ಶ್ರದ್ಧಾ ವಾಕರ್ ಹತ್ಯೆ ಪ್ರಕರಣ: ಆರೋಪಿ ಆಫ್ತಾಬ್ ಗೆ ಸುಳ್ಳು ಪತ್ತೆ ಪರೀಕ್ಷೆ
ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಕರ್ ಕೊಂದು ದೇಹವನ್ನು 36 ತುಂಡುಗಳನ್ನಾಗಿ ಮಾಡಿದ ಹಂತಕ ಆಫ್ತಾಬ್ ಅಮಿನ್ ಪೂನಾವಾಲಾನಿಗೆ ದೆಹಲಿ ಪೊಲೀಸರು ಮಂಗಳವಾರ ಸುಳ್ಳು ಪತ್ತೆ ಪರೀಕ್ಷೆ ನಡೆಸುತ್ತಿದ್ದಾರೆ.
Published: 22nd November 2022 11:06 PM | Last Updated: 23rd November 2022 01:59 PM | A+A A-

ಆರೋಪಿ ಆಫ್ತಾಬ್
ನವದೆಹಲಿ: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಕರ್ ಕೊಂದು ದೇಹವನ್ನು 36 ತುಂಡುಗಳನ್ನಾಗಿ ಮಾಡಿದ ಹಂತಕ ಆಫ್ತಾಬ್ ಅಮಿನ್ ಪೂನಾವಾಲಾನಿಗೆ ದೆಹಲಿ ಪೊಲೀಸರು ಸುಳ್ಳು ಪತ್ತೆ ಪರೀಕ್ಷೆ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳಿಗೆ ಇಬ್ಬರೂ ವಾಸಿಸುತ್ತಿದ್ದ ಫ್ಲಾಟ್‌ನಲ್ಲಿ ರಕ್ತದ ಕಲೆ ಸೇರಿದಂತೆ ಹೆಚ್ಚಿನ ಪುರಾವೆ ಸಿಕ್ಕಿದ್ದು, ನಗರದ ನ್ಯಾಯಾಲಯವೊಂದರಿಂದ ಅನುಮತಿ ಸಿಕ್ಕ ನಂತರ ಆರೋಪಿಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗಿದೆ.
ಇದಕ್ಕೂ ಮುನ್ನಾ, ಶ್ರದ್ಧಾ ವಾಕರ್ ಅವರನ್ನು ಕೋಪದಿಂದ ಕೊಲೆ ಮಾಡಿದ್ದು, ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಆರೋಪಿ ಆಫ್ತಾಬ್ ನ್ಯಾಯಾಲಯಕ್ಕೆ ಹೇಳಿದ್ದಾಗಿ ಆರೋಪಿ ಪರ ವಕೀಲ ಅಬಿನಾಶ್ ಕುಮಾರ್ ತಿಳಿಸಿದರು. ಆರೋಪಿ ಸುಳ್ಳು ಪತ್ತೆ ಪರೀಕ್ಷೆಗಾಗಿ ಪ್ರಶ್ನಾವಳಿ ತಯಾರಿಸಲಾಗಿದೆ. ಇದರಿಂದಾಗಿ ಭೀಕರ ಹತ್ಯೆಯಲ್ಲಿನ ಘಟನೆಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ: ಆರೋಪಿಯ ಪಾಲಿಗ್ರಾಫ್ ಪರೀಕ್ಷೆಗೆ ನ್ಯಾಯಾಲಯದಿಂದ ಅನುಮತಿ ಪಡೆದ ದೆಹಲಿ ಪೊಲೀಸರು
ಪಾಲಿಗ್ರಾಫ್ ಪರೀಕ್ಷೆಯ ನಂತರ, ಪೊಲೀಸರು ಕಳೆದ ವಾರ ನ್ಯಾಯಾಲಯದಿಂದ ಅನುಮತಿ ಪಡೆದ ನಾರ್ಕೋ ಪರೀಕ್ಷೆ ನಡೆಸುವ ಸಾಧ್ಯತೆಯಿದೆ. ಮಂಗಳವಾರ ಸಂಜೆ, ತಜ್ಞರು ಪಾಲಿಗ್ರಾಫ್ ಪರೀಕ್ಷೆ ಪ್ರಾರಂಭಿಸಿದ್ದಾರೆ. ಈ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆ ಎಂದು ಹಿರಿಯ ಎಫ್‌ಎಸ್‌ಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.