ಇಬ್ಬರು ನಟೋರಿಯಸ್ ಕ್ರಿಮಿನಲ್ ಗಳನ್ನು ಎನ್ಕೌಂಟರ್ ಮಾಡಿದ ಘಾಜಿಯಾಬಾದ್ ಪೊಲೀಸರು
ಘಾಜಿಯಾಬಾದ್ ಪೊಲೀಸರು ಶುಕ್ರವಾರ ತಡರಾತ್ರಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ನಟೋರಿಯಸ್ ಕ್ರಿಮಿನಲ್ ಗಳಾದ ಬಿಲ್ಲು ದುಜಾನಾ ಅಲಿಯಾಸ್ ಅವನೀಶ್ ಮತ್ತು ಆತನ ಸಹಚರ ರಾಕೇಶ್ ದುಜಾನಾ...
Published: 28th May 2022 11:56 PM | Last Updated: 28th May 2022 11:56 PM | A+A A-

ಸಾಂದರ್ಭಿಕ ಚಿತ್ರ
ಲಖನೌ: ಘಾಜಿಯಾಬಾದ್ ಪೊಲೀಸರು ಶುಕ್ರವಾರ ತಡರಾತ್ರಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ನಟೋರಿಯಸ್ ಕ್ರಿಮಿನಲ್ ಗಳಾದ ಬಿಲ್ಲು ದುಜಾನಾ ಅಲಿಯಾಸ್ ಅವನೀಶ್ ಮತ್ತು ಆತನ ಸಹಚರ ರಾಕೇಶ್ ದುಜಾನಾ ಅವರನ್ನು ಎನ್ ಕೌಂಟರ್ ಮಾಡಿದ್ದಾರೆ.
ದೆಹಲಿ-ಎನ್ಸಿಆರ್ನಲ್ಲಿ ಈ ಇಬ್ಬರೂ ದುಷ್ಕರ್ಮಿಗಳು ಏಪ್ರಿಲ್ 20 ರಂದು ಗ್ರೇಟರ್ ನೋಯ್ಡಾದ ಕವಿನಗರ ಪ್ರದೇಶದ ವೇವ್ ಸಿಟಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಜೋಡಿ ಕೊಲೆ ನಂತರ ಈ ಹಂತಕರು ತಲೆಮರೆಸಿಕೊಂಡಿದ್ದರು.
ಮೂಲಗಳ ಪ್ರಕಾರ, ಈ ಇಬ್ಬರು ಕ್ರಿಮಿನಲ್ ಗಳ ತಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಬಿಲ್ಲು ದುಜಾನಾ ವಿರುದ್ಧ ದೆಹಲಿ ಜೈಲಿನಲ್ಲಿರುವ ತನ್ನ ಹಿಂಬಾಲಕರ ಮೂಲಕ ಮದನ್ ಸ್ವೀಟ್ಸ್ನಿಂದ ಎರಡು ಕೋಟಿ ರೂಪಾಯಿಗೆ ಸುಲಿಗೆಗೆ ಯತ್ನಿಸಿದ ಆರೋಪವೂ ಇದೆ. ಮಾಲೀಕರು ಹಣ ನೀಡಲು ವಿಫಲವಾದಾಗ ಅವರ ರೆಸ್ಟೋರೆಂಟ್ ಮೇಲೆ ದುಜಾನಾ ಸಹಚರರು ದಾಳಿ ಮಾಡಿದ್ದರು.
2021 ರ ಅಕ್ಟೋಬರ್ನಲ್ಲಿ ದೆಹಲಿಯ ಮಂಡೋಲಿ ಜೈಲಿನಿಂದ ಪೆರೋಲ್ ಮೇಲೆ ಬಿಲ್ಲು ದುಜಾನಾ ಹೊರಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತೊಬ್ಬ ಕ್ರಿಮಿನಲ್ ರಾಕೇಶ್ ದುಜಾನಾ ತಲೆಗೆ 50,000 ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ರಾಕೇಶ್ ವಿರುದ್ಧ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಇಂದಿರಾಪುರಂ ಪೊಲೀಸರು ಬಿಲ್ಲುನನ್ನು ಗುಂಡಿಕ್ಕಿ ಹತ್ಯೆ ಮಾಡಿದರೆ, ಮಧುಬನ್ ಬಾಪುಧಾಮ್ ಪೊಲೀಸರು ರಾಕೇಶ್ ನನ್ನು ಎನ್ಕೌಂಟರ್ ಮಾಡಿದ್ದಾರೆ ಎಂದು ಗಾಜಿಯಾಬಾದ್ ಎಸ್ಎಸ್ಪಿ ಮುನಿರಾಜ್ ಅವರು ಹೇಳಿದ್ದಾರೆ.