ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಐದು ರೂಪಾಯಿ ಕೆಲಸಕ್ಕೆ ಎಎಪಿ 5 ಸಾವಿರ ರುಪಾಯಿ ಜಾಹೀರಾತು ನೀಡುತ್ತದೆ: ಕೇಜ್ರಿವಾಲ್ ಕಾಲೆಳೆದ ತೇಜಸ್ವಿ ಸೂರ್ಯ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 5 ರುಪಾಯಿ ಕೆಲಸಕ್ಕೆ 5000 ರುಪಾಯಿ ಖರ್ಚು ಮಾಡಿ ಪ್ರಚಾರ ಪಡೆದುಕೊಳ್ಳುತ್ತಾರೆ’ ಎಂದು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಅಹಮದಾಬಾದ್: ‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 5 ರುಪಾಯಿ ಕೆಲಸಕ್ಕೆ 5000 ರುಪಾಯಿ ಖರ್ಚು ಮಾಡಿ ಪ್ರಚಾರ ಪಡೆದುಕೊಳ್ಳುತ್ತಾರೆ’ ಎಂದು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆ 2022 ರ ಪ್ರಯುಕ್ತ ಅವರು ಬುಧವಾರ ಅಹಮದಾಬಾದ್‌ನಲ್ಲಿ ಯುವಕರೊಂದಿಗಿನ ಸಂವಾದದಲ್ಲಿ ಮಾತನಾಡಿದರು. ‘ನಾವು ಬಿಜೆಪಿಯವರು 5000 ರುಪಾಯಿ ಕೆಲಸ ಮಾಡಿ 50 ರುಪಾಯಿಯನ್ನು ಪ್ರಚಾರದ ಕೆಲಸಕ್ಕೆ ಬಳಸುತ್ತೇವೆ. ಆದರೆ, ಎಎಪಿಯವರು ಒಂದು ಸಣ್ಣ ಕೆಲಸಕ್ಕೂ ಬೃಹತ್ ಹಣವನ್ನು ಖರ್ಚು ಮಾಡುತ್ತಾರೆ’ ಎಂದು ದೂರಿದ್ದಾರೆ.

ದೆಹಲಿಯಲ್ಲಿನ ಸರ್ಕಾರಿ ಶಾಲೆಗಳ ಬಗ್ಗೆ ಗಂಭೀರ ಆರೋಪ ಮಾಡಿದ ಅವರು, ‘ಲಿಕ್ಕರ್ ಮಾಫಿಯಾದ ಸಹಾಯದೊಂದಿಗೆ ಸರ್ಕಾರಿ ಶಾಲೆಗಳನ್ನು ಅರವಿಂದ್ ಕೇಜ್ರಿವಾಲ್ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ (2001 ರಿಂದ 2014) ಶಾಲೆಗಳಲ್ಲಿ ಡ್ರಾಪ್ಔಟ್ ಅನುಪಾತವನ್ನು ಸುಧಾರಿಸುವ ಮೂಲಕ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಹೇಗೆ ಸಂಪೂರ್ಣವಾಗಿ ಪರಿವರ್ತಿಸಿದರು ಎಂಬುದನ್ನು ಅವರು ಸಭಿಕರಿಗೆ ನೆನಪಿಸಿದರು. ಗುಜರಾತ್ ಸಿಎಂ ಆಗಿ ಮೋದಿಯವರ ಪ್ರಯತ್ನದಿಂದಾಗಿ ಶಾಲೆ ಬಿಡುವವರ ಪ್ರಮಾಣ ಶೇ.30ರಿಂದ ಕೇವಲ ಶೇ.1ಕ್ಕೆ ಇಳಿದಿದೆ ಎಂದು ಸೂರ್ಯ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com