ನೋಯ್ಡಾ: ಯುವತಿಯನ್ನು ಕಚೇರಿ ಕಟ್ಟಡದ ಮೇಲಿಂದ ತಳ್ಳಿ ಹತ್ಯೆ ಮಾಡಿದ ಮಾಜಿ ಪ್ರಿಯಕರ

ನೋಯ್ಡಾದಲ್ಲಿ ವಿಮಾ ಕಂಪನಿಯೊಂದರ 22 ವರ್ಷದ ಮಹಿಳಾ ಉದ್ಯೋಗಿಯೊಬ್ಬರನ್ನು ಆಕೆಯ ಮಾಜಿ ಪ್ರಿಯಕರ, ಸಹೋದ್ಯೋಗಿ ಕಚೇರಿ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನೋಯ್ಡಾ: ನೋಯ್ಡಾದಲ್ಲಿ ವಿಮಾ ಕಂಪನಿಯೊಂದರ 22 ವರ್ಷದ ಮಹಿಳಾ ಉದ್ಯೋಗಿಯೊಬ್ಬರನ್ನು ಆಕೆಯ ಮಾಜಿ ಪ್ರಿಯಕರ, ಸಹೋದ್ಯೋಗಿ ಕಚೇರಿ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಯುವತಿಯನ್ನು ತಳ್ಳಿದ ನಂತರ, ಸಹೋದ್ಯೋಗಿ ಆಕೆಯ ಶವದೊಂದಿಗೆ ಗಾಜಿಯಾಬಾದ್‌ಗೆ ಪರಾರಿಯಾಗಿದ್ದರು ಮತ್ತು ಮೀರತ್‌ಗೆ ತೆರಳುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇಬ್ಬರೂ ಕಳೆದ ಕೆಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಮತ್ತು ಸುದೀರ್ಘ ಸಂಬಂಧವನ್ನು ಹೊಂದಿದ್ದರು. ಆದರೆ ಇತ್ತೀಚೆಗೆ, ಮಹಿಳೆ ಆ ವ್ಯಕ್ತಿಯೊಂದಿಗಿನ ಸಂಬಂಧ ಕಡಿದುಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಸಹೋದ್ಯೋಗಿ ಈ ಕೃತ್ಯ ಎಸಗಿದ್ದಾನೆ.

ಮಂಗಳವಾರ ಸಂಜೆ ಯುವತಿಯೊಬ್ಬರು ಕಚೇರಿ ಕಟ್ಟಡದಿಂದ ಜಿಗಿದ ಬಗ್ಗೆ ಸೆಕ್ಟರ್ 49 ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ನಂತರ ಆಕೆಯ ಮಾಜಿ ಪ್ರಿಯಕರನೇ ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ(ನೋಯ್ಡಾ) ಅಶುತೋಷ್ ದ್ವಿವೇದಿ ತಿಳಿಸಿದ್ದಾರೆ.

"ಆಸ್ಪತ್ರೆಯಲ್ಲಿ ಆರೋಪಿ ಗೌರವ್ ತಾನು ಮೃತ ಮಹಿಳೆಯ ಸಹೋದರ ಎಂದು ಹೇಳಿದ್ದಾನೆ. ನಂತರ, ಆತ ಸಹೋದರನಲ್ಲ. ಯುವತಿಯ ಮಾಜಿ ಪ್ರಿಯಕರ ಎಂದು ತಿಳಿದುಬಂದಿರುವುದಾಗಿ" ದ್ವಿವೇದಿ ಹೇಳಿದ್ದಾರೆ.

ಗೌರವ್ ತನ್ನೊಂದಿಗಿನ ಸಂಬಂಧ ಮುಂದುವರೆಸುವಂತೆ ಆ ಯುವತಿಗೆ ಒತ್ತಾಯಿಸುತ್ತಿದ್ದ ಎನ್ನಲಾಗಿದ್ದು, ಈ ಸಂಬಂಧ ಯುವತಿ ಸೆಪ್ಟೆಂಬರ್ 29ರಂದು ಪೊಲೀಸರಿಗೆ ದೂರು ಸಹ ನೀಡಿದ್ದರು.

ಗೌರವ್ ಆಕೆಗೆ ತೊಂದರೆ ನೀಡುವುದನ್ನು ನಿಲ್ಲಿಸುವುದಾಗಿ ಲಿಖಿತ ಭರವಸೆ ನೀಡಿದ್ದರು ಮತ್ತು ಈ ಸಂಬಂಧ ಎರಡೂ ಕುಟುಂಬದವರು ಪೊಲೀಸ್ ಠಾಣೆಗೆ ಹಾಜರಾಗಿದ್ದರು ಎಂದು ದ್ವಿವೇದಿ ಹೇಳಿದ್ದಾರೆ.

ಮಂಗಳವಾರ ಸಂಜೆ, ಆರೋಪಿಯು ಮತ್ತೊಮ್ಮೆ ಮಹಿಳೆಯನ್ನು ಕಚೇರಿ ಕಟ್ಟಡದಲ್ಲಿ ಭೇಟಿಯಾಗಿ ತನ್ನೊಂದಿಗೆ ಸಂಪರ್ಕದಲ್ಲಿರಲು ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದ ಯುವತಿಯನ್ನು ಕಟ್ಟಡದಿಂದ ತಳ್ಳಿದನು ಎಂದು ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ ಅಧಿಕಾರಿ ತಿಳಿಸಿದ್ದಾರೆ.

ನಂತರ ಶವದೊಂದಿಗೆ ಪರಾರಿಯಾಗಲು ಯತ್ನಿಸಿದ ಆತ ಮೊದಲು ಗಾಜಿಯಾಬಾದ್‌ಗೆ ಹೋಗಿ, ನಂತರ ಮೀರತ್‌ಗೆ ಹೋಗಲು ಯತ್ನಿಸಿದ. ದೂರವಾಣಿ ಕರೆಗಳನ್ನು ಸ್ವೀಕರಿಸಲಿಲ್ಲ. ಹೀಗಾಗಿ ವಿದ್ಯುನ್ಮಾನ ಕಣ್ಗಾವಲು ಮೂಲಕ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ದ್ವಿವೇದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com