ಆರ್‌ಎಸ್‌ಎಸ್ ಸಿದ್ಧಾಂತವನ್ನು ಜಾರಿಗೊಳಿಸುತ್ತಿಲ್ಲ; ಸಾಬೀತಾದರೆ ರಾಜೀನಾಮೆ ನೀಡಲು ಸಿದ್ಧ: ರಾಜ್ಯಪಾಲ ಆರಿಫ್ ಖಾನ್
ತಮ್ಮ ಸಾಂವಿಧಾನಿಕ ಸ್ಥಾನಮಾನವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂಬ ಆರೋಪವನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಳ್ಳಿಹಾಕಿದ್ದಾರೆ.
Published: 18th November 2022 03:41 PM | Last Updated: 18th November 2022 03:41 PM | A+A A-

ಆರಿಫ್ ಮೊಹಮ್ಮದ್ ಖಾನ್
ತಿರುವನಂತಪುರಂ: ತಮ್ಮ ಸಾಂವಿಧಾನಿಕ ಸ್ಥಾನಮಾನವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂಬ ಆರೋಪವನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಳ್ಳಿಹಾಕಿದ್ದಾರೆ.
ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ಆಡಳಿತಾರೂಢ ಎಲ್‌ಡಿಎಫ್ ನಡುವೆ ತೀವ್ರ ವಾಗ್ವಾದ ಮುಂದುವರಿದಿದೆ. ರಾಜ್ಯ ಸರ್ಕಾರವು 'ರಾಜಕೀಯವಾಗಿ ತೊಂದರೆದಾಯಕ' ಎಂದು ಪರಿಗಣಿಸುವ ಆರ್ ಎಸ್ಎಸ್ ಸಂಘಟನೆಗೆ ಸೇರಿದ ಯಾರನ್ನಾದರೂ ನೇಮಕ ಮಾಡಿರುವ ಒಂದೇ ಒಂದು ನಿದರ್ಶನ ನೀಡಿದರೆ ರಾಜೀನಾಮೆ ನೀಡಲು ಸಿದ್ಧ. ಕಾನೂನು ಪ್ರಕಾರ ಸರ್ಕಾರ ನಡೆಯುವಂತೆ ನೋಡಿಕೊಳ್ಳುವುದು ತಮ್ಮ ಕೆಲಸ ಎಂದು ಆರಿಫ್ ಖಾನ್ ಹೇಳಿದರು.
ಮೂರು ವರ್ಷಗಳಿಂದ ಕೇರಳ ಗವರ್ನರ್ ಆಗಿರುವ ಆರಿಫ್ ಖಾನ್ ತಮ್ಮ ಸ್ಥಾನವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. ರಾಜಕೀಯೀಕರಣ ಎಲ್ಲಿದೆ? ಕಳೆದ ಮೂರು ವರ್ಷಗಳಿಂದ ನಾನು ಆರ್‌ಎಸ್‌ಎಸ್ ಅಜೆಂಡಾವನ್ನು ಜಾರಿಗೆ ತರುತ್ತಿದ್ದೇನೆ ಎಂದು ಹೇಳುತ್ತಿದ್ದೀರಿ. ನಾನು ನಿಮಗೆ ರಾಜಕೀಯವಾಗಿ ಸ್ನೇಹಿಯಲ್ಲದ ಯಾರನ್ನಾದರೂ ನೇಮಿಸಿದ್ದೇನೆ ಎಂಬುದಕ್ಕೆ ಒಂದೇ ಒಂದು ಉದಾಹರಣೆ ನೀಡಿ. ನನ್ನ ಅಧಿಕಾರ ಅಥವಾ ವಿಶ್ವವಿದ್ಯಾನಿಲಯವನ್ನು ಬಳಸಿಕೊಂಡು ನಾನು ಆರೆಸ್ಸೆಸ್ ಸಂಘಟನೆ ಹಾಗೂ ಬಿಜೆಪಿಗೆ ಸೇರಿದ ಯಾರನ್ನಾದರೂ ನೇಮಿಸಿದ್ದು ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲ ಆರಿಫ್ ಖಾನ್ ಆರ್'ಎಸ್ಎಸ್ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ: ಸಿಎಂ ಪಿಣರಾಯಿ ವಿಜಯನ್
ಯಾರಾದರೂ ಇಂತಹ ಕೆಲಸಗಳನ್ನು ಮಾಡಿದರೆ ಅದನ್ನು ರಾಜಕೀಯಗೊಳಿಸಬಹುದು. ನಾನು ಅದನ್ನು ಮಾಡಿಲ್ಲ ಅಥವಾ ಹಾಗೆ ಮಾಡುವಂತೆ ನನ್ನ ಮೇಲೆ ಯಾವುದೇ ಒತ್ತಡವೂ ಇಲ್ಲ. ಆರಿಫ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ನಡುವೆ ನಡೆಯುತ್ತಿರುವ ಜಗಳದ ನಡುವೆ ಎಡಪಕ್ಷಗಳು ಮಂಗಳವಾರ ರಾಜ್ಯ ರಾಜಧಾನಿ ತಿರುವನಂತಪುರಂನಲ್ಲಿರುವ ರಾಜಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದವು. ಈ ವೇಳೆ ಮಾತನಾಡಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯಪಾಲರ ಕಚೇರಿಯನ್ನು ಕಣಕ್ಕಿಳಿಸುವ ಪರಿಸ್ಥಿತಿ ಇದೆ ಎಂದು ಹೇಳಿದ್ದರು.
ಶಿಕ್ಷಣವನ್ನು ನಿಯಂತ್ರಿಸುವ ಈ ವಿಷಯವು ಈ ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತವನ್ನು ಫ್ಯಾಸಿಸ್ಟ್ ಹಿಂದುತ್ವ ರಾಷ್ಟ್ರವನ್ನಾಗಿ ಪರಿವರ್ತಿಸಲು ಬಿಜೆಪಿ-ಆರ್‌ಎಸ್‌ಎಸ್ ರಾಜಕೀಯ ವಿನ್ಯಾಸದ ಪ್ರಮುಖ ಅಂಶವಾಗಿದೆ. ಅದಕ್ಕಾಗಿ ಅವರು ಶಿಕ್ಷಣ ಮತ್ತು ನಮ್ಮ ಯುವಕರ ಪ್ರಜ್ಞೆಯನ್ನು ನಿಯಂತ್ರಿಸಲು ಮುಂದಾಗುತ್ತಿದ್ದಾರೆ ಎಂದು ಯೆಚೂರಿ ಹೇಳಿದ್ದಾರೆ.