ಶ್ರದ್ಧಾಳ ಕೊಲೆ ಪ್ರಕರಣದ ಹಿಂದೆ 'ಲವ್ ಜಿಹಾದ್? ತನಿಖೆಗೆ ಬಿಜೆಪಿ ಶಾಸಕ ಕದಂ ಒತ್ತಾಯ

ದೇಶದಾದ್ಯಂತ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವ ಶ್ರಾದ್ಧ ವಾಕರ್ ಹತ್ಯೆ ಹಿಂದೆ 'ಲವ್ ಜಿಹಾದ್' ಸಾಧ್ಯತೆ ಕುರಿತು ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಪತ್ರ ಬರೆಯುವುದಾಗಿ ಬಿಜೆಪಿ ಶಾಸಕ ರಾಮ್ ಕದಂ ಮಂಗಳವಾರ ಹೇಳಿದ್ದಾರೆ.
ಆರೋಪಿ ಆಫ್ತಾಬ್, ಶ್ರದ್ಧಾ
ಆರೋಪಿ ಆಫ್ತಾಬ್, ಶ್ರದ್ಧಾ

ಮುಂಬೈ: ದೇಶದಾದ್ಯಂತ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವ ಶ್ರಾದ್ಧ ವಾಕರ್ ಹತ್ಯೆ ಹಿಂದೆ 'ಲವ್ ಜಿಹಾದ್' ಸಾಧ್ಯತೆ ಕುರಿತು ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಪತ್ರ ಬರೆಯುವುದಾಗಿ ಬಿಜೆಪಿ ಶಾಸಕ ರಾಮ್ ಕದಂ ಮಂಗಳವಾರ ಹೇಳಿದ್ದಾರೆ.

ವಿವಾಹ ಮೂಲಕ ಹಿಂದೂ ಮಹಿಳೆಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸುವ ಪ್ರಯತ್ನವನ್ನು 'ಲವ್ ಜಿಹಾದ್' ಎಂದು  ಬಲಪಂಥೀಯ ಗುಂಪುಗಳು ಮತ್ತು ಹೋರಾಟಗಾರರು ಕರೆಯುತ್ತಾರೆ.  ಶ್ರದ್ಧಾಳ ಕೊಲೆ ಹಿನ್ನೆಲೆಯಲ್ಲಿ ಘಟ್ಕೊಪರ್ ನಲ್ಲಿ ಪ್ರತಿಭಟನೆ ನಡೆಸಿದ ಶಾಸಕ ಕದಂ ಹಾಗೂ ಅವರ ಬೆಂಬಲಿಗರು, ಆರೋಪಿ ಆಫ್ತಾಬ್ ಅಮಿನ್ ಪೂನಾವಾಲ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕದಂ, ಆಫ್ತಾಬ್ ಪೂನಾವಾಲಾ ಶ್ರದ್ಧಾಳನ್ನು ಹತ್ಯೆ ಮಾಡಿರುವ ಹಿಂದೆ 'ಲವ್ ಜಿಹಾದಿ'' ಸಾಧ್ಯತೆ ಕುರಿತು ತನಿಖೆ ಮಾಡುವಂತೆ ದೆಹಲಿ ಪೊಲೀಸರಿಗೆ ಪತ್ರ ಬರೆದು ಮನವಿ ಮಾಡುತ್ತೇನೆ. ಇಂತಹ ಕೃತ್ಯದ ಹಿಂದೆ ಯಾವುದೇ ಗುಂಪು ಅಥವಾ ಗ್ಯಾಂಗ್ ಇದೆಯಾ? ಶತ್ರು ರಾಜ್ಯ ಇದರಲ್ಲಿ ತೊಡಗಿಸಿಕೊಂಡಿಯಾ? ಎಂಬುದು  ತನಿಖೆಯಿಂದ ಬಯಲಾಗಬೇಕು ಎಂದರು.

ಶ್ರದ್ದಾಳದ್ದು ಮಾತ್ರವಲ್ಲ, ಇಂತಹದ್ದೇ ಘಟನೆಗಳು ಈ ಹಿಂದೆ ನಡೆದಿದೆ ಎಂದು ಹೇಳಿದ ಕದಂ, ಮೃತ ಯುವತಿಯ ಕುಟುಂಬಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು. ನರ ಹಂತಕ ಅಲ್ತಾಫ್ ಶ್ರದ್ಧಾಳನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡು ತಂಡಾಗಿ ಕತ್ತರಿಸಿ, ಫ್ರೀಡ್ಜ್ ನಲ್ಲಿಟ್ಟದ. ನಂತರ ಮಧ್ಯರಾತ್ರಿಯಲ್ಲಿ ಒಂದೊಂದೆ ತುಂಡನ್ನು ಅರಣ್ಯದೊಳಗೆ ಎಸೆಯುತ್ತಿದ್ದ ಎಂದು ಈ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com