ಮಧ್ಯಪ್ರದೇಶ ನಂತರ ಉತ್ತರಾಖಂಡ್ ನಲ್ಲೂ ಮುಂದಿನ ವರ್ಷದಿಂದ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ

ಉತ್ತರಾಖಂಡ್ ನಲ್ಲಿ ಮುಂದಿನ ಅಕಾಡೆಮಿಕ್ ಅವಧಿಯಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ಬೋಧಿಸಲಾಗುವುದು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಧಾನ್ ಸಿಂಗ್ ರವಾತ್ ಹೇಳಿದ್ದಾರೆ. ಮಧ್ಯ ಪ್ರದೇಶ ನಂತರ ಈ ರೀತಿ ಮಾಡುತ್ತಿರುವ ದೇಶದ ಎರಡನೇ ರಾಜ್ಯ ಉತ್ತರಾಖಂಡ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಡೆಹ್ರಾಡೂನ್: ಉತ್ತರಾಖಂಡ್ ನಲ್ಲಿ ಮುಂದಿನ ಅಕಾಡೆಮಿಕ್ ಅವಧಿಯಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ಬೋಧಿಸಲಾಗುವುದು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಧಾನ್ ಸಿಂಗ್ ರವಾತ್ ಹೇಳಿದ್ದಾರೆ.

ಮಧ್ಯ ಪ್ರದೇಶ ನಂತರ ಈ ರೀತಿ ಮಾಡುತ್ತಿರುವ ದೇಶದ ಎರಡನೇ ರಾಜ್ಯ ಉತ್ತರಾಖಂಡ್ ಆಗಿದೆ. ಇದಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲ್ ಡಾ. ಸಿಎಂಎಸ್ ರಾವತ್ ಅಧ್ಯಕ್ಷತೆಯ ನಾಲ್ವರ ತಜ್ಞರ ಸಮಿತಿಯೊಂದರನ್ನು ವೈದ್ಯಕೀಯ ಶಿಕ್ಷಣ ಇಲಾಖೆ ರಚಿಸಿರುವುದಾಗಿ ಸಚಿವರು ತಿಳಿಸಿದ್ದಾರೆ.  

ಮಧ್ಯ ಪ್ರದೇಶದ ಸರ್ಕಾರಿ ಕಾಲೇಜುಗಳಲ್ಲಿ ಎಂಬಿಬಿಎಸ್ ನಲ್ಲಿ ಹಿಂದಿ ಪಠ್ಯಕ್ರಮ ಅಧ್ಯಯನ ನಂತರ ಉತ್ತರಾಖಂಡ್ ಕಾಲೇಜುಗಳಲ್ಲಿ ಹೊಸ ಸಿಲಬಸ್ ಕರಡೊಂದನ್ನು ಸಮಿತಿ ಸಿದ್ಧಪಡಿಸಲಿದೆ. ಕರಡು ತಯಾರಾದ ನಂತರ ಎಲ್ಲಾ ಕ್ರಮಗಳನ್ನು ಪೂರ್ಣಗೊಳಿಸಲಾಗುವುದು, ಮುಂದಿನ ವರ್ಷದಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸಲಾಗುವುದು ,ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ವಿಶೇಷ ಆದ್ಯತೆ ನೀಡಿರುವುದನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಮಧ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಹಿಂದಿ ಭಾಷೆಯಲ್ಲಿ ಎಂಬಿಬಿಎಸ್ ಬೋಧನೆಯ ಭಾಗವಾಗಿ ಅಕ್ಟೋಬರ್ 16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಂಬಿಬಿಎಸ್ ವಿದ್ಯಾರ್ಥಿಗಳಿಗಾಗಿ ಹಿಂದಿ ಪಠ್ಯ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com