ಗುಜರಾತ್ ಚುನಾವಣೆ: 150ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು ಖಚಿತ- ಹಾರ್ದಿಕ್ ಪಟೇಲ್ ವಿಶ್ವಾಸ
ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದರೊಂದಿಗೆ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ವಿರಾಮ್ ಗಂ ಕ್ಷೇತ್ರದ ಅಭ್ಯರ್ಥಿ
ಹಾರ್ದಿಕ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published: 18th November 2022 12:01 PM | Last Updated: 18th November 2022 01:54 PM | A+A A-

ಹಾರ್ದಿಕ್ ಪಟೇಲ್
ಅಹಮದಾಬಾದ್: ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದರೊಂದಿಗೆ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ವಿರಾಮ್ ಗಂ ಕ್ಷೇತ್ರದ ಅಭ್ಯರ್ಥಿ
ಹಾರ್ದಿಕ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಎಎಪಿ, ಕಾಂಗ್ರೆಸ್ ಗುಜರಾತ್ ಸಂಸ್ಕೃತಿ ಮತ್ತು ಹೆಮ್ಮೆಗೆ ವಿರುದ್ದವಾಗಿವೆ. 7 ಕೋಟಿ ಗುಜರಾತ್ ಜನರು ಬಿಜೆಪಿಯನ್ನು ಇಷ್ಟಪಟ್ಟಿದ್ದಾರೆ. ಪ್ರತಿಯೊಬ್ಬ ಗುಜರಾತಿಗಳು ಗುಜರಾತ್ ಸರ್ಕಾರಕ್ಕೆ ಉಚಿತವಾಗಿ ವಿದ್ಯುತ್ ಪೂರೈಸುತ್ತಾರೆ. ಎಲ್ಲಾ ಮನೆಗಳು ಸೌರ ಫಲಕಗಳನ್ನು ಹೊಂದಿವೆ ಎಂದು ಅವರು ತಿಳಿಸಿದರು.
We will ensure our victory. (BJP) government is going to be formed with a majority, with more than 150 seats. We are here to give our contribution to this: BJP candidate from Viramgam, Hardik Patel, on another BJP candidate Alpesh Thakor and himself#GujaratElections2022 pic.twitter.com/jiVrffUo8B
— ANI (@ANI) November 18, 2022
ಕಾಂಗ್ರೆಸ್ ಮಾತನ್ನು ಗುಜರಾತ್ ಜನರು ಕೇಳಲ್ಲ. ಕಾಂಗ್ರೆಸ್ ನಲ್ಲಿದ್ದಾಗ ಇದನ್ನು ನಾನು ನೋಡಿದ್ದೇನೆ. ಎಲ್ಲಾ ಸಮಯಗಳಲ್ಲಿಯೂ ಕಾಂಗ್ರೆಸ್ ಗುಜರಾತಿಗಳನ್ನು ಅವಮಾನಿಸಿದೆ ಮತ್ತು ರಾಜ್ಯದ ಹೆಮ್ಮೆಯನ್ನು ಪ್ರಶ್ನಿಸಿದೆ. ಇದನ್ನು ಗುಜರಾತ್ ಜನರು ಎಂದಿಗೂ ಸಹಿಸಲ್ಲ ಎಂದರು.
ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ: ನ.20ರಿಂದ ಮೂರು ದಿನ ಪ್ರಧಾನಿ ಮೋದಿ ಚುನಾವಣಾ ರ್ಯಾಲಿ
ಗುಜರಾತ್ ನನ್ನ ಜನ್ಮಭೂಮಿ, ಕರ್ಮಭೂಮಿ, ಮಾತೃಭೂಮಿಯಾಗಿದ್ದು, ಇಲ್ಲಿನ ಜನರನ್ನು ನನ್ನನ್ನು ಗೆಲ್ಲಿಸುವ ಅಚಲ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪರಿಸರ ಅಭಿವೃದ್ಧಿ ನೀತಿಯನ್ನು ಅನುಷ್ಠಾನಗೊಳಿಸುವತ್ತ ಕೆಲಸ ಮಾಡುತ್ತೇನೆ. ಬಿಜೆಪಿ ಕೊಡುವ ಜವಾಬ್ದಾರಿಯನ್ನು ಹೊರುತ್ತೇನೆ. ಪ್ರತಿಯೊಬ್ಬರನ್ನು ಒಟ್ಟಾಗಿ ತೆಗೆದುಕೊಳ್ಳುವ ಮೂಲಕ ಚುನಾವಣೆಯಲ್ಲಿ ಗೆದ್ದೆ ಗೆಲುತ್ತೇನೆ ಎಂದು ಹಾರ್ದಿಕ್ ಪಟೇಲ್ ಹೇಳಿದರು.