ಭಾರತೀಯ ಸೇನಾಪಡೆಗಳ ನಿರಾಯುಧ ಕದನ, ಮಿಶ್ರ ಸಮರ ಕಲೆ ಕೌಶಲ್ಯ ತರಬೇತಿ; ವಿಡಿಯೋ

ಗಡಿಯಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೈನಿಕರಿಗೆ ಶಸ್ತ್ರಾಸ್ತ್ರಗಳಿಲ್ಲದೆ, ಅಂದರೆ ನಿರಾಯುಧ ಕದನ ಅಥವಾ ಕೈಯಿಂದಲೇ ಶತ್ರುಗಳ ವಿರುದ್ಧ ಕಾದಾಡುವ ತರಬೇತಿ ನೀಡಲಾಗುತ್ತಿದೆ. 
ಭಾರತೀಯ ಸೇನೆಗೆ ತರಬೇತಿ
ಭಾರತೀಯ ಸೇನೆಗೆ ತರಬೇತಿ

ನವದೆಹಲಿ: ಗಡಿಯಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೈನಿಕರಿಗೆ ಶಸ್ತ್ರಾಸ್ತ್ರಗಳಿಲ್ಲದೆ, ಅಂದರೆ ನಿರಾಯುಧ ಕದನ ಅಥವಾ ಕೈಯಿಂದಲೇ ಶತ್ರುಗಳ ವಿರುದ್ಧ ಕಾದಾಡುವ ತರಬೇತಿ ನೀಡಲಾಗುತ್ತಿದೆ. 

ಹೊಸ ಮಾಡ್ಯೂಲ್‌ನ ಈ ತರಬೇತಿಯನ್ನು  ಐಟಿಬಿಪಿಯ ಯುದ್ಧ ಮತ್ತು ಯುದ್ಧೇತರ ಸಿಬ್ಬಂದಿಗೆ ನೀಡಲಾಗುತ್ತಿದೆ. ಜೂಡೋ-ಕರಾಟೆ ಜೊತೆಗೆ, ಸೈನಿಕರಿಗೆ ಇಸ್ರೇಲಿ ಸಮರ ಕಲೆಗಳಾದ ಕ್ರಾವ್ ಮಗಾ, ಜಪಾನೀಸ್ ಐಕಿಡೊ, ಬಾಕ್ಸಿಂಗ್ ಮತ್ತು ಕುಸ್ತಿ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ.

ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ಉತ್ತರ ಕಮಾಂಡ್, ಇದು ಸೇನಾ ಪಡೆಗಳ ಅದಮ್ಯ ಚೈತನ್ಯ ಮತ್ತು ಧೈರ್ಯವನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com