ನಿರ್ಬಂಧ ವಾಪಸ್: ಇಂದಿನಿಂದ ದೆಹಲಿಯಲ್ಲಿ ಓಡಾಡಲಿವೆ BS-III ಪೆಟ್ರೋಲ್, BS-IV ಡೀಸೆಲ್ ನಾಲ್ಕು ಚಕ್ರದ ವಾಹನಗಳು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬಿಎಸ್‌-III ಪೆಟ್ರೋಲ್‌ ಮತ್ತು ಬಿಎಸ್‌-IV ಡೀಸೆಲ್‌ ಡೀಸೆಲ್‌ ನಾಲ್ಕು ಚಕ್ರ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರುವ ಕುರಿತು ದೆಹಲಿ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: BS-III ಪೆಟ್ರೋಲ್ ಮತ್ತು BS-IV ಡೀಸೆಲ್ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಸೋಮವಾರದಿಂದ ದೆಹಲಿಯ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತದೆ. ಏಕೆಂದರೆ, ಹೆಚ್ಚುತ್ತಿರುವ ಮಾಲಿನ್ಯದ ದೃಷ್ಟಿಯಿಂದ ಅವುಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳು ಭಾನುವಾರ ಕೊನೆಗೊಂಡಿವೆ.

ಆದರೆ, ನಿರ್ಬಂಧ ಮುಂದುವರಿಸುವ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ.

ಮಾಹಿತಿಯ ಪ್ರಕಾರ, ಕಳೆದ ಕೆಲವು ದಿನಗಳಿಂದ ದೆಹಲಿಯ ಗಾಳಿಯ ಗುಣಮಟ್ಟ ಸ್ಥಿರವಾಗಿದೆ. ಇದೇ ಕಾರಣಕ್ಕೆ ನಿರ್ಬಂಧಿಸುವ ಕುರಿತು ಹೊಸ ಆದೇಶ ಹೊರಡಿಸಿಲ್ಲ. ಆದರೆ, ಇಡೀ ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ. ಒಂದು ವೇಳೆ AQI ಮಟ್ಟದಲ್ಲಿ ಹೆಚ್ಚಳ ಕಂಡುಬಂದರೆ, ನಂತರ ಅದರ ಬಗ್ಗೆ ಮತ್ತಷ್ಟು ನಿರ್ಧಾರ ತೆಗೆದುಕೊಳ್ಳಬಹುದು ಎನ್ನಲಾಗಿದೆ.

'ನವೆಂಬರ್ 13 ರವರೆಗೆ ಈ ನಿರ್ಬಂಧಗಳು ಜಾರಿಯಲ್ಲಿದ್ದವು ಮತ್ತು ಅವುಗಳನ್ನು ವಿಸ್ತರಿಸಲಾಗಿಲ್ಲ. ರಾಜಧಾನಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) ಸ್ಥಿರವಾಗಿದೆ. ಹೀಗಾಗಿ ಏನು ಮಾಡಬೇಕು ಎಂಬುದರ ಕುರಿತು ಚರ್ಚಿಸಲು ಸಭೆ ನಡೆಯಲಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ ವಾರ ನಡೆದ ಪರಿಶೀಲನಾ ಸಭೆಯಲ್ಲಿ, ದೆಹಲಿ ಸರ್ಕಾರದ ಸಾರಿಗೆ ಇಲಾಖೆಯು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್‌ಎಪಿ) ಯ ಹಂತ 3 ರ ಅಡಿಯಲ್ಲಿ ಜಾರಿಯಲ್ಲಿರುವ ನಿರ್ಬಂಧಗಳು ತುರ್ತು ಪ್ರತಿಕ್ರಿಯೆಯ ಬದಲಿಗೆ ಮುಂದಿನ ಕೆಲವು ದಿನಗಳವರೆಗೆ ಜಾರಿಯಲ್ಲಿರಬೇಕು ಎಂದು ನಿರ್ಧರಿಸಿತ್ತು.

ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್‌ನ ಹಂತ III ರ ಅಡಿಯಲ್ಲಿ ದೆಹಲಿಯಲ್ಲಿ BS-III ಪೆಟ್ರೋಲ್ ಮತ್ತು BS-IV ಡೀಸೆಲ್ ನಾಲ್ಕು ಚಕ್ರದ ವಾಹನಗಳನ್ನು ನಿಷೇಧಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರೈ ಕಳೆದ ಸೋಮವಾರ ಹೇಳಿದ್ದರು.

ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಮತ್ತು 20,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ಕಳೆದ ವಾರ ಆದೇಶದಲ್ಲಿ ತಿಳಿಸಿತ್ತು.

ತುರ್ತು ಸೇವೆಗಳು ಮತ್ತು ಸರ್ಕಾರಿ ಹಾಗೂ ಚುನಾವಣಾ ಸಂಬಂಧಿತ ಕೆಲಸಗಳಿಗಾಗಿ ನಿಯೋಜಿಸಲಾದ ವಾಹನಗಳು ನಿಷೇಧದ ವ್ಯಾಪ್ತಿಗೆ ಬರುವುದಿಲ್ಲ.

ಸಾರಿಗೆ ಇಲಾಖೆಯು ತನ್ನ ಆದೇಶದಲ್ಲಿ, 'ಜಿಆರ್‌ಎಪಿ ಹಂತ III ರ ಅಡಿಯಲ್ಲಿ ನೀಡಿರುವ ನಿರ್ದೇಶನಗಳ ಪ್ರಕಾರ, ದೆಹಲಿ ಎನ್‌ಸಿಆರ್ ವ್ಯಾಪ್ತಿಯಲ್ಲಿ BS-III ಪೆಟ್ರೋಲ್ ಮತ್ತು BS-IV ಡೀಸೆಲ್ ಲಘು ಮೋಟಾರು ವಾಹನಗಳನ್ನು (ನಾಲ್ಕು ಚಕ್ರಗಳು) ಓಡಿಸಲು ನಿರ್ಬಂಧವಿರುತ್ತದೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com