ಕಪ್ಪು ಮಸಿ, ಮಾರಣಾಂತಿಕ ಹಲ್ಲೆಯಿಂದ ರೈತರ, ಹೋರಾಟಗಾರರ ಧ್ವನಿ ಅಡಗಿಸಲು ಸಾಧ್ಯವಿಲ್ಲ: ರಾಕೇಶ್ ಟಿಕಾಯತ್
ಕಪ್ಪು ಮಸಿ ಮತ್ತು ಮಾರಣಾಂತಿಕ ದಾಳಿಗಳು ರೈತರು ಮತ್ತು ಕಾರ್ಮಿಕರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
Published: 31st May 2022 03:39 PM | Last Updated: 31st May 2022 04:33 PM | A+A A-

ರಾಕೇಶ್ ಟಿಕಾಯತ್
ನೋಯ್ಡಾ: ಕಪ್ಪು ಮಸಿ ಮತ್ತು ಮಾರಣಾಂತಿಕ ದಾಳಿಗಳು ರೈತರು ಮತ್ತು ಕಾರ್ಮಿಕರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ये काली स्याही व जानलेवा हमला इस देश के किसान, मजदूर,दलितों,शोषितों,पिछड़ो,शूद्रों,आदिवासी की आवाज को नही दबा सकता ।
— Rakesh Tikait (@RakeshTikaitBKU) May 30, 2022
यह लड़ाई अंतिम साँस तक जारी रहेगी ।@ANI @PTI_News @DainikBhaskar @OfficialBKU @Kisanektamorcha pic.twitter.com/jUpdmY01DR
ಬೆಂಗಳೂರಿನಲ್ಲಿ ತಮ್ಮ ಮೇಲೆ ನಡೆದ ಮಸಿ ದಾಳಿ ಹಿನ್ನಲೆಯಲ್ಲಿ ಮಾತನಾಡಿದ ಅವರು, 'ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ತಮ್ಮ ಮೇಲಿನ ದಾಳಿ ನಡೆದಿದೆ. ಈ ದಾಳಿಗೆ ಸ್ಥಳೀಯ ಪೊಲೀಸರೇ ಹೊಣೆಗಾರರು. ಕಪ್ಪು ಮಸಿ ಮತ್ತು ಮಾರಣಾಂತಿಕ ದಾಳಿಯು ಈ ದೇಶದ ರೈತರು, ಕಾರ್ಮಿಕರು, ದಲಿತರು, ಶೋಷಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕೊನೆಯುಸಿರು ಇರುವವರೆಗೂ ಹೋರಾಟ ಮುಂದುವರಿಯುತ್ತದೆ" ಎಂದು ಟಿಕಾಯತ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ: ಮೂವರ ಬಂಧನ – ಆರಗ ಜ್ಞಾನೇಂದ್ರ
ಕರ್ನಾಟಕ ರಾಜಧಾನಿಯ ಗಾಂಧಿ ಭವನದಲ್ಲಿ ರೈತ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಕೇಶ್ ಟಿಕಾಯತ್ ಸೇರಿದಂತೆ ಹಲವು ರೈತ ಮುಖಂಡರು ಪಾಲ್ಗೊಂಡಿದ್ದರು. ಈ ವೇಳೆ ಕೆಲ ವ್ಯಕ್ತಿಗಳು ಟಿಕಾಯತ್ ಮೇಲೆ ಮಸಿ ಎಸೆದಿದ್ದು, ಹಲ್ಲೆ ಮಾಡಿದ್ದರು. ನಂತರ ಸಂಘಟಕರು ಹಾಗೂ ದುಷ್ಕರ್ಮಿಗಳು ಪ್ಲಾಸ್ಟಿಕ್ ಕುರ್ಚಿಗಳಿಂದ ಪರಸ್ಪರ ಹಲ್ಲೆ ನಡೆಸಿ ಕೊಂಡಿದ್ದಾರೆ.
ಸಂಘಟಕರ ಪ್ರಕಾರ, ಪತ್ರಿಕಾಗೋಷ್ಠಿಯನ್ನು ಒಳಗೊಂಡ ಕಾರ್ಯಕ್ರಮವನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕುಟುಕು ಕಾರ್ಯಾಚರಣೆಯ ನಂತರ ಅವರ ಮೇಲಿನ "ಅನುಮಾನಗಳನ್ನು ನಿವಾರಿಸಲು" ಕರೆಯಲಾಗಿತ್ತು. ಇದಕ್ಕೆ ಟಿಕಾಯತ್ ಅವರನ್ನು ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಕಿಡಿಗೇಡಿಗಳು ಪತ್ರಕರ್ತರಂತೆ ಕಾಣಿಸಿಕೊಂಡು ಏಕಾಏಕಿ ಟಿಕಾಯತ್ ಮೇಲೆ ಹಲ್ಲೆ ಮಾಡಿದ್ದಾರೆ. ಅವರಲ್ಲಿ ಒಬ್ಬರು ಟಿಕಾಯತ್ ಅವರ ಮುಂದಿದ್ದ ಮಾಧ್ಯಮವೊಂದರ ಮೈಕ್ರೊಫೋನ್ ಹೊಂದಿಸಲು ವೇದಿಕೆಯ ಮೇಲೆ ಹೋಗಿ ಏಕಾಏಕಿ ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಇನ್ನೊಬ್ಬ ವ್ಯಕ್ತಿ ಟಿಕೈತ್ ಮೇಲೆ ಶಾಯಿ ಎಸೆದನು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತ ನಾಯಕರಿಂದ ವಂಚನೆ ಆರೋಪ: ಸ್ಪಷ್ಟೀಕರಣ ಸುದ್ದಿಗೋಷ್ಠಿಯಲ್ಲಿ ಹೈಡ್ರಾಮಾ, ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ!!
ಮೂವರ ಬಂಧನ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಬಿಜೆಪಿ ನಾಯಕರ ಪ್ರಚೋದನೆಯಿಂದಲೇ ಹಲ್ಲೆ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾವು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ನಾನು ಈ ಕೃತ್ಯವನ್ನು ಖಂಡಿಸುತ್ತೇನೆ. ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಆದರೆ ಈ ಘಟನೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಅವರು ಹೇಳಿದರು.
ವಿಪಕ್ಷಗಳ ಖಂಡನೆ
ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ಸೇರಿದಂತೆ ವಿರೋಧ ಪಕ್ಷಗಳು ಘಟನೆಯನ್ನು ಖಂಡಿಸಿವೆ ಮತ್ತು ತಪ್ಪಿತಸ್ಥರ ವಿರುದ್ಧ ತಕ್ಷಣ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿವೆ.
ಇದನ್ನೂ ಓದಿ: ದಾಳಿಕೋರರ ಪೂರ್ವಾಪರವನ್ನು ಪೊಲೀಸರು ತನಿಖೆ ನಡೆಸಬೇಕು: ರಾಕೇಶ್ ಟಿಕಾಯತ್ ಆಗ್ರಹ
ಬಿಜೆಪಿಯ ತೀವ್ರ ಟೀಕಾಕಾರರಾದ ಟಿಕಾಯತ್, ಈಗ ರದ್ದಾದ ಮೂರು ಕೇಂದ್ರ ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧ 2020 ರ ರೈತರ ಪ್ರತಿಭಟನೆಯ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದಾರೆ. ಟಿಕಾಯತ್ ರ BKU ಸಂಯುಕ್ತ ಕಿಸಾನ್ ಮೋರ್ಚಾ (SKM) ಯ ಭಾಗವಾಗಿತ್ತು, ಇದು ದೆಹಲಿಯ ಗಡಿಯಲ್ಲಿ ಕೇಂದ್ರದ ವಿರುದ್ಧ ಒಂದು ವರ್ಷದಿಂದ ಸುದೀರ್ಘ ಪ್ರತಿಭಟನೆಯ ನೇತೃತ್ವ ವಹಿಸಿತ್ತು.