ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ ಬಿಜೆಪಿಯ ನೂಪುರ್ ಶರ್ಮಾ ವಿರುದ್ಧ ಪ್ರಕರಣ
ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ವಿರುದ್ಧ ಮುಂಬೈ ನಲ್ಲಿ ಪ್ರಕರಣ ದಾಖಲಾಗಿದೆ.
Published: 29th May 2022 03:23 PM | Last Updated: 29th May 2022 03:23 PM | A+A A-

ಬಿಜೆಪಿ ಸಾಂದರ್ಭಿಕ ಚಿತ್ರ
ಮುಂಬೈ: ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ವಿರುದ್ಧ ಮುಂಬೈ ನಲ್ಲಿ ಪ್ರಕರಣ ದಾಖಲಾಗಿದೆ.
ಪೈಡೋನಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಪ್ರಕರಣ ದಾಖಲಾಗಿದ್ದು, 285ಎ, 153ಎ, 505 ಬಿ ಕೇಸ್ ದಾಖಲಿಸಲಾಗಿದೆ. ಭಾರತೀಯ ಸುನ್ನಿ ಮುಸ್ಲಿಮರಿಗಾಗಿ ಇರುವ ರಾಜಾ ಅಕಾಡೆಮಿ ನೂಪುರ್ ಶರ್ಮಾ ವಿರುದ್ಧ ದೂರು ನೀಡಿತ್ತು.
ಇದಕ್ಕೂ ಮುನ್ನ ಶರ್ಮಾ ಮಾತನಾಡಿ, ಟಿವಿ ಚಾನಲ್ ಒಂದರಲ್ಲಿ ಇತ್ತಿಚೆಗೆ ಗ್ಯಾನ್ ವಾಪಿ ಕುರಿತು ನಡೆದಿದ್ದ ಚರ್ಚೆಯ ಕಾರ್ಯಕ್ರಮದ ಎಡಿಟೆಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದ್ದು ತಮಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ, ಅತ್ಯಾಚಾರದ ಬೆದರಿಕೆಗಳು ಬರುತ್ತಿದೆ ಎಂದು ಆರೋಪಿಸಿದ್ದರು.
fact-checker ಹೆಸರಿನಲ್ಲಿ ಎಡಿಟ್ ಮಾಡಲಾಗಿದ್ದ ವಿಡಿಯೋವನ್ನು ಹಂಚಿಕೆ ಮಾಡಲಾಗಿದ್ದು, ಆಗಿನಿಂದಲೂ ತಮಗೆ, ತಮ್ಮ ಕುಟುಂಬದವರಿಗೆ ಜೀವ ಬೆದರಿಕೆ, ಅತ್ಯಾಚಾರದ ಬೆದರಿಕೆಗಳು ಬರುತ್ತಿದೆ ಎಂದು ನೂಪುರ್ ಶರ್ಮಾ ಹೇಳಿದ್ದಾರೆ.
ಆಲ್ಟ್ ನ್ಯೂಸ್ ನ ಮಾಲೀಕರು ತನ್ನ ವಿರುದ್ಧದ ಟ್ರೋಲ್ ಗಳನ್ನು ಉತ್ತೇಜಿಸಲು ಎಡಿಟ್ ಮಾಡಲಾಗಿರುವ ವಿಡಿಯೋವನ್ನು ಪ್ರಕಟಿಸಿದ್ದರು. ಅಲ್ಲಿಂದಲೇ ಇವೆಲ್ಲವೂ ಪ್ರಾರಂಭವಾಗಿದ್ದು, ನಮಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಏನಾದರೂ ಆದಲ್ಲಿ ಅದಕ್ಕೆ ಆಲ್ಟ್ ನ್ಯೂಸ್ ನ ಮಾಲಿಕರೇ ಹೊಣೆ ಎಂದು ನೂಪುರ್ ಶರ್ಮಾ ದೂರಿದ್ದಾರೆ.