ಮಹಾರಾಷ್ಟ್ರ: ಓಡಿಹೋಗಲು ನಿರಾಕರಿಸಿದ ಪ್ರಿಯತಮೆ, ಆಕ್ರೋಶಗೊಂಡು ಆಕೆಯ ತಂದೆಯ ಆಸ್ತಿ-ಪಾಸ್ತಿಗೆ ಬೆಂಕಿ ಹಚ್ಚಿದ ಭೂಪ!
ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆ ಓಡಿಹೋಗಲು ಒಪ್ಪದ ಕಾರಣ ಆಕ್ರೋಶಗೊಂಡು ಆಕೆಯ ತಂದೆಯ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚಿರುವ ಘಟನೆ ನಾಗ್ಪುರ ಜಿಲ್ಲೆಯ ವಾಘೋಡಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
Published: 23rd November 2022 01:43 PM | Last Updated: 23rd November 2022 01:43 PM | A+A A-

ಸಾಂದರ್ಭಿಕ ಚಿತ್ರ
ನಾಗ್ಪುರ: ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆ ಓಡಿಹೋಗಲು ಒಪ್ಪದ ಕಾರಣ ಆಕ್ರೋಶಗೊಂಡು ಆಕೆಯ ತಂದೆಯ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚಿರುವ ಘಟನೆ ನಾಗ್ಪುರ ಜಿಲ್ಲೆಯ ವಾಘೋಡಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಆರೋಪಿಯ ಪತ್ನಿ ವರ್ಷದ ಹಿಂದೆಯೇ ಪತಿಯಿಂದ ದೂರಾಗಿದ್ದು, ಆರೋಪಿ ಹಾಗೂ ಮಹಿಳೆ ಏಳು ತಿಂಗಳಿಂದ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತಂದೆಯಿಂದಲೇ ಗುಂಡಿಗೆ ಬಲಿಯಾದ ಆಯುಷಿ! ಸೂಟ್ ಕೇಸ್ ನಲ್ಲಿ ಮೃತದೇಹ ತುಂಬಲು ತಾಯಿ ನೆರವು!
ಮಹಿಳೆಯೊಂದಿಗೆ ಸಂಬಂಧದಲ್ಲಿದ್ದ ಆರೋಪಿ ಓಡಿಹೋಗೋಣವೆಂದು ಹೇಳಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಮಹಿಳೆಯ ತಂದೆಗೆ ಸೇರಿದ ಮಿನಿ ಟ್ರಕ್ ಹಾಗೂ ತರಕಾರಿ ಅಂಗಡಿಗೆ ಬೆಂಕಿ ಹಚ್ಚಿದ್ದಾನೆ.
ಘಟನೆ ಬಳಿಕ ಪೊಲೀಸರು ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.