ಬಂಬಲ್ ಡೇಟಿಂಗ್ ಆಪ್ ನಿಂದ ಅಫ್ತಾಬ್ ಡೇಟಿಂಗ್ ವಿವರ ಕೇಳಲು ಪೊಲೀಸರು ಮುಂದು; ಬಂಬಲ್ ಆಪ್ ಮೂಲ ಗೊತ್ತೇ?
ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಬೆಳವಣಿಗೆಯಲ್ಲಿ ದೆಹಲಿ ಪೊಲೀಸರು ಡೇಟಿಂಗ್ ಆಪ್ ಬಂಬಲ್ ನಿಂದ ಅಫ್ತಾಬ್ ಪೂನಾವಾಲನ ಡೇಟಿಂಗ್ ವಿವರಗಳನ್ನು ಕೇಳುವ ಸಾಧ್ಯತೆ ಇದೆ.
Published: 15th November 2022 04:19 PM | Last Updated: 15th November 2022 06:47 PM | A+A A-

ಪೊಲೀಸರ ವಶದಲ್ಲಿರುವ ಅಫ್ತಾಬ್
ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಬೆಳವಣಿಗೆಯಲ್ಲಿ ದೆಹಲಿ ಪೊಲೀಸರು ಡೇಟಿಂಗ್ ಆಪ್ ಬಂಬಲ್ ನಿಂದ ಅಫ್ತಾಬ್ ಪೂನಾವಾಲನ ಡೇಟಿಂಗ್ ವಿವರಗಳನ್ನು ಕೇಳುವ ಸಾಧ್ಯತೆ ಇದೆ.
ಅಫ್ತಾಬ್ ನೊಂದಿಗೆ ಸಂಪರ್ಕ ಹೊಂದಿದ್ದ ಮತ್ತಷ್ಟು ಮಹಿಳೆಯರ ವಿವರಗಳನ್ನು ಪಡೆಯಲು ಪೊಲೀಸರು ಉದ್ದೇಶಿಸಿದ್ದಾರೆ. ಈಗ ತಾನು ಹತ್ಯೆ ಮಾಡಿರುವ ಶ್ರದ್ಧಾಳನ್ನೂ ಸಹ ಅಫ್ತಾಬ್ ಬಂಬಲ್ ಆಪ್ ನಲ್ಲೇ ಭೇಟಿ ಮಾಡಿದ್ದ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ದೆಹಲಿ ಪೊಲೀಸರಿಗೆ ಅಫ್ತಾಬ್ ಇದೇ ಡೇಟಿಂಗ್ ಆಪ್ ನಲ್ಲಿ ಭೇಟಿ ಮಾಡಿದ್ದ ಬೇರೊಬ್ಬ ಮಹಿಳೆಗೂ ಶ್ರದ್ಧಾ ಹತ್ಯೆಗೂ ಸಂಬಂಧವಿರಬಹುದು ಎಂಬ ಶಂಕೆ ಇದೆ.
ಇದನ್ನೂ ಓದಿ: ಶ್ರದ್ಧಾ ದೇಹದ ಭಾಗಗಳು ಫ್ರಿಡ್ಜ್ ನಲ್ಲಿರುವಾಗಲೇ ಹೊಸ ಗೆಳತಿಯನ್ನು ಮನೆಗೆ ಕರೆತಂದಿದ್ದ ಪಾತಕ ಪ್ರೇಮಿ!
ಶ್ರದ್ಧಾಳ ದೇಹ ಇನ್ನೂ ಫ್ರಿಡ್ಜ್ ನಲ್ಲೇ ಇರಬೇಕಾದರೆ ಆತನ ಮನೆಗೆ ಬಂದು ಹೋಗಿದ್ದ ಮಹಿಳೆಯರ ವಿವರಗಳನ್ನು ಪಡೆಯುವುದಕ್ಕಾಗಿ ದೆಹಲಿ ಪೊಲೀಸರು ಬಂಬಲ್ ಡೇಟಿಂಗ್ ಆಪ್ ನಿಂದ ಮಾಹಿತಿ ಪಡೆಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಂಬಲ್ ಆಪ್ ನ ಕೇಂದ್ರ ಕಚೇರಿ ಅಮೇರಿಕಾದ ಟೆಕ್ಸಾಸ್ ನಲ್ಲಿದೆ.
ಶ್ರದ್ಧಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಈಗಾಗಲೇ ಅಫ್ತಾಬ್ ಶ್ರದ್ಧಾಳ ದೇಹದ ತುಂಡುಗಳನ್ನು ಎಸೆದಿದ್ದ ಪ್ರದೇಶಗಳಲ್ಲಿ ಮನುಷ್ಯನದ್ದೆಂದು ಶಂಕಿಸಲಾಗಿರುವ 12 ದೇಹದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.