ಪಂಜಾಬ್: ಭಾರೀ ಜನಸ್ತೋಮದ ನಡುವೆ ಸಿಧು ಮೂಸೆವಾಲ ಅಂತ್ಯಸಂಸ್ಕಾರ
ಭಾನುವಾರ ಅಪರಿಚತರಿಂದ ಗುಂಡೇಟಿಗೆ ಬಲಿಯಾದ ಪಂಜಾಬಿ ಸುಪ್ರಸಿದ್ಧ ಗಾಯಕ ಹಾಗೂ ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಅಂತ್ಯಸಂಸ್ಕಾರ ಅವರ ಹುಟ್ಟೂರು ಮಾನ್ಸಾ ಜಿಲ್ಲೆಯ ಮೂಸಾ ಗ್ರಾದಲ್ಲಿ ಭಾರೀ ಜನಸ್ತೋಮದ ನಡುವೆ ಇಂದು ನೆರವೇರಿತು.
Published: 31st May 2022 03:19 PM | Last Updated: 31st May 2022 03:31 PM | A+A A-

ಸಿಧು ಮೂಸೆವಾಲ ಅಂತ್ಯಸಂಸ್ಕಾರ
ಚಂಡೀಗಢ: ಭಾನುವಾರ ಅಪರಿಚತರಿಂದ ಗುಂಡೇಟಿಗೆ ಬಲಿಯಾದ ಪಂಜಾಬಿ ಸುಪ್ರಸಿದ್ಧ ಗಾಯಕ ಹಾಗೂ ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಅಂತ್ಯಸಂಸ್ಕಾರ ಅವರ ಹುಟ್ಟೂರು ಮಾನ್ಸಾ ಜಿಲ್ಲೆಯ ಮೂಸಾ ಗ್ರಾದಲ್ಲಿ ಭಾರೀ ಜನಸ್ತೋಮದ ನಡುವೆ ಇಂದು ನೆರವೇರಿತು.
#WATCH | A huge crowd joins the funeral procession of singer Sidhu Moose Wala in Punjab's Mansa.
— ANI (@ANI) May 31, 2022
The last rites of the singer will be performed today. pic.twitter.com/LHkvjrUyVz
ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಅಂತ್ಯಸಂಸ್ಕಾರದ ವೇಳೆ ಪಾಲ್ಗೊಂಡರು. ಅನೇಕ ಮಂದಿ ಸಿಧು ಮೂಸೆವಾಲ ಪರ ಘೋಷಣೆ ಕೂಗಿದರು.
Punjab | Last rites of Punjabi singer and Congress leader Sidhu Moose Wala performed at his native village Moosa in Mansa district.
He was shot dead on May 29th. pic.twitter.com/g7w5sns1C7
— ANI (@ANI) May 31, 2022
ಇದಕ್ಕೂ ಮುನ್ನ ಬೆಳಗ್ಗೆ ಮಾನ್ಸಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿತ್ತು. ನಂತರ ಅವರ ಹುಟ್ಟೂರಾದ ಮಾನ್ಸಾ ಜಿಲ್ಲೆಯ ಮೂಸೆ ಗ್ರಾಮದ ಅವರ ನಿವಾಸದ ಮುಂದೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ಗ್ಯಾಂಗ್ ಗಳ ನಡುವಿನ ವೈಷಮ್ಯದಿಂದಾಗಿ ಸಿಧು ಮೂಸೆ ವಾಲಾ ಕೊಲೆ: ಪಂಜಾಬ್ ಡಿಜಿಪಿ ವಿಕೆ ಭಾವ್ರಾ
ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಸಿಧು ಮೂಸೆವಾಲ ಎಂದೇ ಖ್ಯಾತರಾಗಿದ್ದ ಶುಭ್ ದೀಪ್ ಸಿಂಗ್ ಸಿಧು ಅವರಿಗೆ ನೀಡಿದ್ದ ಭದ್ರತೆಯನ್ನು ಸರ್ಕಾರ ವಾಪಸ್ ಪಡೆಯುತ್ತಿದ್ದಂತೆ ಭಾನುವಾರ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟರು.