ಜಾರ್ಖಂಡ್‌ನ ಕಾಂಗ್ರೆಸ್ ಶಾಸಕರ ಮನೆ ಮೇಲೆ ಐಟಿ ದಾಳಿ, 100 ಕೋಟಿ ರೂ. ಲೆಕ್ಕ ರಹಿತ ವಹಿವಾಟು ಪತ್ತೆ

ಕಳೆದ ವಾರ ರಾಜ್ಯಾದ್ಯಂತ ಇಬ್ಬರು ಜಾರ್ಖಂಡ್ ಕಾಂಗ್ರೆಸ್ ಶಾಸಕರು, ಅವರ ಸಹಚರರಿಗೆ ಸಂಬಂಧಿಸಿದ ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರು ವ್ಯವಹಾರಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 100 ಕೋಟಿಗೂ ಹೆಚ್ಚು ಮೌಲ್ಯದ ಲೆಕ್ಕ ರಹಿತವಾದ ವಹಿವಾಟು ಮತ್ತು ಹೂಡಿಕೆಗಳನ್ನು ಪತ್ತೆಹಚ್ಚಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಳೆದ ವಾರ ರಾಜ್ಯಾದ್ಯಂತ ಇಬ್ಬರು ಜಾರ್ಖಂಡ್ ಕಾಂಗ್ರೆಸ್ ಶಾಸಕರು, ಅವರ ಸಹಚರರಿಗೆ ಸಂಬಂಧಿಸಿದ ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರು ವ್ಯವಹಾರಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 100 ಕೋಟಿಗೂ ಹೆಚ್ಚು ಮೌಲ್ಯದ ಲೆಕ್ಕ ರಹಿತವಾದ ವಹಿವಾಟು ಮತ್ತು ಹೂಡಿಕೆಗಳನ್ನು ಪತ್ತೆಹಚ್ಚಿದ್ದಾರೆ.

ನವೆಂಬರ್‌ 4 ರಂದು ನಡೆಸಲಾಗಿದ್ದ ಶೋಧ ಕಾರ್ಯಾಚರಣೆಯಲ್ಲಿ ರಾಂಚಿ, ಗೊಡ್ಡಾ, ಬರ್ಮೊ, ದುಮ್ಕಾ, ಜಮ್ಶೆಡ್‌ಪುರ ಮತ್ತು ಜಾರ್ಖಂಡ್‌ನ ಚೈಬಾಸಾ, ಪಾಟ್ನಾ (ಬಿಹಾರ), ಗುರುಗ್ರಾಮ್ (ಹರಿಯಾಣ), ಮತ್ತು ಕೋಲ್ಕತ್ತಾ (ಪಶ್ಚಿಮ ಬಂಗಾಳ) ನಲ್ಲಿ 50 ಪ್ರದೇಶಗಳಲ್ಲಿ ದಾಳಿ ಮಾಡಿ ಶೋಧ ನಡೆಸಲಾಗಿತ್ತು ಎಂದು ಸಿಬಿಡಿಟಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಶೋಧ ಕಾರ್ಯಾಚರಣೆ ಆರಂಭಿಸಿದ ದಿನದಂದು ಬೆರ್ಮೊ ಸೀಟ್‌ ಕ್ಷೇತ್ರದ ಶಾಸಕ ಕುಮಾರ್ ಜಯಮಂಗಲ್ ಅಲಿಯಾಸ್ ಅನುಪ್ ಸಿಂಗ್ ಮತ್ತು ಪ್ರದೀಪ್ ಯಾದವ್ ಎಂದು ಗುರುತಿಸಲಾಗಿತ್ತು. ಜೆವಿಎಂಪಿಯಿಂದ ಬೇರ್ಪಟ್ಟ ನಂತರ ಕಾಂಗ್ರೆಸ್ ಸೇರಿದ ಪ್ರದೀಪ್‌ ಯಾದವ್ ಅವರು ಪೊರಿಯಾಹತ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 

ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ರಾಜ್ಯದಲ್ಲಿ ಜೆಎಂಎಂ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಪಾಲುದಾರ ಕಾಂಗ್ರೆಸ್ ಪಕ್ಷವಾಗಿದೆ. ಕಲ್ಲಿದ್ದಲು ವ್ಯಾಪಾರ, ಸಾರಿಗೆ, ನಾಗರಿಕ ಒಪ್ಪಂದಗಳ ಅನುಷ್ಠಾನ, ಕಬ್ಬಿಣದ ಅದಿರಿನ ಹೊರತೆಗೆಯುವಿಕೆ ಮತ್ತು ಸ್ಪಾಂಜ್ ಕಬ್ಬಿಣದ ಉತ್ಪಾದನೆಯಲ್ಲಿ ತೊಡಗಿರುವ ಕೆಲವು ವ್ಯಾಪಾರ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಬಿಡಿಟಿ ಹೇಳಿಕೆ ತಿಳಿಸಿದೆ.

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಐಟಿ ಇಲಾಖೆಯ ನೀತಿ ನಿರೂಪಣಾ ಸಂಸ್ಥೆಯಾಗಿದೆ. ದಾಳಿಯ ವೇಳೆ 2 ಕೋಟಿಗೂ ಹೆಚ್ಚು ಮೌಲ್ಯದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇಲ್ಲಿಯವರೆಗೆ 100 ಕೋಟಿಗೂ ಹೆಚ್ಚಿನ ಲೆಕ್ಕಕ್ಕೆ ಸಿಗದ ವಹಿವಾಟು, ಹೂಡಿಕೆಗಳನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದೆ.

ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಆಡಳಿತಾರೂಢ ಯುಪಿಎ ಸರ್ಕಾರವನ್ನು ಉರುಳಿಸಲು ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜಯಮಂಗಲ್ ಅವರು ತಮ್ಮ ಪಕ್ಷದ ಮೂವರು ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ವಿರುದ್ಧ ಆಗಸ್ಟ್‌ನಲ್ಲಿ ಪೊಲೀಸ್ ದೂರು ದಾಖಲಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com