ಮಾಂಸಹಾರ ಸೇವಿಸಿದ್ದರಿಂದ ಗಣಪತಿ ದೇವಸ್ಥಾನದ ಒಳಗೆ ಹೋಗದೆ ಹೊರಗಿನಿಂದ ದರ್ಶನ ಪಡೆದ ಎನ್ ಸಿಪಿ ನಾಯಕ ಶರದ್ ಪವಾರ್!
ಪುಣೆಯ ಪ್ರಸಿದ್ಧ ದಗ್ದುಶೇತ್ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಾಂಸಾಹಾರ ಸೇವಿಸಿದ್ದರಿಂದ ದೇವಸ್ಥಾನ ಆವರಣದ ಹೊರಗಿನಿಂದ ದರ್ಶನ ಪಡೆದರು ಎಂದು ಪಕ್ಷದ ಪುಣೆ ಘಟಕದ ಅಧ್ಯಕ್ಷ ಪ್ರಶಾಂತ್ ಜಗತಾಪ್ ಹೇಳಿದ್ದಾರೆ.
Published: 28th May 2022 03:44 PM | Last Updated: 28th May 2022 04:07 PM | A+A A-

ಶರದ್ ಪವಾರ್
ಪುಣೆ: ಪುಣೆಯ ಪ್ರಸಿದ್ಧ ದಗ್ದುಶೇತ್ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಾಂಸಾಹಾರ ಸೇವಿಸಿದ್ದರಿಂದ ದೇವಸ್ಥಾನ ಆವರಣದ ಹೊರಗಿನಿಂದ ದರ್ಶನ ಪಡೆದರು ಎಂದು ಪಕ್ಷದ ಪುಣೆ ಘಟಕದ ಅಧ್ಯಕ್ಷ ಪ್ರಶಾಂತ್ ಜಗತಾಪ್ ಹೇಳಿದ್ದಾರೆ.
ದಗದುಶೇಠ ಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ಜಮೀನನ್ನು ದೇವಸ್ಥಾನದ ಟ್ರಸ್ಟ್ಗೆ ಹಸ್ತಾಂತರಿಸಬೇಕೆಂಬ ಬಹುದಿನಗಳ ಬೇಡಿಕೆ ಹಿನ್ನೆಲೆಯಲ್ಲಿ ಪವಾರ್ ಶುಕ್ರವಾರ ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಈ ಭೂಮಿ ರಾಜ್ಯ ಗೃಹ ಇಲಾಖೆಗೆ ಸೇರಿದ್ದು, ಪ್ರಸ್ತುತ ಎನ್ಸಿಪಿ ನಾಯಕ ದಿಲೀಪ್ ವಾಲ್ಸೆ ಪಾಟೀಲ್ ನೇತೃತ್ವ ವಹಿಸಿದ್ದಾರೆ.
ಪವಾರ್ ಅವರು ದೇವಸ್ಥಾನದ ಆವರಣ ಪ್ರವೇಶಿಸದೇ ಹೊರಗಿನಿಂದ ದರ್ಶನ ಪಡೆದಿದ್ದರಿಂದ ಹಲವಾರು ಪ್ರಶ್ನೆಗಳು ನೆರೆದಿದ್ದವರಲ್ಲಿ ಎದ್ದಿದ್ದವು. ಅದಕ್ಕೆ ಸುದ್ದಿಗಾರರಿಗೆ ಉತ್ತರಿಸಿದ ಪ್ರಶಾಂತ್ ಜಗ್ತಪ್, ದೇವಸ್ಥಾನಕ್ಕೆ ಹೋಗಲು ಯೋಜಿಸಿದ್ದರು. ಆದರೆ, ಪವಾರ್ ಸಾಹೇಬ್ ಅವರು ಹಿಂದಿನ ದಿನ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದರಿಂದ ದೇವಸ್ಥಾನದ ಒಳಗೆ ಹೋಗುವುದು ಸೂಕ್ತವಲ್ಲ ಎಂದು ಭಾವಿಸಿ ಹೊರಗಿನಿಂದ ದರ್ಶನ ಪಡೆದರು ಎಂದರು.
ನಂತರ ನಗರದಲ್ಲಿದ್ದ ಉಪಮುಖ್ಯಮಂತ್ರಿ ಹಾಗೂ ಎನ್ಸಿಪಿಯ ಹಿರಿಯ ನಾಯಕ ಅಜಿತ್ ಪವಾರ್ ಅವರನ್ನು ಈ ಕುರಿತು ಪ್ರಶ್ನಿಸಿದಾಗ, ಯಾಕೆ ಇಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ದೇವರ ದರ್ಶನ ಮಾಡಿದರೆ ಇಂತಹ ಪ್ರಶ್ನೆ ಮಾಡದಿದ್ದರೆ ನಾಸ್ತಿಕ ಎಂಬ ಹಣೆಪಟ್ಟಿ ಎಂದು ಸಿಡಿಮಿಡಿಗೊಂಡರು.
ಎಷ್ಟೋ ಸಲ ಜನರು ಮಾಂಸಾಹಾರ ಸೇವಿಸಿ ಬೇರೆಯವರಿಗೆ ಹೇಳದೇ ದೇವಸ್ಥಾನದ ಒಳಗೆ ಹೋಗಿ ದರ್ಶನ ಪಡೆಯುತ್ತಾರೆ, ಅದನ್ನು ಬಹಿರಂಗವಾಗಿ ಹೇಳುವವರೂ ಇದ್ದಾರೆ. ದೇವಸ್ಥಾನದ ಹೊರಗಿನಿಂದಲೂ ದರ್ಶನ ಪಡೆಯಬಹುದು. ಸಾಂಕ್ರಾಮಿಕ ರೋಗದ ನಡುವೆ ನಿರ್ಬಂಧಗಳಿಂದಾಗಿ, ಜನರು ದೇವಾಲಯದ ಮೆಟ್ಟಿಲುಗಳಿಂದಲೇ ದರ್ಶನ ಪಡೆಯುತ್ತಿದ್ದರು ಎಂದರು.