ಬಿಜೆಪಿ ಸೇರುವುದಿಲ್ಲ ಎಂದ ಹಾರ್ದಿಕ್ ಪಟೇಲ್, ಎಎಪಿ ವಿರುದ್ಧ ವಾಗ್ದಾಳಿ
ಮಾಜಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ತಾವು ಸೋಮವಾರ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Published: 30th May 2022 12:59 AM | Last Updated: 30th May 2022 01:16 PM | A+A A-

ಹಾರ್ದಿಕ್ ಪಟೇಲ್
ಅಹಮದಾಬಾದ್: ಮಾಜಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ತಾವು ಸೋಮವಾರ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ನಾನು ನಾಳೆ ಬಿಜೆಪಿಗೆ ಸೇರುವುದಿಲ್ಲ... ಅಂತಹದ್ದೇನಾದರೂ ನಡೆದರೆ ನಿಮಗೆ ತಿಳಿಸುತ್ತೇನೆ" ಎಂದು ಹಾರ್ದಿಕ್ ಪಟೇಲ್ ಅವರು ಭಾನುವಾರ ಪಿಟಿಐಗೆ ತಿಳಿಸಿದ್ದಾರೆ.
ಇದನ್ನು ಓದಿ: ನಿಮಗೆ ರಾಮನ ಮೇಲೆ ಯಾಕೆ ಇಷ್ಟೊಂದು ದ್ವೇಷ?: ಕಾಂಗ್ರೆಸ್ ವಿರುದ್ಧ ಹಾರ್ದಿಕ್ ಪಟೇಲ್ ತೀವ್ರ ವಾಗ್ದಾಳಿ
ಇನ್ನು ಪಂಜಾಬಿ ಗಾಯಕನ ಹತ್ಯೆಗೆ ಸಂಬಂಧಿಸಿದಂತೆ ಭಗವಂತ್ ಮಾನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಟೇಲ್, "ಯಾವುದೇ ಸರ್ಕಾರವು ಅವ್ಯವಸ್ಥೆಯ ಕೈಗೆ ಹೋಗುವುದು ಎಷ್ಟು ಮಾರಕ ಎಂದು ಪಂಜಾಬ್ ನಲ್ಲಿ ನಡೆದ ಅತ್ಯಂತ ದುಃಖಕರ ಘಟನೆಯಿಂದ ಸ್ಪಷ್ಟವಾಗಿದೆ. ಕೆಲವು ದಿನಗಳ ಹಿಂದೆ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರನ ಬರ್ಬರ ಹತ್ಯೆ ಮತ್ತು ಪ್ರಸಿದ್ಧ ಗಾಯಕ ಸಿಧು ಮೂಸವಾಲೆ ಅವರ ಹತ್ಯೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಮತ್ತು ದೆಹಲಿಯಿಂದ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ನಡೆಸುತ್ತಿರುವ ಜನರು ತಾವು ಪಂಜಾಬ್ಗೆ ನೋವು ನೀಡಲು ಕಾಂಗ್ರೆಸ್ನಂತಹ ಮತ್ತೊಂದು ಪಕ್ಷವಾಗಬೇಕೇ ಅಥವಾ ಜನರಿಗೆ ನಿಜವಾಗಿಯೂ ಏನಾದರೂ ಮಾಡಬೇಕೇ ಎಂದು ಯೋಚಿಸಬೇಕು. ಸಿಧು ಮೂಸೆವಾಲಾ ಅವರಿಗೆ ನನ್ನ ಶ್ರದ್ಧಾಂಜಲಿ" ಎಂದು ಹಾರ್ದಿಕ್ ಪಟೇಲ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.