2024ರ ಚುನಾವಣೆಯಲ್ಲಿ ಮೋದಿಗೆ ರಾಹುಲ್ ಗಾಂಧಿ ಸವಾಲಾಗಬಹುದು.. ಆದರೆ ವಿಪಕ್ಷಗಳಿಂದ ಒಮ್ಮತದ ನಾಯಕನ ಆಯ್ಕೆ: ಗೆಹ್ಲೂಟ್

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕುವ ಗುಣ ರಾಹುಲ್ ಗಾಂಧಿ ಅವರಲ್ಲಿದೆ, ಆದರೆ ಚುನಾವಣೆಗೆ ಒಮ್ಮತದ ನಾಯಕನನ್ನು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ನಿರ್ಧರಿಸಲಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬುಧವಾರ ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಶಿಮ್ಲಾ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕುವ ಗುಣ ರಾಹುಲ್ ಗಾಂಧಿ ಅವರಲ್ಲಿದೆ, ಆದರೆ ಚುನಾವಣೆಗೆ ಒಮ್ಮತದ ನಾಯಕನನ್ನು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ನಿರ್ಧರಿಸಲಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬುಧವಾರ ಹೇಳಿದ್ದಾರೆ.

ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತಾನಾಡಿದ ಅವರು, ''ಭಾರತ್ ಜೋಡೋ ಯಾತ್ರೆ' ಮೂಲಕ ಹೈಲೈಟ್ ಮಾಡುತ್ತಿರುವ ವಿಷಯಗಳು ಸಾರ್ವಜನಿಕರಿಗೆ ಸಂಬಂಧಿಸಿವೆ ಮತ್ತು ಅವರ ಸಂದೇಶವು ದೇಶದ ಪ್ರತಿ ಮನೆಯನ್ನು ತಲುಪುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕುವ ಗುಣ ರಾಹುಲ್ ಗಾಂಧಿ ಅವರಲ್ಲಿದೆ, ಆದರೆ ಚುನಾವಣೆಗೆ ಸಾಮಾನ್ಯ ನಾಯಕನನ್ನು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ನಿರ್ಧರಿಸಲಿವೆ ಎಂದು ಹೇಳಿದರು.

ಗುಜರಾತ್ ವಿಧಾನಸಭೆ ಚುನಾವಣೆಯ ಹಿರಿಯ ಕಾಂಗ್ರೆಸ್ ವೀಕ್ಷಕರಾಗಿರುವ ಗೆಹ್ಲೋಟ್, 'ಆಮ್ ಆದ್ಮಿ ಪಕ್ಷ (ಎಎಪಿ) ಜನರನ್ನು ದಾರಿ ತಪ್ಪಿಸುತ್ತಿದೆ, ಪಶ್ಚಿಮ ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಲಿದೆ ಎಂದು ಪ್ರತಿಪಾದಿಸುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಎರಡೂ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಇದೆ, ಕಾಂಗ್ರೆಸ್ ವೇಗವಾಗಿ ಮುನ್ನಡೆಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ಮತದಾನ ನಡೆಯಲಿದ್ದು, ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವುದು ಖಚಿತ ಎಂದು ಗೆಹ್ಲೋಟ್ ಹೇಳಿದ್ದಾರೆ.

ಈ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ, ಗೆಹ್ಲೋಟ್, “ರಾಹುಲ್ ಗಾಂಧಿ ಅವರ ಪ್ರಯಾಣಕ್ಕೆ ಮಾರ್ಗವಿರುವ ಕಾರಣ ಹಲವು ರಾಜ್ಯಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ವಿನಾಕಾರಣ ಸಮಸ್ಯೆಯಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಹಣದುಬ್ಬರ ಮತ್ತು ನಿರುದ್ಯೋಗ ಕೊನೆಗೊಳ್ಳಬೇಕು, ಮತ್ತು ದೇಶದಲ್ಲಿ ಸಹೋದರತ್ವ ಇರಬೇಕು. ಇದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಉದ್ದೇಶವಾಗಿದೆ. ಅವರ ಸಂದೇಶವು ಪ್ರತಿ ಬಾಗಿಲನ್ನು ತಲುಪುತ್ತಿದೆ. ಇದೇ ವೇಳೆ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಬರಲು ಸಾಕಷ್ಟು ಬೇಡಿಕೆ ಇದೆ, ಅವರು ಹೋಗಬಹುದು, ಹೋಗದೇ ಇರಬಹುದು, ಆದರೆ ಅವರು ಮಾತನಾಡುತ್ತಿರುವ ವಿಷಯಗಳು ಜನರ ಸಮಸ್ಯೆಗಳಾಗಿವೆ ಎಂದರು. 

2024ರ ಲೋಕಸಭೆ ಚುನಾವಣೆಯಲ್ಲಿ ಗಾಂಧಿ ಪ್ರಧಾನಿ ಮೋದಿಗೆ ಸವಾಲು ಹಾಕಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಗೆಹ್ಲೋಟ್, "ಅವರಿಗೆ ಸವಾಲು ಹಾಕುವ ಶಕ್ತಿ ಇದೆ. ಅದು ಮೊದಲಿನಿಂದಲೂ ಇದೆ. ಆದರೆ ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಂಡು ಅವರ ಇಮೇಜ್ ಗೆ ಧಕ್ಕೆ ತರಲಾಗುತ್ತಿದೆ. ಆದರೆ ಈಗ ಸಾರ್ವಜನಿಕರಿಗೆ ಅರ್ಥವಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಪ್ರತಿಪಕ್ಷಗಳ ಸಾಮಾನ್ಯ ನಾಯಕನನ್ನು ನಿರ್ಧರಿಸುತ್ತವೆ. ದೇಶವು ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಇರಬೇಕೆಂದು ಬಯಸುತ್ತದೆ" ಎಂದು ಹೇಳಿದರು.

"ಗುಜರಾತ್ ನಲ್ಲಿ ಈಗಷ್ಟೇ ಚುನಾವಣೆ ಘೋಷಣೆಯಾಗಿದೆ. ನಾವು ಅಲ್ಲಿ ಐದು ಯಾತ್ರೆಗಳನ್ನು ಕೈಗೊಳ್ಳಲ್ಲಿದ್ದೇವೆ, 175 ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗಿದ್ದೇವೆ. ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ಎಎಪಿ ಜನರನ್ನು ದಾರಿ ತಪ್ಪಿಸುತ್ತಿದೆ. ಅದು ಮಾಧ್ಯಮಗಳನ್ನು ಕೇಂದ್ರೀಕರಿಸಿಕೊಂಡಿದ್ದು, ಅದನ್ನು ಹೊರತುಪಡಿಸಿದರೆ ಗುಜರಾತ್ ನಲ್ಲಿ ಆಪ್ ಪ್ರಭಾವ ಅಷ್ಟಕಷ್ಟೇ ಎಂದು ಹೇಳಿದರು.

ಹಿಮಾಚಲ ಪ್ರದೇಶದ ಎಲ್ಲಾ 68 ಸ್ಥಾನಗಳಿಗೆ ನವೆಂಬರ್ 12 ರಂದು ಚುನಾವಣೆ ನಡೆಯಲಿದ್ದು, ಗುಜರಾತ್‌ನ 182 ವಿಧಾನಸಭಾ ಸ್ಥಾನಗಳ ಪೈಕಿ 89 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಡಿಸೆಂಬರ್ 1 ರಂದು ಮತದಾನ ನಡೆಯಲಿದೆ. ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಎರಡೂ ರಾಜ್ಯಗಳ ಮತ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com