ನಿಮ್ಮದು ರಾಜಕೀಯ ಪಕ್ಷವೋ ಅಥವಾ ಕಳ್ಳರ ಸಂತೆಯೋ?: ಬಿಜೆಪಿ ವಿರುದ್ಧ ಉದ್ಧವ್ ವಾಗ್ದಾಳಿ 

ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಶನಿವಾರದಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಶನಿವಾರದಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಗೌರ್ನರ್ ಭಗತ್ ಸಿಂಗ್ ಕೋಶಿಯಾರಿ ಅವರು ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿರುವುದು ಹಾಗೂ ಕರ್ನಾಟಕದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿರುವ ಉದ್ಧವ್ ಠಾಕ್ರೆ, ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಬರಬೇಕಿದ್ದ ಯೋಜನೆಗಳೆಲ್ಲವೂ ಗುಜರಾತ್ ಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ಮುಂದಿನ ವರ್ಷ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ. ಸಿಎಂ ಬೊಮ್ಮಾಯಿ ಅಕ್ಕಾಲ್ಕೋಟ್ ಹಾಗೂ ಸೋಲಾಪುರದ ಮೇಲೆ ಹಕ್ಕು ಪ್ರತಿಪಾದನೆ ಮಾಡಿದ್ದಾರೆ, ಮುಂದಿನ ವರ್ಷದ ವೇಳೆಗೆ ಇದು ಕರ್ನಾಟಕಕ್ಕೆ ಹಸ್ತಾಂತರವಾಗಬಹುದೆಂಬ ಭಯ ಕಾಡುತ್ತಿದೆ ಎಂದು ಠಾಕ್ರೆ ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಪಿಒಕೆಯನ್ನು ವಾಪಸ್ ಪಡೆಯುವುದಾಗಿ ಭರವಸೆ ನೀಡಿದ್ದಾರೆ. 40 ಗ್ರಾಮಗಳನ್ನು ಕರ್ನಾಟಕಕ್ಕೆ ನೀಡುವುದರಲ್ಲಿ ತಪ್ಪೇನು ಇಲ್ಲ ಎಂದು ಸಿಎಂ ಶಿಂಧೆ ಹೇಳಬಹುದು" ಎಂದು ಠಾಕ್ರೆ 
ಇದೇ ವೇಳೆ ವ್ಯಂಗ್ಯವಾಗಿ ಸಿಎಂ ವಿರುದ್ಧ ಮಾತನಾಡಿರುವ ಠಾಕ್ರೆ ಹೇಳಿದ್ದಾರೆ.
 
ಶಿವಾಜಿ ಮಹಾರಾಜರ ಬಗ್ಗೆ ರಾಜ್ಯಪಾಲರು ನೀಡಿದ್ದ ಹೇಳಿಕೆ ಬಗ್ಗೆಯೂ ಶಿಂಧೆ ಮೌನ ವಹಿಸಿದ್ದಾರೆ. ಬಿಜೆಪಿ ಎಂಬುದು ಆಮದು ಮಾಡಿಕೊಳ್ಳುವ ಪಕ್ಷ, ಅದು ಒಂದು ಪಕ್ಷವೋ ಅಥವಾ ಕಳ್ಳರ ಸಂತೆಯೋ ಎಂದು ಪ್ರಶ್ನಿಸಿದ್ದಾರೆ.
 
ಶಿವಸೇನೆಯಿಂದ ಮುರಿದುಕೊಂಡು ಪ್ರತ್ಯೇಕವಾಗಿರುವ ಶಾಸಕರು ಬಿಜೆಪಿಯಿಂದ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಲಿ ಎಂದು ಠಾಕ್ರೆ ಸವಾಲು ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com