ಶಹಜಹಾನ್‌ಪುರ ಬಿಜೆಪಿ ಸಂಸದ ಪರಾರಿ ಎಂದು ಘೋಷಿಸಿದ ಯುಪಿ ಕೋರ್ಟ್

2019 ರಲ್ಲಿ ಚುನಾವಣಾ ಸಾಮಗ್ರಿಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಉತ್ತರ ಪ್ರದೇಶದ ಶಹಜಹಾನ್‌ಪುರ ಬಿಜೆಪಿ ಸಂಸದ ಅರುಣ್ ಕುಮಾರ್ ಸಾಗರ್ ಅವರು ಪರಾರಿಯಾಗಿದ್ದಾರೆ...
ಶಹಜಹಾನ್‌ಪುರ ಬಿಜೆಪಿ ಸಂಸದ ಪರಾರಿ ಎಂದು ಘೋಷಿಸಿದ ಯುಪಿ ಕೋರ್ಟ್

ಶಹಜಹಾನ್‌ಪುರ: 2019 ರಲ್ಲಿ ಚುನಾವಣಾ ಸಾಮಗ್ರಿಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಉತ್ತರ ಪ್ರದೇಶದ ಶಹಜಹಾನ್‌ಪುರ ಬಿಜೆಪಿ ಸಂಸದ ಅರುಣ್ ಕುಮಾರ್ ಸಾಗರ್ ಅವರು ಪರಾರಿಯಾಗಿದ್ದಾರೆ ಎಂದು ಘೋಷಿಸಿದೆ.

ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಸಂಸದ ಅರುಣ್ ಕುಮಾರ್ ಸಾಗರ್ ಅವರನ್ನು ನ್ಯಾಯಾಧೀಶೆ ಅಸ್ಮಾ ಸುಲ್ತಾನಾ ಅವರು ಪರಾರಿಯಾಗಿದ್ದಾರೆ ಎಂದು ನವೆಂಬರ್ 21 ರಂದು ಘೋಷಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಸಾಗರ್ ಅವರ ಪ್ರಚಾರ ಸಾಮಗ್ರಿಯನ್ನು ಬರೇಲಿ-ಜಲಾಲಾಬಾದ್ ರಸ್ತೆಯಲ್ಲಿ ಅಂದಿನ ಎಸ್‌ಡಿಎಂ ಸದರ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.

ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರ ಹಲವಾರು ಬಾರಿ ಸಮನ್ಸ್ ನೀಡಿದರೂ ಸಾಗರ್ ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಷನ್ ಅಧಿಕಾರಿ ನೀಲಿಮಾ ಸಕ್ಸೇನಾ ಬುಧವಾರ ಪಿಟಿಐಗೆ ತಿಳಿಸಿದ್ದಾರೆ.

ಆದೇಶದ ಪ್ರತಿಯನ್ನು ಸಂಸದರ ನಿವಾಸ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com