ಬಿಹಾರ ಸಿಎಂ ಜೊತೆ ಮುಸುಕಿನ ಗುದ್ದಾಟ; ಆರ್ ಜೆಡಿ ಮುಖ್ಯಸ್ಥರ ಸ್ಥಾನ ಪಲ್ಲಟ; ಪುತ್ರ ವ್ಯಾಮೋಹಕ್ಕೆ ಬಲಿ ರಾಜ್ಯಾಧ್ಯಕ್ಷರ ಪಟ್ಟ?

ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಉಂಟಾಗಿರುವ ಅಸಮಾಧಾನದ ಹಿನ್ನೆಲೆಯಲ್ಲಿ  ಆರ್ ಜೆಡಿ ಮುಖ್ಯಸ್ಥ  ಜಗದಾನಂದ್ ಸಿಂಗ್ ಅವರನ್ನು ಬದಲಾಯಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ತೇಜಸ್ವಿ ಯಾದವ್
ತೇಜಸ್ವಿ ಯಾದವ್

ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಉಂಟಾಗಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಆರ್ ಜೆಡಿ ಮುಖ್ಯಸ್ಥ  ಜಗದಾನಂದ್ ಸಿಂಗ್ ಅವರನ್ನು ಬದಲಾಯಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಆರ್ ಜೆಡಿ ರಾಜ್ಯಾಧ್ಯಕ್ಷ  ಸ್ಥಾನಕ್ಕೆ ಜಗದಾನಂದ್ ಸಿಂಗ್ ಅವರ ಬದಲಿಗೆ ಬಿಹಾರ ಮಾಜಿ ಸಚಿವ ಅಬ್ದುಲ್ ಬಾರಿ ಸಿದ್ಧಿಖಿ ಅವರನ್ನು ನೇಮಿಸುವ ಸಾಧ್ಯತೆಯಿದ್ದು, ನವೆಂಬರ್ 24 ರಂದು ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಲಾಲು ಪ್ರಸಾದ್ ಅವರ ಆಪ್ತವಲಯದಲ್ಲಿ ಜಗದನಾಂದ ಸಿಂಗ್ ಗುರುತಿಸಿಕೊಂಡಿದ್ದಾರೆ, ನಿತೀಶ್ ಕುಮಾರ್ ಅವರ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಜಗದಾನಂದ ಸಿಂಗ್ ಪುತ್ರ ಸುಧಾಕರ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈ ಘಠನೆ ನಂತರ ಎಷ್ಟೇ ಮನವೊಲಿಸಿದರು ಬೇಸರಗೊಂಡಿರುವ ಜಗದಾನಂದ ಸಿಂಗ್ ಪಕ್ಷದ ಕೆಲಸಗಳಲ್ಲಿ ನಿಷ್ಕ್ರಿಯರಾಗಿದ್ದಾರೆ.

ಜಗದಾನಂದ್ ಅವರು ಅಕ್ಟೋಬರ್ 2 ರಿಂದ ರಾಜ್ಯ ಪಕ್ಷದ ಕಚೇರಿಗೆ ಭೇಟಿ ನೀಡಿಲ್ಲ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಎರಡು ದಿನಗಳ ಪಕ್ಷದ ಸಭೆಗೂ ಅವರು ಹಾಜರಾಗಿರಲಿಲ್ಲ. ಸುಧಾಕರ್ ಅವರು ತಮ್ಮ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ನಂತರ ಮತ್ತು ಸಿಎಂ ರೂಪಿಸಿದ ಕೃಷಿ ಯೋಜನೆಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ ನಂತರ ರಾಜೀನಾಮೆ ನೀಡಲು ಸೂಚಿಸಲಾಯಿತು, ಲಾಲು ಅವರ ಮತ್ತೊಬ್ಬ ಆಪ್ತ ಭೋಳ ಯಾದವ್, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಲಾಲು ಪ್ರಸಾದ್ ಅವರನ್ನು ದೆಹಲಿಯಲ್ಳಿ ಭೇಟಿ ಮಾಡಿದ ಜಗದಾನಂದ್ ತಾವು ಹುದ್ದೆಯಲ್ಲಿ ಮುಂದುವರಿಯುವುದಿಲ್ಲ, ತಮ್ಮ ಆರೋದ್ಯ ಸಮಸ್ಯೆ ಇದಕ್ಕೆ ಅಡ್ಡಿಯಾಗಿದೆ ಎಂದು ಕಾರಣ ನೀಡಿದ್ದಾರೆ ಎನ್ನಲಾಗಿದೆ.

ಸುಮಾರು ಏಳು ವರ್ಷಗಳ ಕಾಲ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಸಿದ್ದಿಕಿ ಅವರಿಗೆ ರಾಜ್ಯ ಪಕ್ಷದ ಅಧಿಕಾರವನ್ನು ಮರಳಿ ನೀಡುವ ಮೂಲಕ ಆರ್‌ಜೆಡಿ ತನ್ನ ಮುಸ್ಲಿಂ-ಯಾದವ ಮತ ಬ್ಯಾಂಕ್  ಬಲಪಡಿಸಲು ಮುಂದಾಗಿದೆ.

ಜಗದಾನಂದ್ ಸಿಂಗ್ ಬದಲಿಗೆ ಸಿದ್ದಿಕಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿದೆ ಎಂಬ ಊಹಾಪೋಹವನ್ನು ಪಕ್ಷದ ವಕ್ತಾರ ಚಿತ್ರಂಜನ್ ಗಗನ್ ತಳ್ಳಿಹಾಕಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಅತ್ಯಂತ ಹಿರಿಯ ನಾಯಕನಾಗಿದ್ದರೂ ರಾಜ್ಯಸಭಾ ಸದಸ್ಯತ್ವವನ್ನು ನಿರಾಕರಿಸಿದ್ದರಿಂದ ಸಿದ್ದಿಖಿಗೆ ಈ ಬಾರಿ ಹುದ್ದೆ ಸಿಗಲಿದೆ ಎಂದು ಪಕ್ಷದ ಕೆಲವು ಮುಖಂಡರು ಹೇಳಿದ್ದಾರೆ.

ಮಿಥಿಲಾಂಚಲ್‌ನಲ್ಲಿ ಸಿದ್ದಿಕಿ ಸಾಕಷ್ಟು ಪ್ರಭಾವವನ್ನು ಹೊಂದಿದ್ದರೂ, ಆ ಪ್ರದೇಶದಿಂದ ಬಂದ ಮತ್ತೊಬ್ಬ ನಾಯಕ ಫೈಯಾಜ್ ಆಲಂ ಅವರನ್ನು ರಾಜ್ಯಸಭೆಗೆ ಕಳುಹಿಸಲಾಯಿತು. 2020 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹರಿಭೂಷಣ್ ಠಾಕೂರ್ ವಿರುದ್ಧ ಸಿದ್ದಿಕಿ ಸೋತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com