ವಿವೇಕ್ ಒಬೆರಾಯ್, ಕುಟುಂಬಕ್ಕೆ ಸಮನ್ಸ್ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

2003 ರಲ್ಲಿ ಮನರಂಜನಾ ಕಂಪನಿಗೆ ವಂಚಿಸಿದ ಆರೋಪದ ಮೇಲೆ ಬಾಲಿವುಡ್ ನಟ ವಿವೇಕ್ ಒಬೆರಾಯ್, ಅವರ ತಂದೆ ಸುರೇಶ್ ಒಬೆರಾಯ್ ಮತ್ತು ಅವರ ದೆಹಲಿ ಮೂಲದ ಯಾಶಿ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸಮನ್ಸ್ ನೀಡುವಂತೆ...
ನಟ ವಿವೇಕ್ ಒಬೆರಾಯ್
ನಟ ವಿವೇಕ್ ಒಬೆರಾಯ್

ನವದೆಹಲಿ: 2003 ರಲ್ಲಿ ಮನರಂಜನಾ ಕಂಪನಿಗೆ ವಂಚಿಸಿದ ಆರೋಪದ ಮೇಲೆ ಬಾಲಿವುಡ್ ನಟ ವಿವೇಕ್ ಒಬೆರಾಯ್, ಅವರ ತಂದೆ ಸುರೇಶ್ ಒಬೆರಾಯ್ ಮತ್ತು ಅವರ ದೆಹಲಿ ಮೂಲದ ಯಾಶಿ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸಮನ್ಸ್ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಅರ್ಜಿದಾರರು ನಾಗರಿಕ ಪರಿಹಾರಗಳನ್ನು ಆಶ್ರಯಿಸಿದ್ದಾರೆ ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ಸಂಪೂರ್ಣ ದೂರಿನ ಪರಿಶೀಲನೆ ವೇಳೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ವಂಚನೆ ಕಂಡುಬಂದಿಲ್ಲ ಎಂದು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಮುಂಬೈನ ಮೆಹ್ತಾ ಎಂಟರ್‌ಟೈನ್‌ಮೆಂಟ್‌ನ ಸಿಇಒ, ಅರ್ಜಿದಾರ ದೀಪಕ್ ಮೆಹ್ತಾ ಅವರು ಆರಂಭದಲ್ಲಿ ಒಬೆರಾಯ್ ಕುಟುಂಬ ಮತ್ತು ಅವರ ಕಂಪನಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಆರೋಪಿಗಳಿಗೆ ಸಮನ್ಸ್ ನೀಡುವಂತೆ ಕೋರಿದ್ದರು.

2003ರ ಜನವರಿಯಲ್ಲಿ ದೂರುದಾರರನ್ನು ಒಬೆರಾಯ್ ಸಂಸ್ಥೆಗೆ ಪರಿಚಯಿಸಲಾಯಿತು ಮತ್ತು ಸುರೇಶ್ ಒಬೆರಾಯ್ ಅವರು ಮಗ ವಿವೇಕ್ ಒಬೆರಾಯ್ ಗಾಗಿ ಅಮೆರಿಕ ಮತ್ತು ಕೆನಡಾದಲ್ಲಿ ಆ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲು ಒಪ್ಪಿಕೊಂಡರು ಮತ್ತು ಇದಕ್ಕಾಗಿ 3 ಲಕ್ಷ ಅಮೆರಿಕನ್ ಡಾಲರ್ ಅನ್ನು ಯಾಶಿ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್‌ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಅವರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಆದರೆ ವಿವೇಕ್ ಒಬೆರಾಯ್ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com