ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಫೇಸ್‌ಬುಕ್ ಸ್ನೇಹಿತನಿಂದ ಹೈದರಾಬಾದ್ ಮಹಿಳೆಯ ಹತ್ಯೆ

ಹೈದರಾಬಾದ್ ಮೂಲದ ಮಹಿಳೆಯನ್ನು ಆಕೆಯ ಪ್ರಿಯಕರನೇ ಅಮ್ರೋಹಾದಲ್ಲಿ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಆರೋಪಿ ಮೊಹಮ್ಮದ್ ಶೆಹಜಾದ್ ನನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಮ್ರೋಹಾ: ಹೈದರಾಬಾದ್ ಮೂಲದ ಮಹಿಳೆಯನ್ನು ಆಕೆಯ ಪ್ರಿಯಕರನೇ ಅಮ್ರೋಹಾದಲ್ಲಿ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಆರೋಪಿ ಮೊಹಮ್ಮದ್ ಶೆಹಜಾದ್ ನನ್ನು ಬಂಧಿಸಲಾಗಿದೆ.

ಮೂರು ದಿನಗಳ ಹಿಂದೆ ಅಮ್ರೋಹಾ ಜಿಲ್ಲೆಯ ಭದ್ರತಾ ಏಜೆನ್ಸಿ ಕಚೇರಿಯಲ್ಲಿ ಮಹಿಳೆಯ ದೇಹವು ಜಜ್ಜಿದ ತಲೆಯೊಂದಿಗೆ ಪತ್ತೆಯಾಗಿದೆ.

36 ವರ್ಷದ ಮೊಹಮ್ಮದ್ ಶೆಹಜಾದ್ ಅಮ್ರೋಹಾದಲ್ಲಿ ಪೇಂಟ್ ಶಾಪ್ ನಡೆಸುತ್ತಿದ್ದಾನೆ. ಈ ವರ್ಷದ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದ. ಸ್ನೇಹ ಪ್ರೀತಿಗೆ ತಿರುಗುತ್ತಿದ್ದಂತೆ, ಮಹಿಳೆ ಶೆಹಜಾದ್ ಅವರನ್ನು ಭೇಟಿಯಾಗಲು ಬಯಸಿದ್ದರು ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡುವಂತೆ ಹೇಳಿದರು.

ಸಲ್ಮಾ ನಂತರ ಹೈದರಾಬಾದ್‌ನಿಂದ ನವೆಂಬರ್ 8 ರಂದು ಮೊದಲ ಬಾರಿಗೆ ಶೆಹಜಾದ್‌ನನ್ನು ಭೇಟಿಯಾಗಲು ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಪೊಲೀಸರ ಪ್ರಕಾರ, ಸಲ್ಮಾ ತನ್ನನ್ನು ಮದುವೆಯಾಗುವಂತೆ ಶೆಹಜಾದ್‌ಗೆ ಕೇಳಿದ್ದಾರೆ. ಆದರೆ, ಆತ ನಿರಾಕರಿಸಿದ್ದಾನೆ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ಶೆಹಜಾದ್ ಆಕೆಯ ತಲೆಗೆ ಇಟ್ಟಿಗೆಯಿಂದ ಹೊಡೆದು ನಂತರ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಶವವನ್ನು ತಮ್ಮ ಬಣ್ಣದ ಅಂಗಡಿಯ ಪಕ್ಕದಲ್ಲಿರುವ ಭದ್ರತಾ ಏಜೆನ್ಸಿಯ ಕಚೇರಿಯಲ್ಲಿ ಹಾಕಿದ್ದಾನೆ.

ಅಮ್ರೋಹಾ ಎಸ್‌ಪಿ ಆದಿತ್ಯ ಲಾಂಗೆಹ್, 'ನವೆಂಬರ್ 9 ರಂದು ಮಹಿಳೆ ಶವವನ್ನು ಕಚೇರಿಯೊಳಗೆ ಎಸೆದಿರುವುದು ಪತ್ತೆಯಾಯಿತು. ಐಡಿ ಕಾರ್ಡ್ ಸಹಾಯದಿಂದ ಆಕೆಯನ್ನು ಗುರುತಿಸಿದ ನಂತರ ಪೊಲೀಸರು ಸ್ಥಳದಿಂದ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಮಹಿಳೆಯೊಂದಿಗೆ ಫೇಸ್‌ಬುಕ್‌ನಲ್ಲಿ ಸಂಪರ್ಕಕ್ಕೆ ಬಂದಿರುವುದಾಗಿ ಮತ್ತು ಆಕೆ ತನ್ನನ್ನು ಭೇಟಿ ಮಾಡಲು ಗಜರೌಲಾ ಬಳಿಯ ಪೇಂಟ್ ಶಾಪ್‌ಗೆ ಬಂದು ಜಗಳವಾಡಿದ ಬಳಿಕ ಹೊಡೆದು ಸಾಯಿಸಿದ್ದಾಗಿ ತಿಳಿಸಿದ್ದಾನೆ.

ನಂತರ ಮಾತನಾಡಿದ ಎಸ್ಪಿ, 'ಆರೋಪಿ ವಿರುದ್ಧ ಕ್ರಿಮಿನಲ್ ಸಂಚು ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ, ಆತ ಮದ್ಯವ್ಯಸನಿಯಾಗಿದ್ದು, ಕೆಲವು ವರ್ಷಗಳ ಹಿಂದೆ ಆತನ ಪತ್ನಿ ಆತನಿಗೆ ವಿಚ್ಛೇದನ ನೀಡಿದ್ದಾಳೆ. ಘಟನೆ ಬಗ್ಗೆ ನಾವು ಹೈದರಾಬಾದ್ ಪೊಲೀಸರಿಗೆ ತಿಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com