
(ಸಂಗ್ರಹ ಚಿತ್ರ)
ನವದೆಹಲಿ: ಸೇವೆಗಳ ಸುಧಾರಣೆಗಾಗಿ ವೈಯಕ್ತಿಕೇತರ ನಾಗರಿಕ ಡೇಟಾ ಸಿದ್ಧಗೊಳಿಸುವ ಕರಡು ನಿಯಮ ಬಿಡುಗಡೆಗೊಳಿಸಿದ ಕೇಂದ್ರ: ಇದರಿಂದಾಗುವ ಲಾಭಗಳಿವು...
ಡಿಜಿಟಲ್ ಸೇವೆಗಳ ಸುಧಾರಣೆಗಾಗಿ ವೈಯಕ್ತಿಕೇತರ ನಾಗರಿಕ ಡೇಟಾ ಸಿದ್ಧಗೊಳಿಸುವ ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಖಾಸಗಿ ಹಾಗೂ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಬಳಕೆ ಮಾಡುತ್ತಿರುವ ವೈಯಕ್ತಿಕೇತರ ಡೇಟಾವನ್ನು ಸಜ್ಜುಗೊಳಿಸುವುದಕ್ಕಾಗಿ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯ (ಎಂಇಐಟಿವೈ) ರಾಷ್ಟ್ರೀಯ ಡೇಟಾ ಗೌರ್ನೆನ್ಸ್ ಫ್ರೇಮ್ ವರ್ಕ್ ಕರಡನ್ನು ಬಿಡುಗಡೆ ಮಾಡಿದ್ದು, ಸಂಶೋಧನೆ ಹಾಗೂ ನಾವಿನ್ಯ ವ್ಯವಸ್ಥೆಗಳಿಗೆ ಸುರಕ್ಷಿತ ಪ್ರವೇಶವನ್ನು ಕಲ್ಪಿಸುವ ಉದ್ದೇಶ ಹೊಂದಿದೆ.
ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಷ್ಟ್ರೀಯ ಡೇಟಾ ಗೌರ್ನೆನ್ಸ್ ಫ್ರೇಮ್ ವರ್ಕ್ ಕೃತಕ ಬುದ್ಧಿಮತ್ತೆ ಸ್ಟಾರ್ಟ್ ಅಪ್ ಗಳಿಗೆ ಹಾಗೂ ಎಐ ಸಂಶೋಧನಾ ಸಂಸ್ಥೆ, ಸರ್ಕಾರಿ ಇಲಾಖೆಗಳ ಹಿತಾಸಕ್ತಿಯದ್ದಾಗಿದೆ ಎಂದು ಹೇಳಿದ್ದಾರೆ. ಇದು ಭಾರತದ 1 ಟ್ರಿಲಿಯನ್ ಡಿಜಿಟಲ್ ಎಕಾನಮಿಗೆ ವೇಗವರ್ಧಕವಾಗಿರಲಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.