ಬಿಜೆಪಿ ಸೋಲಿಸಲು ಜನರು ಉತ್ಸುಕರಾಗಿದ್ದಾರೆ, ಎಎಪಿ 230 ಸ್ಥಾನ ಗೆಲ್ಲುತ್ತದೆ: ಗೋಪಾಲ್ ರೈ
ದೆಹಲಿ ಮಹಾನಗರ ಪಾಲಿಕೆಯಿಂದ ಬಿಜೆಪಿಯನ್ನು ಕಿತ್ತೊಗೆಯಲು ಜನರು ಬಯಸಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ಕನಿಷ್ಠ 230 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಭಿವೃದ್ಧಿ ಮತ್ತು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.
Published: 26th November 2022 12:33 PM | Last Updated: 26th November 2022 01:47 PM | A+A A-

ಗೋಪಾಲ್ ರೈ
ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಿಂದ ಬಿಜೆಪಿಯನ್ನು ಕಿತ್ತೊಗೆಯಲು ಜನರು ಬಯಸಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ಕನಿಷ್ಠ 230 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಭಿವೃದ್ಧಿ ಮತ್ತು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.
ಮುಂಬರುವ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಎಎಪಿ ಪ್ರಚಾರವನ್ನು ಮುನ್ನಡೆಸುತ್ತಿರುವ ಗೋಪಾಲ್ ರೈ, ಕಳೆದ 15 ವರ್ಷಗಳಲ್ಲಿ ಬಿಜೆಪಿ ಆಡಳಿತದ ನಾಗರಿಕ ಸಂಸ್ಥೆಗಳು ಅವ್ಯವಸ್ಥೆಯನ್ನು ಸೃಷ್ಟಿಸಿರುವುದರಿಂದ ಜನರು ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ ಎಂದು ಹೇಳಿದರು.
ಕಸದ ಬಿಕ್ಕಟ್ಟು, ಪಾರ್ಕಿಂಗ್ ಅವ್ಯವಸ್ಥೆ, ಮಕ್ಕಳ ಮೂಲ ಶಿಕ್ಷಣ ಸುಧಾರಣೆ, ಪ್ರಾಥಮಿಕ ಶಾಲೆಗಳ ಪ್ರಾರಂಭ, ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು, ಡೆಂಗ್ಯೂ ತಡೆಗಟ್ಟುವಿಕೆ ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಯಾವುದೇ ಕೆಲಸ ಬಿಜೆಪಿ ಅವಧಿಯಲ್ಲಿ ನಡೆದಿಲ್ಲ ಎಂದು ರೈ ಹೇಳಿದರು.
ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ: ಅಖಾಡದಲ್ಲಿ 7 ಮಂದಿ ಸೋಲಿಲ್ಲದ ಸರದಾರರು!
"ಜನರು ದುರಾಡಳಿತದ ಬಗ್ಗೆ ತಿಳಿದಿದ್ದಾರೆ ಮತ್ತು ಅವರನ್ನು (ಬಿಜೆಪಿ) ಹೊರಹಾಕುತ್ತಾರೆ" ಎಂದು ಎಎಪಿಯ ದೆಹಲಿ ಘಟಕದ ಸಂಚಾಲಕರೂ ಆಗಿರುವ ರೈ ತಿಳಿಸಿದ್ದಾರೆ.
ಟಿಕೆಟ್ ಹಂಚಿಕೆ ವಿವಾದದ ಕುರಿತು, ಪಕ್ಷವು ಪ್ರತಿ ವಾರ್ಡ್‌ನಿಂದ 11 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ, ಅದರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲಾಗಿದೆ, ಇದರಿಂದ ಇತರರು ಸ್ವಲ್ಪ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು.
"ನಾವು ಸರಿಯಾದ ಸಮೀಕ್ಷೆಯ ನಂತರ ಟಿಕೆಟ್ ಗಳನ್ನು ನೀಡಿದ್ದೇವೆ ಮತ್ತು ಟಿಕೆಟ್ ಗಳಳನ್ನು ಮಾರಾಟ ಮಾಡುವ ಮತ್ತು ಖರೀದಿಸುವ ಎಲ್ಲಾ ವದಂತಿಗಳು ಎಎಪಿಯ ಇಮೇಜ್ ಅನ್ನು ಹಾಳುಮಾಡುವ ಕ್ರಮವಾಗಿದೆ" ಎಂದು ಅವರು ಹೇಳಿದರು. "ಬಿಜೆಪಿಗೆ ಮೂರು ಅವಕಾಶಗಳನ್ನು ನೀಡಿದ ನಂತರ ಎಂಸಿಡಿಯಲ್ಲಿ ನಮಗೆ ಒಂದು ಅವಕಾಶ ನೀಡುವಂತೆ ನಾವು ಅವರನ್ನು ಕೇಳುತ್ತಿದ್ದೇವೆ" ಎಂದು ಅವರು ಹೇಳಿದರು.