
ಸಾಂದರ್ಭಿಕ ಚಿತ್ರ
ನವದೆಹಲಿ: ಆರ್ ಬಿಐ ಮುಂದಿನ ದಿನಗಳಲ್ಲಿ ಮುದ್ರಿಸುವ ಹೊಸ ನೋಟುಗಳನ್ನು ನಕಲು ಮಾಡುವುದಕ್ಕೆ ಕಠಿಣವಾಗಿರಲಿವೆ.
ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಹೊಸ ನೋಟುಗಳು ಹೊಂದಿರಲಿದ್ದು, ನಾಲ್ಕು ವಿವಿಧ ರೀತಿಯ ಭದ್ರತಾ ಥ್ರೆಡ್ (ಉದ್ದದಲ್ಲಿ 24,70,000 ಕಿ.ಮೀ) ಗಳನ್ನು 100 ರೂಪಾಯಿ, 200 ರೂಪಾಯಿ, 500 ರೂಪಾಯಿ, 2000 ರೂಪಾಯಿಗಳ ನೋಟುಗಳಲ್ಲಿ ಅಳವಡಿಸಲಾಗುತ್ತದೆ.
ಗರಿಷ್ಠ ಹಾಗೂ ಮಧ್ಯಮ ಮುಖಬೆಲೆಯ ನೋಟುಗಳಲ್ಲಿ ಬಣ್ಣ ಬದಲಾಯಿಸುವ ಶಾಹಿಯನ್ನು (24,000 ಕೆ.ಜಿ ಹಾಗೂ 4,600 ಕೆ.ಜಿ) ಫಾಯಿಲ್ ಪ್ಯಾಚ್ (8,000 ಮಿಲಿಯನ್ ಪೀಸ್) ಮೂರು ವಿಧದ ಭದ್ರತಾ ಫೈಬರ್ (47,000 ಕೆ.ಜಿ) ಮೈಕ್ರೋ ಪರ್ಫೊರೇಷನ್ (ಒಂದು-ಬಾರಿ ತಂತ್ರಜ್ಞಾನ ವರ್ಗಾವಣೆ) ಪೇಪರ್ ಮತ್ತು ಶಾಹಿ ಆಧಾರಿತ ಟ್ಯಾಗಂಟ್ಸ್ (25,130 ಕೆ.ಜಿ ಮೈಕ್ರೀಸ್ಕೋಪಿಕ್ ಫಿಸಿಕಲ್ ಹಾಗೂ ಕೆಮಿಕಲ್ ಮಾರ್ಕರ್) ಗಳನ್ನು ನಕಲು ಮಾಡಲು ಕಠಿಣವಾಗುವಂತಹ ನೋಟುಗಳನ್ನು ಮುದ್ರಿಸಲು ಬಳಕೆ ಮಾಡಲಾಗುತ್ತದೆ.
ಭದ್ರತಾ ಥ್ರೆಡ್ ವೈಶಿಷ್ಟ್ಯಗಳ ಪೈಕಿ ಬಣ್ಣ ಬದಲಾಯಿಸುವ ಶಾಹಿಯನ್ನು ಅಳವಡಿಸಲು ಝೆಕ್ ರಿಪಬ್ಲಿಕ್ ನ ಆಪ್ಟಾಗ್ಲಿಯೊ ಲಿಮಿಟೆಡ್, ಇಟಾಲಿಯ ಫೆಡ್ರಿಗೋನಿ ಸ್ಪಾ, ಜರ್ಮನಿಯ ಪೇಪಿಯರ್ ಫ್ಯಾಬ್ರಿಕ್ ಲೂಯಿಸೆಂತಾಲ್ GmBH, ಆಸ್ಟ್ರಿಯಾದ ಹ್ಯೂಕ್ ಫಾಯಿಲೆನ್ GmbH, ಅಮೆರಿಕಾದ ಕ್ರೇನ್ & ಕೋ ಇಂಕ್, ಜರ್ಮನಿಯ ಗ್ಲೀಟ್ಸ್ಮನ್ ಸೆಕ್ಯುರಿಟಿ ಇಂಕ್ಸ್ ಮತ್ತು ಎಸ್ ಐಸಿಪಿಎ ಎಸ್ ಎ(ಸ್ವಿಟ್ಜರ್ಲೆಂಡ್) ಕಂಪನಿಗಳು ಬಿಡ್ ಗಳನ್ನು ಸಲ್ಲಿಸಿವೆ.
ಬಿಡ್ ಗಳನ್ನು 2017 ರ ಸೆಪ್ಟೆಂಬರ್ 1 ರಂದು ತೆರೆಯಲಾಗಿತ್ತು. ವಿದೇಶಿ ಪೂರೈಕೆದಾರರ ಸಂಸ್ಥೆಗಳಿಗೆ ಭೌತಿಕವಾಗಿ ತೆರಳಿ ತಪಾಸಣೆ ಮಾಡುವುದು ಹಲವು ಕಾರಣಗಳಿಂದ ನಡೆದಿರಲಿಲ್ಲ.