ಗ್ಯಾನ್ ವಾಪಿ: ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ತೀರ್ಪು ನ.17 ಕ್ಕೆ ಮುಂದೂಡಿಕೆ

ಗ್ಯಾನ್ ವಾಪಿ ಮಸೀದಿಯಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ತೀರ್ಪನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ನ.17 ಕ್ಕೆ ಮುಂದೂಡಿದೆ.
ಗ್ಯಾನ್ ವಾಪಿ ಮಸೀದಿ (ಸಂಗ್ರಹ ಚಿತ್ರ)
ಗ್ಯಾನ್ ವಾಪಿ ಮಸೀದಿ (ಸಂಗ್ರಹ ಚಿತ್ರ)

ವಾರಣಾಸಿ: ಗ್ಯಾನ್ ವಾಪಿ ಮಸೀದಿಯಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ತೀರ್ಪನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ನ.17 ಕ್ಕೆ ಮುಂದೂಡಿದೆ.
 
ಸಿವಿನ್ ನ್ಯಾಯಾಧೀಶ (ಹಿರಿಯ ವಿಭಾಗ) ಮಹೇಂದ್ರ ಪಾಂಡೆ, ತೀರ್ಪನ್ನು ನ.17 ಕ್ಕೆ ಮುಂದೂಡಿದ್ದಾರೆ ಎಂದು ಜಿಲ್ಲಾ ಸಹಾಯಕ  ಸರ್ಕಾರಿ ವಕೀಲ ಸುಲಭ್ ಪ್ರಕಾಶ್ ಹೇಳಿದ್ದಾರೆ. ಅ.27 ರಂದು ವಿವಾದಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ವಾದವನ್ನು ಆಲಿಸಿದ ಕೋರ್ಟ್, ನ.8 ರಂದು ತೀರ್ಪನ್ನು ಕಾಯ್ದಿರಿಸಿತ್ತು. ನ.8 ರಂದು ನ್ಯಾಯಾಧೀಶರು ರಜೆಯಲ್ಲಿದ್ದ ಕಾರಣ ಸೋಮವಾರಕ್ಕೆ (ನ.14) ಕ್ಕೆ ಮುಂದೂಡಲಾಗಿತ್ತು.

ಮೇ.24 ರಂದು, ವಿಶ್ವ ವೈದಿಕ ಸನಾತನ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಾದಿ ಕಿರಣ್ ಸಿಂಗ್ ವಾರಾಣಾಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, "ಗ್ಯಾನ್ ವಾಪಿ ಸಂಕೀರ್ಣಕ್ಕೆ ಮುಸ್ಲಿಮರ ಪ್ರವೇಶವನ್ನು ನಿರ್ಬಂಧಿಸಿ ಆ ಪ್ರದೇಶವನ್ನು ಸನಾತನ ಸಂಘಕ್ಕೆ ಹಸ್ತಾಂತರಿಸಿ ಅಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸುವುದಕ್ಕೆ ಅನುಮತಿ ನೀಡಬೇಕು" ಎಂದು ಮನವಿ ಮಾಡಿದ್ದರು. ಮೇ.25 ರಂದು ಜಿಲ್ಲಾ ನ್ಯಾಯಾಧೀಶರಾದ ಎ.ಕೆ ವಿಶ್ವೇಶ್ ಅವರು ಫಾಸ್ಟ್ ಟ್ರ್ಯಾಕ್ ಕೋರ್ಟ್ ಗೆ ಪ್ರಕರಣವನ್ನು ವರ್ಗಾಯಿಸಿದ್ದರು. 

ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ಆಯುಕ್ತರು, ಗ್ಯಾನ್ ವಾಪಿ ಮಸೀದಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಅಂಜುಮನ್ ಇಂತಾಜ್ಮಿಯಾ ಸಮಿತಿ, ವಿಶ್ವನಾಥ ದೇವಾಲಯ ಟ್ರಸ್ಟ್ ನ್ನು ಪ್ರಕರಣದಲ್ಲಿ ರೆಸ್ಪಾಂಡೆಂಟ್ ಆಗಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com