
ಟಿಟಿಡಿ
ತಿರುಪತಿ: ತಿರುಪತಿಯ ಶ್ರೀವಾರಿ ಪ್ರಸಾದಕ್ಕೆ ಕಳಪೆ ಗುಣಮಟ್ಟದ ಗೋಡಂಬಿ ಪೂರೈಕೆ ಮಾಡುತ್ತಿದ್ದ ಕಂಪನಿಯ ಟೆಂಡರ್ ನ್ನು ಟಿಟಿಡಿ ರದ್ದುಗೊಳಿಸಿದೆ.
ಯಾತ್ರಾರ್ಥಿಗಳು, ಭಕ್ತಾದಿಗಳು ದೂರು ನೀಡಿದ್ದರ ಪರಿಣಾಮ ಟಿಟಿಡಿ ಏಕಾಏಕಿ ಮೂರು ಕಂಪನಿಗಳು ಪೂರೈಕೆ ಮಾಡುತ್ತಿದ್ದ ಗೊಡಂಬಿ ಗೋದಾಮಿನಲ್ಲಿ ಗುಣಮಟ್ಟದ ತಪಾಸಣೆ ಕೈಗೊಂಡಿತ್ತು.
ಈ ಪೈಕಿ ಒಂದು ಕಂಪನಿಯಿಂದ ಪೂರೈಕೆಯಾಗುತ್ತಿದ್ದ ಗೋಡಂಬಿ ಕಳಪೆ ಗುಣಮಟ್ಟವನ್ನು ಹೊಂದಿರುವುದು ಪತ್ತೆಯಾಗಿದ್ದು ಟಿಟಿಡಿಯ ಅಧ್ಯಕ್ಷರು ಕಂಪನಿಯ ಟೆಂಡರ್ ನ್ನು ರದ್ದುಪಡಿಸುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ಮಾದರಿಯಲ್ಲಿ, ಏಲಕ್ಕಿಯಲ್ಲೂ ಸುಗಂಧ ಕಡಿಮೆಯಾಗಿದ್ದು, ಏಲಕ್ಕಿ ಮಾದರಿಯನ್ನು ಗುಣಮಟ್ಟದ ಪರೀಕ್ಷೆಗಾಗಿ ಸರ್ಕಾರಿ ಪ್ರಯೋಗಾಲಯಗಳಿಗೆ ಕಳಿಸಲು ಟಿಟಿಡಿ ಅಧ್ಯಕ್ಷರು ಸೂಚನೆ ನೀಡಿದ್ದು, ತಪಾಸಣೆ ವೇಳೆ ಪ್ರಸಾದಕ್ಕೆ ಬಳಕೆ ಮಾಡುವ ತುಪ್ಪದ ಗುಣಮಟ್ಟವೂ ಕಳಪೆಯದ್ದಾಗಿರುವುದು ಬಹಿರಂಗಗೊಂಡಿದೆ.
ಟಿಟಿಡಿ ಪ್ರಸಾದ ತಯಾರಿಕೆಗಾಗಿ ಗೋಡಂಬಿ, ತುಪ್ಪ, ಏಲಕ್ಕಿಗಳಿಗೆ ವಾರ್ಷಿಕ 500 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂಡು ತಿಳಿಸಿದ್ದಾರೆ.