುರಕ್ಷತೆಯಲ್ಲಿ ಸೈನಿಕರ ಪಾತ್ರ ಮಹತ್ವದ್ದಾಗಿದೆ. ನಿಮ್ಮಿಂದ ಭಾರತದ ಹೆಸರು ಸುವರ್ಣಾಕ್ಷರದಲ್ಲಿ ಬರೆದಿಡುವ ಸಂದರ್ಭ ಬರಲಿದೆ. ದೇಶ ಸೇವೆ ಮಾಡುವ ಸೈನಿಕರ ತಾಯಿ, ಪತ್ನಿಯರ ತ್ಯಾಗವೂ ಹಿರಿದು. ಸೈನಿಕರ ಬಗ್ಗೆ ದೇಶದ ಜನರಲ್ಲಿ ಅಪಾರ ಗೌರವವಿದೆ. ಯುವಜನತೆಗೆ ಸೈನಿಕರು ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.