ಪ್ರಧಾನಿ ವಿಶಾಲ ಮನಸ್ಸಿನವರಾಗಿರಬೇಕು: ಮೋದಿಗೆ ಪವಾರ್ ಗುದ್ದು
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಟೀಕಾ ಪ್ರಹಾರ ನಡೆಸಿದ್ದು, ಪ್ರಧಾನಿಯಾದವರು ವಿಶಾಲ ಮನಸ್ಸಿನವರಾಗಿರಬೇಕು ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿರಬೇಕು.. ಆದರೆ ದುರಾದೃಷ್ಟವಶಾತ್ ಅದು ಹಾಗೆ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.
Published: 05th November 2022 08:52 PM | Last Updated: 05th November 2022 08:52 PM | A+A A-

ಶರದ್ ಪವಾರ್
ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಟೀಕಾ ಪ್ರಹಾರ ನಡೆಸಿದ್ದು, ಪ್ರಧಾನಿಯಾದವರು ವಿಶಾಲ ಮನಸ್ಸಿನವರಾಗಿರಬೇಕು ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿರಬೇಕು.. ಆದರೆ ದುರಾದೃಷ್ಟವಶಾತ್ ಅದು ಹಾಗೆ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 81 ವರ್ಷದ ಪವಾರ್ ಅವರು ವೈದ್ಯರೊಂದಿಗೆ ಮುಂಬೈನಿಂದ ಶಿರಡಿಗೆ ಆಗಮಿಸಿ ಪಕ್ಷದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. "ಪ್ರಧಾನಿಯೊಬ್ಬರು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ದೂರದೃಷ್ಟಿಯನ್ನು ಹೊಂದಿರಬೇಕು ಮತ್ತು ವಿಶಾಲ ಮನಸ್ಸಿನವರಾಗಿರಬೇಕು. ಆದರೆ ದುರದೃಷ್ಟವಶಾತ್ ಅದು ಹಾಗೆ ತೋರುತ್ತಿಲ್ಲ. ದುರ್ಬಲಗೊಳ್ಳುತ್ತಿರುವ ಆರ್ಥಿಕತೆಯನ್ನು (ಪುನರುಜ್ಜೀವನಗೊಳಿಸಲು) ಮತ್ತು ಹಣದುಬ್ಬರವನ್ನು ತಗ್ಗಿಸಲು ಪ್ರಧಾನಮಂತ್ರಿ ಹೆಚ್ಚು ಗಮನಹರಿಸಬೇಕು ಎಂದರು.
ಇದನ್ನೂ ಓದಿ: ಚುನಾವಣೆಗೂ ಮುನ್ನ ಬಿಜೆಪಿ ತೊರೆದ ಗುಜರಾತ್ ಮಾಜಿ ಸಚಿವ ಜಯನಾರಾಯಣ ವ್ಯಾಸ್
'ಪಕ್ಷದ ಕಾರ್ಯಕರ್ತರು ರಾಜ್ಯದಲ್ಲಿ 'ರಾಜಕೀಯ ಬದಲಾವಣೆ' ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮಾವೇಶದಲ್ಲಿ ಸುಸ್ತಾಗಿ ಕಾಣುತ್ತಿದ್ದ ಪವಾರ್ ಕೆಲ ನಿಮಿಷಗಳ ಕಾಲ ಮಾತನಾಡಿದರು. 10 ರಿಂದ 15 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿರುವುದರಿಂದ ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಪವಾರ್ ಹೇಳಿದರು. ನಂತರ ಅವರು ಪಕ್ಷದ ನಾಯಕ ದಿಲೀಪ್ ವಾಲ್ಸೆ ಪಾಟೀಲ್ ಅವರಿಗೆ ಭಾಷಣವನ್ನು ಓದಲು ಹೇಳಿದರು.
ಪವಾರ್ ಅವರ ಭಾಷಣವನ್ನು ಪಕ್ಷದ ಹಿರಿಯ ನಾಯಕ ದಿಲೀಪ್ ವಾಲ್ಸೆ ಪಾಟೀಲ್ ಅವರು ಓದಿದರು. 'ಅವರು ದೀರ್ಘವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ ಅವರು, ಪವಾರ್ ತಮ್ಮ ಭಾಷಣದಲ್ಲಿ, ಕೆಲವು ರಾಜ್ಯಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ತಿರಸ್ಕರಿಸಲಾಗಿದೆ, ಆದರೆ ಇತರ ರಾಜ್ಯಗಳಲ್ಲಿ ಕೇಸರಿ ಪಕ್ಷವು ಕೇಂದ್ರ ತನಿಖಾ ಸಂಸ್ಥೆಗಳನ್ನು "ದುರುಪಯೋಗ" ಮಾಡುವ ಮೂಲಕ ಸರ್ಕಾರಗಳನ್ನು ರಚಿಸಿದೆ ಎಂದು ಹೇಳಿದರು. ಪ್ರಗತಿಪರ ಸಿದ್ಧಾಂತಕ್ಕೆ ಬದ್ಧರಾಗಿರಲು ಮತ್ತು ಯಾವುದೇ "ಪ್ರಚೋದನೆಗಳಿಗೆ" ಬಲಿಯಾಗದಂತೆ ಎನ್‌ಸಿಪಿ ಕಾರ್ಯಕರ್ತರಿಗೆ ಪವಾರ್ ಮನವಿ ಮಾಡಿದರು.
ಇದನ್ನೂ ಓದಿ: ಮಹಾರಾಷ್ಟ್ರ: ಮಧ್ಯಂತರ ಚುನಾವಣೆಗೆ ಸಿದ್ಧರಾಗಿ; ಪಕ್ಷದ ಕಾರ್ಯಕರ್ತರಿಗೆ ಉದ್ಧವ್ ಠಾಕ್ರೆ ಕರೆ
ಗುಜರಾತ್, ಅಸ್ಸಾಂ, ಉತ್ತರ ಪ್ರದೇಶ, ಹರಿಯಾಣ ಮತ್ತು ಕೆಲವು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ದೇಶದ ಬಹುಪಾಲು ಜನರು ಭಾರತೀಯ ಜನತಾ ಪಕ್ಷವನ್ನು ತಿರಸ್ಕರಿಸಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಆಯಾ ಸರ್ಕಾರಗಳನ್ನು (ಬಿಜೆಪಿ) ಪತನಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು.
ಕಳೆದ ಕೆಲವು ದಿನಗಳಿಂದ ಸೋಂಕು ಮತ್ತು ಜ್ವರದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪವಾರ್, ವೈದ್ಯರ ತಂಡದೊಂದಿಗೆ ಮಹಾಲಕ್ಷ್ಮಿ ರೇಸ್ ಕೋರ್ಸ್‌ಗೆ ಆಗಮಿಸಿ ಹೆಲಿಕಾಪ್ಟರ್‌ನಲ್ಲಿ ಅಹಮದ್‌ನಗರ ಜಿಲ್ಲೆಯ ಶಿರಡಿಗೆ ತೆರಳಿದರು.