ನಟಿ ಜಾಕ್ವೆಲಿನ್ ಫರ್ನಾಂಡೀಸ್ ಜಾಮೀನು ಅರ್ಜಿ: ಆದೇಶ ನವೆಂಬರ್ 15ಕ್ಕೆ ಮುಂದೂಡಿಕೆ

ವಂಚಕ ಸುಕೇಶ್ ಚಂದ್ರಶೇಖರ್ ಅವರನ್ನೊಳಗೊಂಡ  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಜಾಮೀನು ಅರ್ಜಿ ಆದೇಶವನ್ನು ದೆಹಲಿ ನ್ಯಾಯಾಲಯವು ನವೆಂಬರ್ 15 ಕ್ಕೆ ಮುಂದೂಡಿದೆ.
ನಟಿ ಜಾಕ್ವೆಲಿನ್
ನಟಿ ಜಾಕ್ವೆಲಿನ್

ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ಅವರನ್ನೊಳಗೊಂಡ  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಜಾಮೀನು ಅರ್ಜಿ ಆದೇಶವನ್ನು ದೆಹಲಿ ನ್ಯಾಯಾಲಯವು ನವೆಂಬರ್ 15 ಕ್ಕೆ ಮುಂದೂಡಿದೆ. ಇಂದು ಕೊನೆಗೊಳ್ಳುತ್ತಿದ್ದ ಅವರ ಮಧ್ಯಂತರ ಜಾಮೀನು ಅವಧಿಯನ್ನು ಮಂಗಳವಾರದವರೆಗೆ ವಿಸ್ತರಿಸಲಾಗಿದೆ.

ಆದೇಶ ಸಿದ್ಧವಾಗಿಲ್ಲ ಎಂದು ಈ ಹಿಂದೆ ಫರ್ನಾಂಡಿಸ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಹೇಳಿದರು.  ಫರ್ನಾಂಡೀಸ್ ಹಾಗೂ ಜಾರಿ ನಿರ್ದೇಶನಾಲಯದ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯ ಜಾಕ್ವೆಲಿನ್ ಅವರ ಜಾಮೀನು ಅರ್ಜಿಯ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು.

ನ್ಯಾಯಾಲಯ ಈವರೆಗೆ ನಟಿಯನ್ನು ಏಕೆ ಬಂಧಿಸಿಲ್ಲ ಎಂದು ತನಿಖಾ ಸಂಸ್ಥೆಯನ್ನು ಕೋರ್ಟ್ ನಿನ್ನೆ ಪ್ರಶ್ನಿಸಿತು. ಎಲ್‌ಒಸಿ ನೀಡಿದ್ದರೂ ನೀವು (ಇಡಿ) ತನಿಖೆಯ ಸಮಯದಲ್ಲಿ ಜಾಕ್ವೆಲಿನ್ ಅವರನ್ನು ಏಕೆ ಬಂಧಿಸಿಲ್ಲ? ಇತರ ಆರೋಪಿಗಳು ಜೈಲಿನಲ್ಲಿದ್ದಾರೆ. ‘ಪಿಕ್ ಅಂಡ್ ಚೂಸ್’ ನೀತಿಯನ್ನು ಏಕೆ ಅಳವಡಿಸಿಕೊಳ್ಳಬೇಕು ಎಂದು ನ್ಯಾಯಾಲಯವು ತನಿಖಾ ಸಂಸ್ಥೆಯನ್ನು ಕೇಳಿತ್ತು.  ಈಗಾಗಲೇ ತನಿಖೆ ಪೂರ್ಣಗೊಂಡು ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದರಿಂದ ಕಸ್ಟಡಿಗೆ ಅಗತ್ಯವಿಲ್ಲ ಎಂದು ಜಾಕ್ವೆಲಿನ್ ಜಾಮೀನು ಕೋರಿದ್ದರು. 

ನ್ಯಾಯಾಲಯ ಆಗಸ್ಟ್ 31 ರಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ ಪೂರಕ ಚಾರ್ಜ್ ಶೀಟ್‌ನಲ್ಲಿ ಜಾಕ್ವೆಲಿನ್ ಅವರನ್ನು ಮೊದಲ ಬಾರಿಗೆ ಆರೋಪಿ ಎಂದು ಹೆಸರಿಸಿತ್ತು. ಇಡಿಯ ಹಿಂದಿನ ಚಾರ್ಜ್ ಶೀಟ್ ಮತ್ತು ಪೂರಕ ಚಾರ್ಜ್ ಶೀಟ್ ನಲ್ಲಿ ಆಕೆಯನ್ನು ಆರೋಪಿ ಎಂದು ನಮೂದಿಸಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com