ಜನ ಗಣ ಮನ, ವಂದೇ ಮಾತರಂಗೆ ಸಮಾನ ಗೌರವ ನೀಡಬೇಕು: ದೆಹಲಿ ಹೈಕೋರ್ಟ್ ಗೆ ಕೇಂದ್ರ

ರಾಷ್ಟ್ರಗೀತೆ 'ಜನ ಗಣ ಮನ' ಮತ್ತು ರಾಷ್ಟ್ರೀಯ ಹಾಡು 'ವಂದೇ ಮಾತರಂ' ಎರಡೂ ಒಂದೇ ಮಟ್ಟದ ಮೌಲ್ಯ ಹೊಂದಿದ್ದು, ನಾಗರಿಕರು ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ರಾಷ್ಟ್ರ ಧ್ವಜ
ರಾಷ್ಟ್ರ ಧ್ವಜ

ನವದೆಹಲಿ: ರಾಷ್ಟ್ರಗೀತೆ 'ಜನ ಗಣ ಮನ' ಮತ್ತು ರಾಷ್ಟ್ರೀಯ ಹಾಡು 'ವಂದೇ ಮಾತರಂ' ಎರಡೂ ಒಂದೇ ಮಟ್ಟದ ಮೌಲ್ಯ ಹೊಂದಿದ್ದು, ನಾಗರಿಕರು ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ರಾಷ್ಟ್ರಗೀತೆ ಹಾಡುವಾಗ ದಂಡಸಂಹಿತೆ ನಿಯಮಗಳು ಅಥವಾ ಅಧಿಕೃತ ಸೂಚನೆಗಳು ಇರುವಂತೆ, 'ವಂದೇ ಮಾತರಂ' ಹಾಡುವಾಗ ಅಥವಾ ನುಡಿಸುವಾಗ ಯಾವುದೇ ನಿಯಮವಿಲ್ಲ. ಈ ಗೀತೆಯು ಭಾರತೀಯರ ಭಾವನೆಗಳು ಹಾಗೂ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಗೀತೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನ ಎಲ್ಲ ಸೂಚನೆಗಳನ್ನೂ ಪಾಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ  ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ ಗೃಹ ಸಚಿವಾಲಯವು, 'ವಂದೇ ಮಾತರಂ' ಗೀತೆಗೆ ರಾಷ್ಟ್ರಗೀತೆಯಷ್ಟೇ ಗೌರವ ಮತ್ತು ಸಮಾನ ಸ್ಥಾನಮಾನವನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಹಾಡು ಎರಡಕ್ಕೂ ತನ್ನದೇ ಆದ ಪಾವಿತ್ರ್ಯತೆ ಇದೆ ಮತ್ತು ಸಮಾನ ಗೌರವಕ್ಕೆ ಅರ್ಹವಾಗಿದೆ ಎಂದು ಒತ್ತಿಹೇಳಿರುವ ಕೇಂದ್ರ, ಪ್ರಸ್ತುತ ಪ್ರಕ್ರಿಯೆಯ ವಿಷಯವು ಎಂದಿಗೂ ರಿಟ್ ಅರ್ಜಿಯ ವಿಷಯವಾಗಲು ಸಾಧ್ಯವಿಲ್ಲ ಎಂದು ಹೇಳಿದೆ.

"ಜನ ಗಣ ಮನ ಮತ್ತು ವಂದೇ ಮಾತರಂ ಎರಡೂ ಒಂದೇ ಮಟ್ಟದ ಮೌಲ್ಯ ಹೊಂದಿವೆ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಯೂ ಎರಡಕ್ಕೂ ಸಮಾನ ಗೌರವವನ್ನು ನೀಡಬೇಕು. ರಾಷ್ಟ್ರೀಯ ಗೀತೆಯು ಭಾರತದ ಜನರ ಭಾವನೆಗಳು ಮತ್ತು ಮನಸ್ಸಿನಲ್ಲಿ ವಿಶಿಷ್ಟ, ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ" ಎಂದು ಸಂಕ್ಷಿಪ್ತವಾಗಿ ಹೇಳಲಾಗಿದೆ. ಕೇಂದ್ರ ಸರ್ಕಾರದ ವಕೀಲ ಮನೀಶ್ ಮೋಹನ್ ಮೂಲಕ ಅಫಿಡವಿಟ್ ಸಲ್ಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com