ಹಾರ್ದಿಕ್ ಪಟೇಲ್ 'ಕಮಲ' ಹಿಡಿಯುವುದು ಖಚಿತ: ಗುಜರಾತ್ ಚುನಾವಣೆ ಬೆನ್ನಲ್ಲೇ ಬಿಜೆಪಿಗೆ ಹೆಚ್ಚಿದ ಬಲ
ಇತ್ತೀಚಿಗೆ ಕಾಂಗ್ರೆಸ್ನಿಂದ ಹೊರ ಬಂದ ಗುಜರಾತ್ನ ಯುವ ಹೋರಾಟಗಾರ, ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಅವರು ಬಿಜೆಪಿ ಸೇರುವುದು ಮಂಗಳವಾರ ಖಚಿತವಾಗಿದೆ.
Published: 31st May 2022 01:10 PM | Last Updated: 31st May 2022 01:38 PM | A+A A-

ಹಾರ್ದಿಕ್ ಪಟೇಲ್
ಅಹಮದಾಬಾದ್: ಇತ್ತೀಚಿಗೆ ಕಾಂಗ್ರೆಸ್ನಿಂದ ಹೊರ ಬಂದ ಗುಜರಾತ್ನ ಯುವ ಹೋರಾಟಗಾರ, ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಅವರು ಬಿಜೆಪಿ ಸೇರುವುದು ಮಂಗಳವಾರ ಖಚಿತವಾಗಿದೆ.
ಗುಜರಾತ್ ರಾಜ್ಯದ ಬಿಜೆಪಿ ವಕ್ತಾರ ಯಗ್ನೇಶ್ ದಾವೆ ಅವರು ಈ ಕುರಿತು ಮಾಹಿತಿ ನೀಡಿದ್ದು, ಜೂನ್ 2 ರಂದು ಹಾರ್ದಿಕ್ ಪಟೇಲ್ ಅವರು, ಗುಜರಾತ್ ರಾಜ್ಯದ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಲಿದ್ದಾರೆಂದು ಹೇಳಿದ್ದಾರೆ.
ಕಾಂಗ್ರೆಸ್ ತೊರೆದ ಬಳಿಕ ಹೇಳಿಕೆ ನೀಡಿದ್ದ ಹಾರ್ದಿಕ್ ಪಟೇಲ್ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ನಿಮಗೆ ರಾಮನ ಮೇಲೆ ಯಾಕೆ ಇಷ್ಟೊಂದು ದ್ವೇಷ?: ಕಾಂಗ್ರೆಸ್ ವಿರುದ್ಧ ಹಾರ್ದಿಕ್ ಪಟೇಲ್ ತೀವ್ರ ವಾಗ್ದಾಳಿ
ಮಾಜಿ ಕೇಂದ್ರ ಸಚಿವ ಮತ್ತು ಗುಜರಾತ್ ಕಾಂಗ್ರೆಸ್ ನಾಯಕರೊಬ್ಬರು ರಾಮಮಂದಿರಕ್ಕಾಗಿ ಇಟ್ಟಿರುವ ಇಟ್ಟಿಗೆಗಳ ಮೇಲೆ ನಾಯಿಗಳು ಮೂತ್ರ ವಿಸರ್ಜಿಸುತ್ತವೆ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತದೆ, ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ತರಲು ಪ್ರಯತ್ನಿಸುತ್ತದೆ ಎಂದು ನಾನು ಈ ಮೊದಲೇ ಹೇಳಿದ್ದೆ ಎಂದು ಹೇಳಿದ್ದರು.
ಕಾಂಗ್ರೆಸ್ ಮತ್ತು ಪಕ್ಷದ ನಾಯಕರಿಗೆ ಭಗವಾನ್ ಶ್ರೀರಾಮನ ಮೇಲೆ ಯಾಕೆ ಇಷ್ಟೊಂದು ದ್ವೇಷ? ಶತಮಾನಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ಆದರೂ ಕಾಂಗ್ರೆಸ್ ನಾಯಕರು ಭಗವಾನ್ ಶ್ರೀರಾಮನ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ ಎಂದು ಟೀಕಿಸಿದ್ದರು.