ಯಾಕ್ ಈಗ ಆಹಾರ ಪ್ರಾಣಿ; ಮಾಂಸ ಸೇವಿಸಲು ಆಹಾರ ಸುರಕ್ಷತಾ ಪ್ರಾಧಿಕಾರ ಅಸ್ತು

ಹಿಮಾಲಯ ಪ್ರದೇಶದ ಎತ್ತರದ ಪರ್ವತಗಳಲ್ಲಿ ಜೀವಿಸುವ ಬಹುಪಯೋಗಿ ಪ್ರಾಣಿ ಯಾಕ್ ಅನ್ನು ಆಹಾರ ಪ್ರಾಣಿ ಎಂದು ಘೋಷಿಸುವ ಮೂಲಕ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಯಾಕ್ ರೈತರಿಗೆ ಸಿಹಿ ಸುದ್ದಿ ನೀಡಿದೆ.
ಯಾಕ್
ಯಾಕ್

ಗುವಾಹಟಿ: ಹಿಮಾಲಯ ಪ್ರದೇಶದ ಎತ್ತರದ ಪರ್ವತಗಳಲ್ಲಿ ಜೀವಿಸುವ ಬಹುಪಯೋಗಿ ಪ್ರಾಣಿ ಯಾಕ್ ಅನ್ನು ಆಹಾರ ಪ್ರಾಣಿ ಎಂದು ಘೋಷಿಸುವ ಮೂಲಕ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಯಾಕ್ ರೈತರಿಗೆ ಸಿಹಿ ಸುದ್ದಿ ನೀಡಿದೆ.

ಕಳೆದ ವರ್ಷ, ಅರುಣಾಚಲ ಪ್ರದೇಶ ಮೂಲದ ಐಸಿಎಆರ್-ರಾಷ್ಟ್ರೀಯ ಸಂಶೋಧನಾ ಕೇಂದ್ರ (ಐಸಿಎಆರ್ಎನ್) ಯಾಕ್ ಅನ್ನು ಆಹಾರ ಪ್ರಾಣಿ ಎಂದು ಘೋಷಿಸುವಂತೆ ಒತ್ತಾಯಿಸಿ ಎಫ್ಎಸ್ಎಸ್ಎಐಗೆ ಪತ್ರ ಬರೆದಿತ್ತು. ನಂತರ  ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದ ಎಫ್‌ಎಸ್‌ಎಸ್‌ಎಐ ಈಗ ಯಾಕ್ ಆಹಾರ ಪ್ರಾಣಿ ಎಂದು ಘೋಷಿಸಿದೆ.

ಈ ಬಗ್ಗೆ ಮಾತನಾಡಿದ ICARN ನಿರ್ದೇಶಕ ಡಾ ಮಿಹಿರ್ ಸರ್ಕಾರ್ ಅವರು, "ನಾನು ರೋಮಾಂಚನಗೊಂಡಿದ್ದೇನೆ,"  ಎಫ್‌ಎಸ್‌ಎಸ್‌ಎಐ ಅನುಮೋದನೆಯು ವಾಣಿಜ್ಯ ಪಾಲನೆ ಮತ್ತು ಬಳಕೆಯ ಮೂಲಕ ದೇಶದಲ್ಲಿ ಯಾಕ್ ಉತ್ಪಾದನಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.

“ಯಾಕ್ ಜನಸಂಖ್ಯೆಯು ಕಡಿಮೆಯಾಗುತ್ತಿರುವುದಕ್ಕೆ ಕಾರಣವೆಂದರೆ ಅದು ಕಡಿಮೆ ಪ್ರತಿಫಲ ನೀಡುತ್ತದೆ. ಈ ಪ್ರಾಣಿಗಳ ಹಾಲು ಡೈರಿ ಉದ್ಯಮದ ಭಾಗವಾಗಿಲ್ಲ ಮತ್ತು ಸ್ಥಳೀಯವಾಗಿ ಮಾತ್ರ ಸೇವಿಸಲಾಗುತ್ತದೆ. ಇದಕ್ಕೆ ದೊಡ್ಡ ಮಾರುಕಟ್ಟೆಯೂ ಇರಲಿಲ್ಲ” ಎಂದು ಡಾ ಸರ್ಕಾರ್ ತಿಳಿಸಿದ್ದಾರೆ.

ಎಫ್‌ಎಸ್‌ಎಸ್‌ಎಐ ಅನುಮೋದನೆಯು ಯಾಕ್ ಅನ್ನು ವಾಣಿಜ್ಯ ಉದ್ದೇಶಗಳಿಗಾಗಿ ಸಾಕಲು ಬಹಳಷ್ಟು ಜನರಿಗೆ ಉತ್ತೇಜಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com