ಆಂಧ್ರದಲ್ಲಿ ಬಿಜೆಪಿ ಬಲಪಡಿಸುವ ಯತ್ನ: 8 ವರ್ಷಗಳ ನಂತರ ಪವನ್ ಕಲ್ಯಾಣ್ ಜೊತೆ ಅರ್ಧ ಗಂಟೆ ಮೋದಿ ಮಾತುಕತೆ

ಜನ ಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ನಟ ಪವನ್ ಕಲ್ಯಾಣ್
ನಟ ಪವನ್ ಕಲ್ಯಾಣ್

ವಿಶಾಖಪಟ್ಟಣಂ: ಜನ ಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಜೊತೆಗಿನ ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, 8 ವರ್ಷಗಳ ನಂತರ ಪ್ರಧಾನಿ ಭೇಟಿಯಾಗಿದ್ದೇನೆ. 2014ರಲ್ಲಿ ಅವರು ಚುನಾವಣೆಯಲ್ಲಿ ಗೆದ್ದು, ಪ್ರಧಾನಿಯಾದಾಗ ಕೊನೆಯದಾಗಿ ಭೇಟಿಯಾಗಿದ್ದೆ, ಸಭೆ ಮಹತ್ವಪೂರ್ಣವಾಗಿತ್ತು ಎಂದರು. 

ರಾಜ್ಯದಲ್ಲಿ ಅಭಿವೃದ್ಧಿ ಮತ್ತು ತೆಲುಗು ಜನರ ಒಗ್ಗಟ್ಟಿನ ಬಗ್ಗೆ ಪ್ರಧಾನಿ ಒತ್ತು ನೀಡಿದರು. ರಾಜ್ಯಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳ ಬಗ್ಗೆ ಕೇಳಿದರು. ನನಗೆ ಏನು ತಿಳಿದೆದೆಯೋ ಅದನ್ನು ಹೇಳಿದ್ದೇನೆ. ಮೋದಿ ಭೇಟಿಯಿಂದ ರಾಜ್ಯ ಮತ್ತು ಜನತೆಗೆ ಅನುಕೂಲವಾಗಲಿದೆ. ಈ ಭೇಟಿ ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ. ಮೋದಿ ಅವರೊಂದಿಗೆ ಮತ್ತೆ ಮಾತನಾಡುವುದಾಗಿ ಎಂದು ಪವನ್ ಕಲ್ಯಾಣ್ ತಿಳಿಸಿದರು. 

ತದನಂತರ ಜನಸೇನಾ ಮುಖಂಡರೊಂದಿಗೆ ಸಭೆ ನಡೆಸಿದ ಪವರ್ ಸ್ಟಾರ್, ಮೋದಿ ಅವರೊಂದಿಗೆ ಏನೆಲ್ಲಾ ಚರ್ಚಿಸಲಾಗಿದೆ ಎಂಬುದರ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಆಂಧ್ರಪ್ರದೇಶದಲ್ಲಿ ಪಕ್ಷ ಸಂಘಟನೆಯತ್ತ ಬಿಜೆಪಿ ಸಭೆ ಗಮನ:  ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶುಕ್ರವಾರ ರಾತ್ರಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಂಧ್ರ ಪ್ರದೇಶದಲ್ಲಿ ಬಿಜೆಪಿ ಬಲಪಡಿಸುವಿಕೆಯತ್ತ ಗಮನ ಹರಿಸಲಾಗಿದೆ. ಸಭೆ ನಂತರ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಸೋಮು ವೀರಾಜು, ರಾಜ್ಯ ಮತ್ತು ಪಕ್ಷಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಮೋದಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಆಂಧ್ರ ಪ್ರದೇಶ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಏನೆಲ್ಲಾ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ವಿವರಿಸಿದ್ದಾರೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com