ಇಸ್ರೊದಿಂದ 8 ನ್ಯಾನೊ ಉಪಗ್ರಹ, PSLV-C54 ರಾಕೆಟ್ ಬಾಹ್ಯಾಕಾಶಕ್ಕೆ ಯಶಸ್ವಿ ಉಡಾವಣೆ
ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಶನಿವಾರ ಪಿಎಸ್‌ಎಲ್‌ವಿ-ಸಿ 54 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. Oceansat-3 ಎಂದೂ ಕರೆಯಲ್ಪಡುವ EOS-06 ಮತ್ತು 8 ನ್ಯಾನೊ ಉಪಗ್ರಹಗಳನ್ನು ಹೊತ್ತ ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು.
Published: 26th November 2022 01:11 PM | Last Updated: 26th November 2022 01:48 PM | A+A A-

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C54 ಉಡ್ಡಯನ
ಶ್ರೀಹರಿಕೋಟ: ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಶನಿವಾರ ಪಿಎಸ್‌ಎಲ್‌ವಿ-ಸಿ 54 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. Oceansat-3 ಎಂದೂ ಕರೆಯಲ್ಪಡುವ EOS-06 ಮತ್ತು 8 ನ್ಯಾನೊ ಉಪಗ್ರಹಗಳನ್ನು ಹೊತ್ತ ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು.
ಇಸ್ರೋ ಕೈಗೊಂಡ ಈ ವರ್ಷದ ಕೊನೆಯ ಉಡಾವಣೆ ಇದಾಗಿದೆ. PSLV-C54 ಭೂಮಿಯ ವೀಕ್ಷಣಾ ಉಪಗ್ರಹ (EOS-06) ಅಥವಾ ಓಷನ್‌ಸ್ಯಾಟ್ ನ್ನು ಅದರ ಪ್ರಾಥಮಿಕ ಪೇಲೋಡ್ ಆಗಿ ಒಯ್ಯುತ್ತದೆ. ಎಂಟು ಸಹ-ಪ್ರಯಾಣಿಕ ಉಪಗ್ರಹಗಳನ್ನು ಎರಡು ಗಂಟೆಗಳ ಕಾಲಾವಧಿಯಲ್ಲಿ ಸೂರ್ಯನ ಸಿಂಕ್ರೊನಸ್ ಕಕ್ಷೆಗಳಲ್ಲಿ ಇರಿಸಲಿದೆ.
ಭಾರತೀಯ ಕಾಲಮಾನ ಇಂದು ಬೆಳಗ್ಗೆ 11.56ಕ್ಕೆ ಉಡಾವಣೆಯಾಗಿದ್ದು, ಇನ್ನು ಎರಡು ಗಂಟೆಗಳಲ್ಲಿ ಉಪಗ್ರಹಗಳ ಸಂಪೂರ್ಣ ಬೇರ್ಪಡಿಕೆ ಸಂಭವಿಸುವ ನಿರೀಕ್ಷೆಯಿದೆ. ಭೂಮಿಯ ವೀಕ್ಷಣಾ ಉಪಗ್ರಹ-6 ಓಷನ್‌ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹವಾಗಿದೆ. ವರ್ಧಿತ ಪೇಲೋಡ್ ವಿಶೇಷಣಗಳು ಮತ್ತು ಅಪ್ಲಿಕೇಶನ್ ಪ್ರದೇಶಗಳೊಂದಿಗೆ Oceansat-2 ಬಾಹ್ಯಾಕಾಶ ನೌಕೆಯ ನಿರಂತರತೆಯ ಸೇವೆಗಳನ್ನು ಇದು ಒದಗಿಸುತ್ತದೆ.
ಇದನ್ನೂ ಓದಿ: ಪಿಎಸ್ಎಲ್ ವಿ ಸಿ54 ನಲ್ಲಿ ಎರಡು ನ್ಯಾನೋ ಉಪಗ್ರಹಗಳನ್ನು ಉಡಾವಣೆ ಮಾಡಲಿರುವ ಹೈದರಾಬಾದ್ ಮೂಲದ ಧ್ರುವ ಸ್ಪೇಸ್
ಇಸ್ರೋ ಇಂದು ಭೂ ವೀಕ್ಷಣಾ ಉಪಗ್ರಹ, ಓಷನ್‌ಸ್ಯಾಟ್ -3 ಮತ್ತು ಇತರ ಎಂಟು ಗ್ರಾಹಕ ಉಪಗ್ರಹಗಳನ್ನು ಎರಡು ವಿಭಿನ್ನ ಕಕ್ಷೆಗಳಲ್ಲಿ ಒಂದೇ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಸ್ರೋದ 56 ನೇ ಹಾರಾಟದಲ್ಲಿ, ಪಿಎಸ್‌ಎಲ್‌ವಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಲಾಂಚ್‌ಪ್ಯಾಡ್‌ನಿಂದ ಬೆಳಿಗ್ಗೆ 11.56 ಕ್ಕೆ ಮೇಲಕ್ಕೆ ಹಾರಿತು. ಮೋಡ ಕವಿದ ವಾತಾವರಣವು ನೋಡುಗರ ವೀಕ್ಷಣೆಗೆ ಅಡ್ಡಿಪಡಿಸಿದರೂ ಇದು ಪರಿಪೂರ್ಣವಾದ ಉಡಾವಣೆಯಾಗಿತ್ತು.
ಉಪಗ್ರಹಗಳನ್ನು ವಿವಿಧ ಎತ್ತರಗಳಲ್ಲಿ ವಿವಿಧ ಕಕ್ಷೆಗಳಲ್ಲಿ ಇರಿಸಲು ವಿಜ್ಞಾನಿಗಳು ಹಲವಾರು ಕುಶಲತೆಯನ್ನು ಈ ಕಾರ್ಯಾಚರಣೆಯಲ್ಲಿ ಕೈಗೊಂಡಿದ್ದಾರೆ. ಇಸ್ರೋ ಕೈಗೊಂಡಿರುವ ಸುದೀರ್ಘ ಕಾರ್ಯಾಚರಣೆಗಳಲ್ಲಿ ಇದು ಕೂಡ ಒಂದಾಗಿದೆ. ಒಟ್ಟು ಕಾರ್ಯಾಚರಣೆಯ ಅವಧಿಯು ಸುಮಾರು 2 ಗಂಟೆಗಳು.
ಇದನ್ನೂ ಓದಿ: ಎಸ್ ಎಸ್ ವಿ ಸಿ54 ರಾಕೆಟ್ ಉಡಾವಣೆಗೆ ಬೆಂಗಳೂರು ಮೂಲದ ಪಿಕ್ಸೆಲ್ ನ ಆನಂದ್ ಉಪಗ್ರಹ ಬಳಕೆ
ಓಷನ್‌ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹವಾಗಿರುವ ಪ್ರಾಥಮಿಕ ಉಪಗ್ರಹ EOS-06 ನ್ನು 742 ಕಿಮೀ ಎತ್ತರದಲ್ಲಿ ಲಿಫ್ಟ್-ಆಫ್‌ನಿಂದ 17 ನಿಮಿಷಗಳ ನಂತರ ಕಕ್ಷೆ-1 ರಲ್ಲಿ ಇರಿಸಲಾಯಿತು. ತರುವಾಯ, PSLV-C54 ವಾಹನದ ಪ್ರೊಪಲ್ಷನ್ ಬೇ ರಿಂಗ್‌ನಲ್ಲಿ ಎರಡು ಆರ್ಬಿಟ್ ಚೇಂಜ್ ಥ್ರಸ್ಟರ್‌ಗಳನ್ನು (OCTs) ಬಳಸಿಕೊಂಡು ಕಕ್ಷೆಯ ಬದಲಾವಣೆಯನ್ನು ಮಾಡಲಾಯಿತು.
ISRO launches #PSLVC54 carrying EOS-06 (Earth Observation Satellite - 06) and 8 Nano-satellites.@ISRO @IndiaDST pic.twitter.com/OvtNj6G97d
— ALL INDIA RADIO आकाशवाणी (@AkashvaniAIR) November 26, 2022
PSLV-C54/EOS-06 ಮಿಷನ್: EOS-06 ಬಾಹ್ಯಾಕಾಶ ನೌಕೆ ಬೇರ್ಪಡಿಕೆ ಯಶಸ್ವಿಯಾಗಿದೆ. ನೌಕೆಯ ಆರೋಗ್ಯ ಸಾಮಾನ್ಯವಾಗಿದೆ. ಮಿಷನ್ ಮುಂದುವರೆಯುತ್ತಿದೆ ಎಂದು ಇಸ್ರೊ ಹೇಳಿದೆ.