ಮಧುರೈ: 13 ಅಡಿ ಆಳದ ಗುಂಡಿಯೊಳಗೆ ಸಿಲುಕಿದ ಗುತ್ತಿಗೆ ಕಾರ್ಮಿಕ; ರಕ್ಷಣಾ ಕಾರ್ಯ ಪ್ರಗತಿಯಲ್ಲಿ

ಕುಡಾಲ್ ನಗರದ ಬಳಿ ಪೈಪ್‌ಲೈನ್ ಲಿಂಕ್ ಮಾಡುವ ಕಾಮಗಾರಿಯಲ್ಲಿ ತೊಡಗಿದ್ದ 35 ವರ್ಷದ ಗುತ್ತಿಗೆ ಕಾರ್ಮಿಕರೊಬ್ಬರು ಪೈಪ್‌ಲೈನ್‌ನಿಂದ ನೀರು ಸೋರಿಕೆಯಾಗಿ, ಮರಳು ಗೋಡೆ ಕುಸಿದು ಹೊಂಡದಲ್ಲಿ ಸಿಲುಕಿಕೊಂಡಿದ್ದಾರೆ. ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ಆರಂಭಿಸಿದೆ.
ಮಧುರೈನ ಕುಡಾಲ್‌ನಗರ ಸಮೀಪದ ಅಶೋಕ್ ನಗರ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿ ವೇಳೆ 13 ಅಡಿ ಆಳದ ಹೊಂಡದಲ್ಲಿ ಸಿಲುಕಿರುವ ವ್ಯಕ್ತಿ
ಮಧುರೈನ ಕುಡಾಲ್‌ನಗರ ಸಮೀಪದ ಅಶೋಕ್ ನಗರ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿ ವೇಳೆ 13 ಅಡಿ ಆಳದ ಹೊಂಡದಲ್ಲಿ ಸಿಲುಕಿರುವ ವ್ಯಕ್ತಿ

ಮಧುರೈ: ಕುಡಾಲ್ ನಗರದ ಬಳಿ ಪೈಪ್‌ಲೈನ್ ಲಿಂಕ್ ಮಾಡುವ ಕಾಮಗಾರಿಯಲ್ಲಿ ತೊಡಗಿದ್ದ 35 ವರ್ಷದ ಗುತ್ತಿಗೆ ಕಾರ್ಮಿಕರೊಬ್ಬರು ಪೈಪ್‌ಲೈನ್‌ನಿಂದ ನೀರು ಸೋರಿಕೆಯಾಗಿ, ಮರಳು ಗೋಡೆ ಕುಸಿದು ಹೊಂಡದಲ್ಲಿ ಸಿಲುಕಿಕೊಂಡಿದ್ದಾರೆ. ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ಆರಂಭಿಸಿದೆ.

ಶಕ್ತಿವೇಲ್ (35) ಸೋಮವಾರ ಮಧುರೈ ಸಮೀಪದ ಕುಡಾಲ್ ನಗರದ ಅಶೋಕ್ ನಗರ ಪ್ರದೇಶದಲ್ಲಿ ಹಲವಾರು ಕಾರ್ಮಿಕರೊಂದಿಗೆ ಭೂಮಿಯಲ್ಲಿ ಹುದುಗಿದ್ದ ಪೈಪ್‌ಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದರು. ದುರದೃಷ್ಟವಶಾತ್, ಸಕ್ರಿಯ ಲೈನ್‌ಗಳೊಂದಿಗೆ ಪೈಪ್‌ಗಳನ್ನು ಜೋಡಿಸುವ ಕಾರ್ಯದಲ್ಲಿ ತೊಡಗಿರುವಾಗ, ಗುಂಡಿಯ ಮಣ್ಣಿನ ಗೋಡೆ ಕುಸಿದು, ಶಕ್ತಿವೇಲು ಹೊಂಡದೊಳಗೆ ಸಿಲುಕಿಕೊಂಡಿದ್ದಾರೆ. ನೀರು ಮತ್ತು ಕೆಸರಿನಿಂದ ಹೊಂಡ ಮುಚ್ಚಿಕೊಂಡಿದೆ.

ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಧಾವಿಸಿದ್ದಾರೆ. ಹೊಂಡದಲ್ಲಿ ನೀರು ಮತ್ತು ಕೆಸರು ತುಂಬಿರುವುದರಿಂದ ಬ್ಯಾಕ್‌ ಹೋಲ್ ಲೋಡರ್ ಮತ್ತು ಪಂಪ್‌ನ ಸಹಾಯದಿಂದ ಶಕ್ತಿವೇಲ್ ಅವರನ್ನು ರಕ್ಷಿಸಲು ಗುಂಡಿಯನ್ನು ತೆರವುಗೊಳಿಸಲಾಗುತ್ತಿದೆ. ಪಾಲಿಕೆ ಆಯುಕ್ತರು ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಟಿಎಐಇ ಜೊತೆಗೆ ಮಾತನಾಡಿದ ಸಿಟಿ ಕಾರ್ಪೋರೇಶನ್ ಕಮಿಷನರ್ ಸಿಮ್ರಂಜೀತ್ ಸಿಂಗ್ ಕಹ್ಲೋನ್, 'ಶಕ್ತಿವೇಲ್ ಮತ್ತು ಇತರ ಇಬ್ಬರು ಕಾರ್ಮಿಕರು ನೀರಿನ ಪೈಪ್‌ಲೈನ್ ಲಿಂಕ್ ಮಾಡುವ ಕೆಲಸದಲ್ಲಿ ತೊಡಗಿದ್ದರು. ಅವರು ಅದನ್ನು ಸಕ್ರಿಯ ಲೈನ್‌ಗೆ ಸಂಪರ್ಕಿಸಲು ಪ್ರಯತ್ನಿಸಿದಾಗ, ನೀರು ಸೋರಿಕೆಯಾಗಿ ಮಣ್ಣಿನ ಗೋಡೆ ಕುಸಿತಕ್ಕೆ ಕಾರಣವಾಯಿತು. ಅದೃಷ್ಟವಶಾತ್, ಇನ್ನಿಬ್ಬರು ಕಾರ್ಮಿಕರು ಗುಂಡಿಯಿಂದ ಹೊರಬಂದರು. ಆದರೆ, ಶಕ್ತಿವೇಲ್ ಗುಂಡಿಯಲ್ಲಿ ಸಿಲುಕಿಕೊಂಡರು. ಅವರನ್ನು ರಕ್ಷಿಸಲು ರಕ್ಷಣಾ ತಂಡಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com