ಸಿಧು ಮೂಸೆವಾಲಾ ಹತ್ಯೆ ಬೆನ್ನಲ್ಲೇ ಭದ್ರತೆ ಕೋರಿದ ಮತ್ತೊಬ್ಬ ಪಂಜಾಬಿ ಗಾಯಕ
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಭೀಕರ ಹತ್ಯೆಯ ಒಂದು ದಿನದ ನಂತರ ಮತ್ತೊಬ್ಬ ಪಂಜಾಬಿ ಗಾಯಕ ತನಗೂ ಕೊಲೆ ಬೆದರಿಕೆ ಇದೆ ಎಂದು ಬಹಿರಂಗಪಡಿಸಿದ್ದಾರೆ. ಮೂಲಗಳ ಪ್ರಕಾರ 31 ವರ್ಷದ ಮನ್ಕೀರ್ತ್ ಔಲಾಖ್ ಜೀವ...
Published: 31st May 2022 08:51 PM | Last Updated: 01st June 2022 01:16 PM | A+A A-

ಮನ್ಕೀರ್ತ್ ಔಲಾಖ್
ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಭೀಕರ ಹತ್ಯೆಯ ಒಂದು ದಿನದ ನಂತರ ಮತ್ತೊಬ್ಬ ಪಂಜಾಬಿ ಗಾಯಕ ತನಗೂ ಕೊಲೆ ಬೆದರಿಕೆ ಇದೆ ಎಂದು ಬಹಿರಂಗಪಡಿಸಿದ್ದಾರೆ. ಮೂಲಗಳ ಪ್ರಕಾರ 31 ವರ್ಷದ ಮನ್ಕೀರ್ತ್ ಔಲಾಖ್ ಜೀವ ಬೆದರಿಕೆಯನ್ನು ಉಲ್ಲೇಖಿಸಿ ತನ್ನ ಭದ್ರತೆಯನ್ನು ಹೆಚ್ಚಿಸುವಂತೆ ಪಂಜಾಬ್ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮೂಸೆವಾಲಾ ಹತ್ಯೆಯ ಹೊಣೆಯನ್ನು ಹೊತ್ತಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಪ್ರತಿಸ್ಪರ್ಧಿಯಾದ ದೇವಿಂದರ್ ಬಾಂಬಿಹಾ ಗ್ಯಾಂಗ್ನಿಂದ ಮನ್ಕೀರ್ತ್ ಔಲಾಖ್ ಅವರಿಗೆ ಕಳೆದ ತಿಂಗಳು ಬೆದರಿಕೆಗಳು ಬಂದಿದ್ದವು ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಪಂಜಾಬ್: ಭಾರೀ ಜನಸ್ತೋಮದ ನಡುವೆ ಸಿಧು ಮೂಸೆವಾಲ ಅಂತ್ಯಸಂಸ್ಕಾರ
ಸಿಧು ಮೂಸೆವಾಲಾ ಅವರು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ತಮ್ಮ ವಾಹನ ಚಲಾಯಿಸುತ್ತಿದ್ದಾಗ ಅವರ ಮೇಲೆ ಸ್ವಯಂಚಾಲಿತ ಅಸಾಲ್ಟ್ ರೈಫಲ್ನಿಂದ ಕನಿಷ್ಠ 30 ಬಾರಿ ಗುಂಡು ಹಾರಿಸಲಾಗಿತ್ತು. ರಾಜ್ಯ ಸರ್ಕಾರವು ಅವರಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದ ನಂತರ ಈ ಘಟನೆ ಜರುಗಿತ್ತು.
ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಮೂಸ್ ವಾಲಾ ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬ್ರಾರ್, ದರೋಡೆಕೋರ ವಿಕ್ಕಿ ಮಿದ್ದುಖೇರಾ ಸಾವಿನ ಸೇಡು ತೀರಿಸಿಕೊಳ್ಳಲು ಮೂಸೆವಾಲಾರನ್ನ ಹತ್ಯೆ ಮಾಡಿರೋದಾಗಿದಾಗಿ ಫೇಸ್ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾನೆ.