ಪತ್ನಿ ಮೇಲೆ ಹಲ್ಲೆ, ಅತ್ಯಾಚಾರ ಆರೋಪ: ಮಧ್ಯಪ್ರದೇಶದ ಮಾಜಿ ಸಚಿವ ಉಮಾಂಗ್ ಸಿಂಘಾರ್ ವಿರುದ್ಧ ಪ್ರಕರಣ ದಾಖಲು
ಮಾಜಿ ಸಚಿವ ಸಿಂಘಾರ್ ತನ್ನ ಅಧಿಕೃತ ನಿವಾಸ, ಭೋಪಾಲ್‌ನ ಮತ್ತೊಂದು ಮನೆ ಅಲ್ಲದೇ, ದೆಹಲಿಯ ಎನ್‌ಸಿಆರ್ ಫ್ಲಾಟ್ ನಲ್ಲಿ ಮದುವೆ ನೆಪದಲ್ಲಿ ತನ್ನೊಂದಿಗೆ ಲೈಂಗಿಕವಾಗಿ ಸಂಪರ್ಕ ನಡೆಸಿದ್ದು, ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
Published: 21st November 2022 11:06 PM | Last Updated: 22nd November 2022 03:17 PM | A+A A-

ಮಧ್ಯಪ್ರದೇಶದ ಮಾಜಿ ಸಚಿವ ಉಮಾಂಗ್ ಸಿಂಘಾರ್
ಭೋಪಾಲ್: ಗಂಧವಾನಿ (ಧಾರ್) ನಿಂದ ಕಾಂಗ್ರೆಸ್‌ನಿಂದ ಮೂರು ಬಾರಿ ಗೆದ್ದಿರುವ ಹಾಲಿ ಶಾಸಕ ಉಮಂಗ್ ಸಿಂಘಾರ್ ವಿರುದ್ಧ ಆತನ ಹೆಂಡತಿ ಎಂದು ಹೇಳಿಕೊಂಡ 38 ವರ್ಷದ ಮಹಿಳೆ ನೀಡಿದ ಆಧಾರದ ಮೇಲೆ ಭಾನುವಾರ ಸಂಜೆ ಐಪಿಸಿ ಸೆಕ್ಷನ್ 294, 323, 376(2)ಎನ್) 377, 498-ಎ ಮತ್ತು 506 ಸೆಕ್ಷನ್ ಗಳಡಿ ಧಾರ್ ಜಿಲ್ಲೆಯ ನೌಗಾಂವ್ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ಹಿಂಸಾಚಾರ, ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಕ್ರಿಮಿನಲ್ ಬೆದರಿಕೆ ಮತ್ತು ನಿಂದನೀಯ ನಡವಳಿಕೆ-ಅಪರಾಧದಿಂದಾಗಿ ಧಾರ್ ಜಿಲ್ಲೆಯ ನೌಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ಸಿಂಘಾರ್ ತನ್ನ ಅಧಿಕೃತ ನಿವಾಸ, ಭೋಪಾಲ್‌ನ ಮತ್ತೊಂದು ಮನೆ ಅಲ್ಲದೇ, ದೆಹಲಿಯ ಎನ್‌ಸಿಆರ್ ಫ್ಲಾಟ್ ನಲ್ಲಿ ಮದುವೆ ನೆಪದಲ್ಲಿ ತನ್ನೊಂದಿಗೆ ಲೈಂಗಿಕವಾಗಿ ಸಂಪರ್ಕ ನಡೆಸಿದ್ದು, ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ. ಕೊನೆಗೆ 2022ರ ಏಪ್ರಿಲ್‌ನಲ್ಲಿ ಭೋಪಾಲ್‌ನಲ್ಲಿರುವ ತನ್ನ ಮನೆಯಲ್ಲಿ ಸಿಂಘಾರ್ ತನ್ನನ್ನು ವಿವಾಹವಾದರು. ಆದರೆ ಮದುವೆಯಾದ ಕೇವಲ ಎರಡು ತಿಂಗಳ ನಂತರ, ಆತ ನನ್ನೊಂದಿಗೆ ನಿಂದನೀಯ ನಡವಳಿಕೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದ ಮತ್ತು ಆಗಾಗ್ಗೆ ನನ್ನ ಮೇಲೆ ಅತ್ಯಾಚಾರವೆಸಗಿದನು ಮತ್ತು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದ ಎಂದು ಆಕೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಲೈಂಗಿಕ ಆಟಿಕೆಗಳನ್ನು ಬಳಸಲು, ವೀಡಿಯೊಗಳನ್ನು ಚಿತ್ರೀಕರಿಸಲು ಮತ್ತು ಅದನ್ನು ಆತನ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಒತ್ತಾಯಿಸುತ್ತಿದ್ದ, ಆಗಾಗ್ಗೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಒಮ್ಮೆ ತನ್ನ ಮನೆಯೊಂದರ ಬಾಲ್ಕನಿಯಲ್ಲಿ ನೇತು ಹಾಕಿದ್ದ ಎಂದು ಆಕೆ ಆರೋಪಿಸಿದ್ದಾರೆ. ಅಕ್ಟೋಬರ್‌ನಲ್ಲಿ ಧಾರ್ ಜಿಲ್ಲೆಯ ಮನೆಯಲ್ಲಿ ಅವನು ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮತ್ತು ಅತ್ಯಾಚಾರವೆಸಗಿರುವುದಾಗಿ ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ನಂತರ ಆಕೆ ರಾಜ್ಯ ಪೊಲೀಸರ ತುರ್ತು ಪ್ರತಿಕ್ರಿಯೆ ಸೇವೆಯಾದ 'ಡಯಲ್ 100' ಕರೆ ಮಾಡಿದ್ದಾಳೆ. ಆದರೆ ಸಿಂಘಾರ್ ಅವರ ಸಹೋದರಿ ಪೊಲೀಸರನ್ನು ವಾಪಸ್ ಕಳುಹಿಸಿದ್ದಾರೆ.
ಇದನ್ನೂ ಓದಿ: ನಿಕಟ ಸಂಗಾತಿ ಅಥವಾ ಕುಟುಂಬಸ್ಥರಿಂದಲೇ ಪ್ರತಿ 11 ನಿಮಿಷಕ್ಕೊಬ್ಬ ಮಹಿಳೆ ಅಥವಾ ಹುಡುಗಿಯ ಹತ್ಯೆ: ವಿಶ್ವಸಂಸ್ಥೆ ಮುಖ್ಯಸ್ಥ
ನವೆಂಬರ್ 2 ರಂದು ಸಿಂಘಾರ್ ಮತ್ತೆ ಹೀನಕೃತ್ಯಗಳಿಗೆ ಮುಂದಾಗಿದ್ದು, ತುರ್ತು ಸೇವೆ 100 ಕರೆ ಮಾಡಿದಾಗ ಪೊಲೀಸರು ಧಾರ್‌ನಲ್ಲಿರುವ ಮನೆಗೆ ಧಾವಿಸಿ ತನ್ನನ್ನು ರಕ್ಷಿಸಿದರು. ನಂತರ ನೌಗಾಂವ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಆದರೆ ಆಶ್ಚರ್ಯಕರವಾಗಿ, ಸಿಂಗ್ ವಿರುದ್ಧ ದೂರು ದಾಖಲಿಸುವ ಬದಲು, ಸಿಂಘಾರ್ ಅವರ ಮನೆಯಲ್ಲಿ ಕೆಲಸ ಮಾಡುವ ಮನೆಕೆಲಸದವರ ದೂರಿನ ಆಧಾರದ ಮೇಲೆ ತನ್ನ ವಿರುದ್ಧ ಹಲ್ಲೆ ಮತ್ತು ನಿಂದನೀಯ ವರ್ತನೆಯ ಪ್ರಕರಣವನ್ನು ದಾಖಲಿಸಲಾಯಿತು ಎಂದು ಮಹಿಳೆ ಎಫ್ ಐಆರ್ ನಲ್ಲಿ ಆರೋಪಿಸಿದ್ದಾಳೆ.
ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಸಿಂಘಾರ್, ತಾನು ಬುಡಕಟ್ಟು ಸಮುದಾಯಕ್ಕೆ ಸೇರಿದವನಾಗಿರುವುದರಿಂದ ತನ್ನ ವರ್ಚಸ್ಸಿಗೆ ಧಕ್ಕೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.