ಉಪ ಚುನಾವಣೆ ಫಲಿತಾಂಶ: ಬಿಹಾರದ ಎರಡು ಅಸೆಂಬ್ಲಿ ಕ್ಷೇತ್ರಗಳಲ್ಲಿ ಆರ್ ಜೆಡಿ ಮುನ್ನಡೆ

ಬಿಹಾರದ ಮೊಕಾಮ ಮತ್ತು ಗೋಪಾಲ್ ಗಂಜ್ ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ನಂತರ ರಾಷ್ಟ್ರೀಯ ಜನತಾ ದಳ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗಿದೆ. 
ತೇಜಸ್ವಿ ಯಾದವ್, ಲಾಲು ಪ್ರಸಾದ್ ಯಾದವ್
ತೇಜಸ್ವಿ ಯಾದವ್, ಲಾಲು ಪ್ರಸಾದ್ ಯಾದವ್

ಪಾಟ್ನಾ: ಬಿಹಾರದ ಮೊಕಾಮ ಮತ್ತು ಗೋಪಾಲ್ ಗಂಜ್ ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ನಂತರ ರಾಷ್ಟ್ರೀಯ ಜನತಾ ದಳ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗಿದೆ. 

ಮೊಕಾಮದಲ್ಲಿ ಮೊದಲ ಸುತ್ತು ಮುಗಿದ ನಂತರ ನೀಲಂ ದೇವಿ 4,159 ಮತಗಳನ್ನು ಪಡೆದರೆ, ಬಿಜೆಪಿಯ ಸೋನಾಮ್ ದೇವಿ 3,508 ಮತಗಳನ್ನು ಪಡೆದಿದ್ದಾರೆ. ಆರ್ ಜೆಡಿಯ ಮೋಹನ್ ಗುಪ್ತಾ  2,713 ಮತಗಳೊಂದಿಗೆ ಮುನ್ನಡೆಯಲ್ಲಿದ್ದಾರೆ. 

ನವೆಂಬರ್ 3 ರಂದು ನಡೆದ ಚುನಾವಣೆಯಲ್ಲಿ ಮೊಕಾಮದಲ್ಲಿ (2.70 ಲಕ್ಷ) ಗೋಪಾಲ್ ಗಂಜ್ ನಲ್ಲಿ ( 3.31 ಲಕ್ಷ) ಶೇ. 52.3 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com