UPSC 2021 results, ಯುಪಿಎಸ್ ಸಿ 2021 ಫಲಿತಾಂಶ: ಹೆಣ್ಮಕ್ಳೇ ಸ್ಟ್ರಾಂಗು ಗುರು! ಟಾಪ್ 3 ಪಡೆದವರ ಅನಿಸಿಕೆಯೇನು?

2021 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹೆಣ್ಣುಮಕ್ಕಳೇ ಟಾಪ್ 3 ಸ್ಥಾನ ಗಳಿಸಿದ್ದಾರೆ. ಈ ಮೂಲಕ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎಂಬ ಮಾತನ್ನು ಸಾಬೀತುಪಡಿಸಿದ್ದಾರೆ.

Published: 31st May 2022 11:28 AM  |   Last Updated: 31st May 2022 01:33 PM   |  A+A-


St Stephens alumnus Shruti Sharma, who topped the Civil Services 2021 Exam and secured AIR 1, with her family members at her residence.

ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಶ್ರುತಿ ಶರ್ಮಾ ಕುಟುಂಬಸ್ಥರೊಂದಿಗೆ ಸಂಭ್ರಮಿಸುತ್ತಿರುವುದು

The New Indian Express

ನವದೆಹಲಿ: 2021 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹೆಣ್ಣುಮಕ್ಕಳೇ ಟಾಪ್ 3 ಸ್ಥಾನ ಗಳಿಸಿದ್ದಾರೆ. ಈ ಮೂಲಕ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎಂಬ ಮಾತನ್ನು ಸಾಬೀತುಪಡಿಸಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪ್ರಕಟಿಸಿದ ಅಂತಿಮ ಫಲಿತಾಂಶಗಳ ಪ್ರಕಾರ ಶ್ರುತಿ ಶರ್ಮಾ, ಅಂಕಿತಾ ಅಗರ್ವಾಲ್ ಮತ್ತು ಗಾಮಿನಿ ಸಿಂಗ್ಲಾ ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ರ್ಯಾಂಕ್ ಗಳಿಸಿದ್ದಾರೆ.

UPSC ಟಾಪರ್ ಶ್ರುತಿ ದೆಹಲಿ ಮೂಲದವರು. ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ (ಆನರ್ಸ್) ಪದವಿ ಪಡೆದರು. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯಕ್ಕೆ ಸೇರಿದ್ದರೂ ಕೂಡ UPSC ಆಕಾಂಕ್ಷಿಯಾಗಿ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ ಪ್ರವೇಶ ಪಡೆದಿದ್ದರಿಂದ ಅವರು ತಮ್ಮ ಕೋರ್ಸ್ ನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಈ ವರ್ಷ UPSC ತೇರ್ಗಡೆಯಾದ ಜಾಮಿಯಾದ 23 ವಿದ್ಯಾರ್ಥಿಗಳಲ್ಲಿ ಶ್ರುತಿ ಶರ್ಮ ಕೂಡ ಸೇರಿದ್ದಾರೆ. ಪ್ರಸ್ತುತ, ಅವರು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಎಂಎ ಸಮಾಜಶಾಸ್ತ್ರವನ್ನು ಓದುತ್ತಿದ್ದಾರೆ. ನನ್ನ ಮೊದಲ ಆದ್ಯತೆ ನಾನು ಮೂಲತಃ ಸೇರಿರುವ ಉತ್ತರ ಪ್ರದೇಶ ಕೇಡರ್ ಆಗಿದೆ. ಉತ್ತರ ಪ್ರದೇಶವು ದೊಡ್ಡ ಅವಕಾಶಗಳನ್ನು ಹೊಂದಿದೆ. ನಾನು ಕೆಲಸ ಮಾಡಲು ಬಯಸುವ ಹಲವು ಕ್ಷೇತ್ರಗಳನ್ನು ಹೊಂದಿದೆ ಎನ್ನುತ್ತಾರೆ.

ಎರಡನೇ ಶ್ರೇಯಾಂಕಿತೆ ಅಂಕಿತಾ, ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ, ಪ್ರಸ್ತುತ ಹರಿಯಾಣದ ಫರಿದಾಬಾದ್‌ನಲ್ಲಿ ಭಾರತೀಯ ಕಂದಾಯ ಸೇವೆಗಳಲ್ಲಿ (ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳು) ತರಬೇತಿ ಪಡೆಯುತ್ತಿದ್ದಾರೆ. ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ಅದರ ನಂತರ, ಅವರು ಕಾರ್ಪೊರೇಟ್ ಜಗತ್ತನ್ನು ಪ್ರವೇಶಿಸಿದರು. ಸ್ವಲ್ಪ ಕಾಲ ಕೆಲಸ ಮಾಡಿದ್ದರು. ಆದರೆ ತನ್ನ ನಾಗರಿಕ ಸೇವಾ ಕನಸುಗಳನ್ನು ಮುಂದುವರಿಸಲು ಕೆಲಸವನ್ನು ತೊರೆದರು. 2019 ರಲ್ಲಿ IRS ಗೆ ಸೇರಿ IAS ಗೆ ಸೇರುವ ಗುರಿಯನ್ನು ಮುಂದುವರಿಸಿದರು.

ಮೂರನೇ ರ್ಯಾಂಕ್ ಪಡೆದಿರುವ ಗಾಮಿನಿ ಚಂಡೀಗಢದ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಮಾಡಿದ್ದಾರೆ. ಸಿಂಗ್ಲಾ ಅವರ ಪೋಷಕರು ಹಿಮಾಚಲ ಪ್ರದೇಶ ಸರ್ಕಾರದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ಮಹಿಳೆಯರ ಬಗ್ಗೆ, "ಮಹಿಳೆಯರು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಏನನ್ನಾದರೂ ಸಾಧಿಸುವ ಸಾಮರ್ಥ್ಯವನ್ನು ಇದು ತೋರಿಸುತ್ತದೆ" ಎಂದು ಅವರು ಹೇಳುತ್ತಾರೆ.
ಪುರುಷರ ವಿಭಾಗದಲ್ಲಿ ಐಶ್ವರ್ಯಾ ವರ್ಮಾ ಟಾಪರ್: ನಾಲ್ಕನೇ ರ್ಯಾಂಕ್ ಪಡೆದಿರುವ ಐಶ್ವರ್ಯಾ ವರ್ಮಾ ಮಧ್ಯಪ್ರದೇಶದ ಉಜ್ಜಯಿನಿ ಮೂಲದವರಾಗಿದ್ದು, ಪುರುಷರ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಉತ್ಕರ್ಷ್ ದ್ವಿವೇದಿ ಐದನೇ ರ್ಯಾಂಕ್ ಪಡೆದಿದ್ದಾರೆ. 

ಟಾಪರ್ ಗಳು ಹೇಳುವುದೇನು?: UPSC 2021 ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿರುವ ಶ್ರುತಿ ಶರ್ಮಾ, ಪೋಷಕರು ಮತ್ತು ಸ್ನೇಹಿತರು ತನ್ನ ಪ್ರಯಾಣದಲ್ಲಿ ಸಾಕಷ್ಟು ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಪ್ರೋತ್ಸಾಹ ನೀಡಿದ್ದಾರೆ ಎಂದರು. ತಾನು ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ, ಅತ್ಯಂತ ಖುಷಿಯಾಗಿದೆ ಎಂದರು. 

"ನನ್ನ ಪ್ರಯಾಣದಲ್ಲಿ ವಿಶೇಷವಾಗಿ ನನ್ನ ತಂದೆ-ತಾಯಿಗಳಿಗೆ ಶ್ರೇಯಸ್ಸು ಸಲ್ಲುತ್ತದೆ. ನನಗೆ ಮಾರ್ಗದರ್ಶನ ನೀಡಿದ ಸ್ನೇಹಿತರಿಗೂ ಧನ್ಯವಾದಗಳು ಎಂದಿದ್ದಾರೆ. 

ಶ್ರುತಿ ಶರ್ಮಾ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ (ಜೆಎನ್‌ಯು) ಸ್ನಾತಕೋತ್ತರ ಪದವಿ ಪಡೆದರು. ಕಳೆದ ನಾಲ್ಕು ವರ್ಷಗಳಿಂದ ಸಿವಿಲ್ಸ್‌ಗೆ ತಯಾರಿ ನಡೆಸುತ್ತಿದ್ದರು. ಜಾಮಿಯಾ ಮಿಲಿಯಾ ಇಸ್ಲಾಮಿಯಾ(RCA) ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದರು. 

ಆರ್‌ಸಿಎ ಉಚಿತವಾಗಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಯಿಂದ ಹಣ ನೀಡಲಾಗುತ್ತದೆ. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತರಂತಹ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ವಸತಿ ಸೌಲಭ್ಯಗಳನ್ನು ನೀಡುತ್ತಾರೆ.

ಕೋಚಿಂಗ್ ಅಕಾಡೆಮಿಯ 23 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಜಾಮಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಇತ್ಯಾದಿಗಳ ಆಯ್ಕೆ ಅಧಿಕಾರಿಗಳಿಗೆ ಪೂರ್ವಭಾವಿ, ಮುಖ್ಯ ಮತ್ತು ಸಂದರ್ಶನ ಎಂಬ ಮೂರು ಹಂತಗಳಲ್ಲಿ UPSC ವಾರ್ಷಿಕವಾಗಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುತ್ತದೆ.

ನನ್ನ ಕನಸು ನನಸಾಗುವಂತಿದೆ. ಭಾರತೀಯ ಆಡಳಿತ ಸೇವೆಯನ್ನು (ಐಎಎಸ್) ಆಯ್ಕೆ ಮಾಡಿಕೊಂಡು ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದು ಗಾಮಿನಿ ಸಿಂಗ್ಲಾ ಪಂಜಾಬ್‌ನ ಆನಂದಪುರ ಸಾಹಿಬ್‌ನಿಂದ ಪಿಟಿಐಗೆ ತಿಳಿಸಿದರು.

ತನ್ನ ಎರಡನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಿಂಗ್ಲಾ, ತಾನು ಮುಖ್ಯವಾಗಿ "ಸ್ವಯಂ ಅಧ್ಯಯನ" ಮಾಡಿದ್ದೇನೆ, ಯಶಸ್ಸಿಗೆ ತನ್ನ ತಂದೆ ಮುಖ್ಯವಾಗಿ ಕಾರಣ ಎನ್ನುತ್ತಾರೆ. 

ಪರೀಕ್ಷೆಯಲ್ಲಿ ಮೊದಲ ಮೂರು ರ್ಯಾಂಕ್‌ಗಳನ್ನು ಪಡೆದ ಮಹಿಳೆಯರ ಬಗ್ಗೆ ಕೇಳಲಾದ ಪ್ರಶ್ನೆಗೆ, "ಮಹಿಳೆಯರು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಏನನ್ನಾದರೂ ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಇದು ತೋರಿಸುತ್ತದೆ" ಎಂದರು.

ಕಂಪ್ಯೂಟರ್ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿಟೆಕ್) ಆಗಿರುವ ಸಿಂಗ್ಲಾ, ಸಮಾಜಶಾಸ್ತ್ರವನ್ನು ತನ್ನ ಐಚ್ಛಿಕ ವಿಷಯವಾಗಿ ಹೊಂದಿದ್ದರು. 

ಯುಪಿಎಸ್ಸಿ 2021ರ ಪರೀಕ್ಷೆಯಲ್ಲಿ ಒಟ್ಟು 685 ಅಭ್ಯರ್ಥಿಗಳಲ್ಲಿ 508 ಪುರುಷರು ಮತ್ತು 177 ಮಹಿಳೆಯರು - ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ಅವರ ಹೆಸರನ್ನು ವಿವಿಧ ಕೇಂದ್ರ ಸೇವೆಗಳಿಗೆ ನೇಮಕಾತಿಗಾಗಿ ಆಯೋಗವು ಶಿಫಾರಸು ಮಾಡಿದೆ ಎಂದು UPSC ತಿಳಿಸಿದೆ.


Stay up to date on all the latest ದೇಶ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp