ದಕ್ಷಿಣ ಭಾರತದ ವಿದ್ಯಾರ್ಥಿಗಳು ಈ ಬಾರಿ 2017ಕ್ಕಿಂತ ಕಳಪೆ ಸಾಧನೆ ಮಾಡಿದ್ದಾರೆ: ಸಮೀಕ್ಷೆ
ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಶಾಲೆಗಳ ಎಲ್ಲಾ ತರಗತಿಗಳ ವಿದ್ಯಾರ್ಥಿಗಳ ಕಾರ್ಯಕ್ಷಮತೆಯು 2017ಕ್ಕಿಂತ ಕಳಪೆಯಾಗಿದೆ ಎಂದು ರಾಷ್ಟ್ರೀಯ ಸಾಧನೆ ಸಮೀಕ್ಷೆ(NAS) ತಿಳಿಸಿದೆ.
Published: 28th May 2022 11:05 PM | Last Updated: 28th May 2022 11:05 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಶಾಲೆಗಳ ಎಲ್ಲಾ ತರಗತಿಗಳ ವಿದ್ಯಾರ್ಥಿಗಳ ಕಾರ್ಯಕ್ಷಮತೆಯು 2017ಕ್ಕಿಂತ ಕಳಪೆಯಾಗಿದೆ ಎಂದು ರಾಷ್ಟ್ರೀಯ ಸಾಧನೆ ಸಮೀಕ್ಷೆ(NAS) ತಿಳಿಸಿದೆ.
2021 ರಲ್ಲಿ ಇಂಗ್ಲಿಷ್ ಹೊರತುಪಡಿಸಿ ಹೆಚ್ಚಿನ ವಿಷಯಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಕಳಪೆ ಸಾಧನೆ ಮಾಡಿದ್ದಾರೆ ಎಂದು ಎನ್ಎಎಸ್ ಹೇಳಿದೆ.
ಇದನ್ನು ಓದಿ: ಬಿಬಿಎಂಪಿ ಶಾಲೆಗಳ SSLC ಪರೀಕ್ಷೆ ಫಲಿತಾಂಶ ತೀವ್ರ ಕುಸಿತ: ಬೋಧನೆಗೆ ಹೊಸ ಮಾದರಿ ಅಳವಡಿಕೆ ಬಗ್ಗೆ ಚಿಂತನೆ
ಹೆಚ್ಚಿನ ವಿಷಯಗಳಲ್ಲಿ 500 ಸ್ಕೇಲ್ಡ್ ಸ್ಕೋರ್ಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಆದರೆ ದಕ್ಷಿಣ ಭಾರತ ನಾಲ್ಕು ರಾಜ್ಯಗಳಲ್ಲಿ 10ನೇ ತರಗತಿಯ ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಮೂಲ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ.
ರಾಜ್ಯವಾರು ವರದಿಯ ಪ್ರಕಾರ, ಕೇರಳದಲ್ಲಿ ಭಾಷಾ ವಿಷಯದಲ್ಲಿ 3ನೇ ತರಗತಿ ಅಂಕಗಳು 349 ರಿಂದ 342 ಕ್ಕೆ ಇಳಿದಿದೆ ಎಂದು ತೋರಿಸುತ್ತದೆ. ಗಣಿತದ ಅಂಕಗಳು 340 ರಿಂದ 313 ಕ್ಕೆ ಇಳಿದಿದ್ದು, ಪರಿಸರ ಅಧ್ಯಯನದಲ್ಲಿ 346 ರಿಂದ 318 ಕ್ಕೆ ಇಳಿಕೆಯಾಗಿದೆ. ಇದೆ ಪ್ರವೃತ್ತಿ ಐದು, ಎಂಟು ಮತ್ತು 10ನೇ ತರಗತಿಗಳ ಅಂಕಗಳಲ್ಲಿ ಕಂಡುಬಂದಿದೆ.
ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ವಿದ್ಯಾರ್ಥಿಗಳು ಇದೇ ರೀತಿಯ ಇಳಿಮುಖ ಫಲಿತಾಂಶಗಳನ್ನು ದಾಖಲಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.