ಗುಜರಾತ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಣದ ಕೊರತೆ: ಚುನಾವಣೆ ಖರ್ಚಿಗೆ ಹೈಕಮಾಂಡ್ ಕಳುಹಿಸಿದ ಮೊತ್ತಕ್ಕಿಂತ ಕಡಿಮೆ ಹಣ ಹಂಚಿಕೆ!

ಗುಜರಾತ್ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪಕ್ಷಗಳ ಪ್ರಚಾರ ಅಬ್ಬರ ಜೋರಾಗಿದೆ. ಈ ಮಧ್ಯೆ, ಚುನಾವಣೆ ಪ್ರಚಾರ ಮತ್ತು ಇತರ ಖರ್ಚುವೆಚ್ಚಗಳಿಗೆ ಹಣದ ಕೊರತೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ತನ್ನ ನಾಯಕರಿಂದ ಹಣದ ಕೊರತೆ ಆರೋಪವನ್ನು ಎದುರಿಸುತ್ತಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಅಹ್ಮದಾಬಾದ್ : ಗುಜರಾತ್ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪಕ್ಷಗಳ ಪ್ರಚಾರ ಅಬ್ಬರ ಜೋರಾಗಿದೆ. ಈ ಮಧ್ಯೆ, ಚುನಾವಣೆ ಪ್ರಚಾರ ಮತ್ತು ಇತರ ಖರ್ಚುವೆಚ್ಚಗಳಿಗೆ ಹಣದ ಕೊರತೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ತನ್ನ ನಾಯಕರಿಂದ ಹಣದ ಕೊರತೆ ಆರೋಪವನ್ನು ಎದುರಿಸುತ್ತಿದೆ. ಚುನಾವಣಾ ವೆಚ್ಚಕ್ಕೆ ಹೈಕಮಾಂಡ್ ಕಳುಹಿಸಿದ್ದಕ್ಕಿಂತ ಕಡಿಮೆ ಹಣವನ್ನು ಪಕ್ಷದ ನಾಯಕರು ನೀಡಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ನಾಯಕರು ದೂರುತ್ತಿದ್ದಾರೆ. ಪಡೆದಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ತೋರಿಸಿ ರಶೀದಿಯಲ್ಲಿ ಸಹಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಸೂರತ್‌ನ ಪಾಟಿದಾರರ ಪ್ರಾಬಲ್ಯವಿರುವ ವರಾಚಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೂರತ್ ಕಾರ್ಪೊರೇಷನ್ ಮಾಜಿ ನಾಯಕ ಪ್ರಫುಲ್ ತೊಗಾಡಿಯಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯಿಸಿ, ಚುನಾವಣಾ ವೆಚ್ಚಕ್ಕಾಗಿ ಪಕ್ಷವು ಮಂಗಳವಾರ ನೀಡಿದ ಹಣವು ಅವರು ರಶೀದಿಯಲ್ಲಿ ಸಹಿ ಮಾಡಿದ ಮೊತ್ತಕ್ಕಿಂತ 3.5 ಲಕ್ಷ ರೂಪಾಯಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ನಿನ್ನೆ ಚುನಾವಣಾ ವೆಚ್ಚಕ್ಕೆ ಹೈಕಮಾಂಡ್ ಹಣ ಕಳುಹಿಸಿರುವ ಮಾಹಿತಿ ಸಿಕ್ಕಿದೆ. ಹಣ ವಸೂಲಿ ಮಾಡಲು ಹೋದಾಗ ಮೊತ್ತದ ರಶೀದಿ ಕೊಟ್ಟು ಸಹಿ ಹಾಕಿದ್ದೆ. ಮನೆಗೆ ತಲುಪಿದ ನಂತರ, ರಸೀದಿಯಲ್ಲಿ ನಾನು ಸಹಿ ಮಾಡಿದ್ದಕ್ಕಿಂತ 3.5 ಲಕ್ಷ ರೂಪಾಯಿಗಳು ಕಡಿಮೆ ಸಿಕ್ಕಿದೆ, ಆದರೆ ರಶೀದಿಯಲ್ಲಿ ನಾನು ಪಡೆದದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ನಮೂದಿಸಿದೆ ಎಂದು ತೊಗ್ಡಿಯಾ ಹೇಳಿದರು. ಸೂರತ್‌ನ ಹನ್ನೆರಡು ಅಭ್ಯರ್ಥಿಗಳಿಗೂ ಇದೇ ರೀತಿಯ ಅನುಭವವಾಗಿದೆ ಎಂದು ಅವರು ಹೇಳಿದರು.

ನಂತರ ವಿಚಾರಿಸಿದಾಗ ಪಕ್ಷದ ಕೆಲವು ಅಭ್ಯರ್ಥಿಗಳು ಸಹ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ತಿಳಿಯಿತು. ಅವರು ಸಹಿ ಮಾಡಿದ ಮೊತ್ತಕ್ಕಿಂತ ಶೇಕಡಾ 10ಕ್ಕಿಂತ 20ರಷ್ಟು ಕಡಿಮೆ ಹಣವನ್ನು ಪಡೆದಿದ್ದಾರೆ ಎಂದು ತೊಗ್ಡಿಯಾ ಹೇಳಿದರು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ, ಸೂರತ್ ಸಿಟಿ ಕಾಂಗ್ರೆಸ್ ಮುಖ್ಯಸ್ಥ ಹಸ್ಮುಖ್ ದೇಸಾಯಿ ಅವರೊಂದಿಗೆ ಮಾತನಾಡಿದಾಗ, ಅಭ್ಯರ್ಥಿಗಳು ಸಹಿ ಮಾಡಿದ ಮೊತ್ತಕ್ಕಿಂತ ಕಡಿಮೆ ಹಣವನ್ನು ಪಡೆದಿದ್ದಾರೆ ಎಂದು ಒಪ್ಪಿಕೊಂಡರು. ನಾನು ಈ ಬಗ್ಗೆ ಹೈಕಮಾಂಡ್‌ಗೆ ತಿಳಿಸಿದ್ದೇನೆ, ಏನು ತಪ್ಪಾಗಿದೆ ಎಂದು ನಾನು ನನ್ನದೇ ಆದ ರೀತಿಯಲ್ಲಿ ಪರಿಶೀಲಿಸುತ್ತಿದ್ದೇನೆ. ಅಗತ್ಯವಿದ್ದರೆ, ಹೈಕಮಾಂಡ್‌ಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಆರ್ಥಿಕ ಸಮಸ್ಯೆ ಇಷ್ಟಕ್ಕೇ ನಿಂತಿಲ್ಲ. ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಚುನಾವಣಾ ವೆಚ್ಚಕ್ಕಾಗಿ ಪಕ್ಷದಿಂದ ಇನ್ನೂ ಹಣ ಪಡೆದಿಲ್ಲ ಎಂದು ಪಕ್ಷದ ಕೆಲವು ಅಭ್ಯರ್ಥಿಗಳು ದೂರುತ್ತಿದ್ದಾರೆ.

ಡ್ಯಾಂಗ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುಖೇಶ್ ಪಟೇಲ್ ಬಡ ಬುಡಕಟ್ಟು ಕುಟುಂಬಕ್ಕೆ ಸೇರಿದವರಾಗಿದ್ದು, ಅವರು ತಮ್ಮ ಜೇಬಿನಿಂದ ಖರ್ಚು ಮಾಡುತ್ತಿದ್ದಾರೆ. ''ನಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ಅಷ್ಟು ದೊಡ್ಡ ಖರ್ಚು ಇಲ್ಲ. ಆದರೆ, ಚುನಾವಣಾ ಪ್ರಚಾರಕ್ಕೆ ನನ್ನದೇ ಸ್ವಂತ ಹಣವನ್ನು ಖರ್ಚು ಮಾಡಿದ್ದೇನೆ ಎಂದಿದ್ದಾರೆ.

ಅಹಮದಾಬಾದ್‌ನ ಕಾಂಗ್ರೆಸ್ ನಾಯಕರೊಬ್ಬರು ಇಂತಹ ಪರಿಸ್ಥಿತಿ ಪಕ್ಷದಲ್ಲಿ ನಡೆಯುತ್ತಿರುವುದು ಮೊದಲ ಸಲವೇನಲ್ಲ ಎನ್ನುತ್ತಿದ್ದಾರೆ. ಹೆಚ್ಚಿನ ಅಭ್ಯರ್ಥಿಗಳು ದೆಹಲಿಯಿಂದ ತಮಗೆ ಕಳುಹಿಸಲಾದ ಚುನಾವಣಾ ವೆಚ್ಚಕ್ಕಾಗಿ ಅರ್ಧದಷ್ಟು ಹಣವನ್ನು ಪಡೆದಿದ್ದಾರೆ. ಇನ್ನು ಕೆಲವು ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚಕ್ಕಾಗಿ ಪಕ್ಷದಿಂದ ಹಣ ಸಿಗುತ್ತಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com