ಕ್ಷಿಪ್ರಗತಿಯಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯಲ್ ನೇಮಕ ಪ್ರಕ್ರಿಯೆ: ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆಯ ಸುರಿಮಳೆ
ಅರುಣ್ ಗೋಯಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ(EC) ನೇಮಕಾತಿ ಮಾಡಿದ್ದರಲ್ಲಿ ಅಳವಡಿಸಿಕೊಂಡ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಿರುವ ಸುಪ್ರೀಂ ಕೋರ್ಟ್, ಅವರ ಕಡತಕ್ಕೆ ತರಾತುರಿಯಲ್ಲಿ ಆತುರದಲ್ಲಿ ಅನುಮತಿ ನೀಡಲಾಗಿದೆ ಎಂದು ಅಸಮಾಧಾನ ಮತ್ತು ಆಕ್ಷೇಪ ವ್ಯಕ್ತಪಡಿಸಿದೆ.
Published: 24th November 2022 12:48 PM | Last Updated: 19th December 2022 11:27 AM | A+A A-

ಚುನಾವಣಾ ಆಯುಕ್ತ ಅರುಣ್ ಗೋಯಲ್
ನವದೆಹಲಿ: ಅರುಣ್ ಗೋಯಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ(EC) ನೇಮಕಾತಿ ಮಾಡಿದ್ದರಲ್ಲಿ ಅಳವಡಿಸಿಕೊಂಡ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಿರುವ ಸುಪ್ರೀಂ ಕೋರ್ಟ್, ಅವರ ಕಡತಕ್ಕೆ ತರಾತುರಿಯಲ್ಲಿ ಆತುರದಲ್ಲಿ ಅನುಮತಿ ನೀಡಲಾಗಿದೆ ಎಂದು ಅಸಮಾಧಾನ ಮತ್ತು ಆಕ್ಷೇಪ ವ್ಯಕ್ತಪಡಿಸಿದೆ.
ಗೋಯಲ್ ಅವರ ನೇಮಕಕ್ಕೆ ಸಂಬಂಧಿಸಿದ ಕಡತವನ್ನು "ಮಿಂಚಿನ ವೇಗ" ದಲ್ಲಿ ತೆರವುಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಅದಕ್ಕೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಸ್ವಲ್ಪ ಹೊತ್ತು ಸುಮ್ಮನಿರಿ, ಈ ವಿಷಯವನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಮನವಿ ಮಾಡಿದರು.
ಇದು ಯಾವ ರೀತಿಯ ಮೌಲ್ಯಮಾಪನ ಆದಾಗ್ಯೂ, ನಾವು ಅರುಣ್ ಗೋಯಲ್ ಅವರ ರುಜುವಾತುಗಳ ಅರ್ಹತೆಯನ್ನು ಪ್ರಶ್ನಿಸುತ್ತಿಲ್ಲ, ಅವರ ನೇಮಕಾತಿಯ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಪ್ರಶ್ನಿಸಿತು.
ಇದನ್ನೂ ಓದಿ: ಪ್ರಧಾನಮಂತ್ರಿ ವಿರುದ್ಧ ಮುಖ್ಯ ಚುನಾವಣಾ ಆಯುಕ್ತರು ಕ್ರಮ ಕೈಗೊಳ್ಳದಿದ್ದರೆ ವ್ಯವಸ್ಥೆ ಸಂಪೂರ್ಣ ಕುಸಿಯುತ್ತದೆ: ಸುಪ್ರೀಂ ಕೋರ್ಟ್
ಅದಕ್ಕೆ ಅಟಾರ್ನಿ ಜನರಲ್ ಅವರು, ದಯವಿಟ್ಟು ಸ್ವಲ್ಪ ಸಮಯ ಬಾಯಿ ಮುಚ್ಚಿಕೊಂಡಿರಿ, ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ನಾನು ಕೇಳಿಕೊಳ್ಳುತ್ತಿದ್ದೇನೆ ಎಂದರು.
ಸುಪ್ರೀಂ ಕೋರ್ಟ್ ನೀಡಿದ ಬುಧವಾರದ ನಿರ್ದೇಶನದ ಅನುಸಾರವಾಗಿ ಕೇಂದ್ರದಿಂದ ಪೀಠದ ಮುಂದೆ ಇರಿಸಲಾದ ಗೋಯಲ್ ಅವರ ನೇಮಕಾತಿಯ ಮೂಲ ಕಡತವನ್ನು ಅದು ಪರಿಶೀಲಿಸಿತು. 1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಗೋಯಲ್ ಒಂದೇ ದಿನದಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ, ಅವರ ಕಡತವನ್ನು ಕಾನೂನು ಸಚಿವಾಲಯ ಒಂದೇ ದಿನದಲ್ಲಿ ತೆರವುಗೊಳಿಸಿದೆ, ನಾಲ್ಕು ಹೆಸರುಗಳ ಸಮಿತಿಯನ್ನು ಪ್ರಧಾನ ಮಂತ್ರಿಯ ಮುಂದೆ ಮಂಡಿಸಿ ಗೋಯಲ್ ಅವರ ಹೆಸರಿಗೆ 24 ಗಂಟೆಗಳ ಒಳಗೆ ರಾಷ್ಟ್ರಪತಿಗಳಿಂದ ಒಪ್ಪಿಗೆ ಸಿಕ್ಕಿತು.
ಇದನ್ನೂ ಓದಿ: ಚುನಾವಣಾ ಆಯುಕ್ತರ ನೇಮಕದಲ್ಲಿ ಕೈ ಚಳಕ?: ಕಡತ ಹಾಜರುಪಡಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ಮಾದರಿಯ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠವು ನಡೆಸುತ್ತಿದೆ.