ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಏಳು ಮಾಜಿ ಶಾಸಕರಿಗೆ ಸರ್ಕಾರಿ ಕಟ್ಟಡ ತೆರವಿಗೆ ನೋಟಿಸ್ ಜಾರಿ
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅಧಿಕಾರಿಗಳು ಭಾನುವಾರ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಏಳು ಮಾಜಿ ಶಾಸಕರಿಗೆ ಸರ್ಕಾರಿ ವಸತಿ ಕ್ವಾರ್ಟರ್ಸ್‌ಗಳನ್ನು ಖಾಲಿಮಾಡುವಂತೆ ಸೂಚಿಸಿದ್ದಾರೆ.
Published: 27th November 2022 04:28 PM | Last Updated: 27th November 2022 04:28 PM | A+A A-

ಮೆಹಬೂಬಾ ಮುಫ್ತಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅಧಿಕಾರಿಗಳು ಭಾನುವಾರ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಏಳು ಮಾಜಿ ಶಾಸಕರಿಗೆ ಸರ್ಕಾರಿ ವಸತಿ ಕ್ವಾರ್ಟರ್ಸ್‌ಗಳನ್ನು ಖಾಲಿಮಾಡುವಂತೆ ಸೂಚಿಸಿದ್ದಾರೆ. 24 ಗಂಟೆಗಳ ಒಳಗೆ ಖಾಲಿ ಮಾಡುವಲ್ಲಿ ವಿಫಲವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮುಫ್ತಿ ಅವರಿಗೆ ಕಳೆದ ತಿಂಗಳು ಕೂಡ ನಗರದ ಹೈ ಸೆಕ್ಯುರಿಟಿ ಗುಪ್ಕರ್ ಪ್ರದೇಶದಲ್ಲಿನ ಅವರ 'ಫೇರ್‌ವ್ಯೂ' ನಿವಾಸವನ್ನು ತೆರವುಗೊಳಿಸಲು ನೋಟಿಸ್ ನೀಡಲಾಗಿತ್ತು.
ಅನಂತನಾಗ್ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಭಾನುವಾರ ದಕ್ಷಿಣ ಕಾಶ್ಮೀರ ಜಿಲ್ಲೆಯ ಖಾನಬಾಲ್‌ನಲ್ಲಿರುವ ಹೌಸಿಂಗ್ ಕಾಲೋನಿಯಲ್ಲಿರುವ ಸರ್ಕಾರಿ ಕ್ವಾರ್ಟಸ್ ಅನ್ನು ಖಾಲಿ ಮಾಡುವಂತೆ ತೆರವು ನೋಟಿಸ್ ಅನ್ನು ಮುಫ್ತಿ ಮತ್ತು ಇತರರಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಫ್ತಿ ಅವರನ್ನು ಹೊರತುಪಡಿಸಿ, ಮಾಜಿ ಶಾಸಕರಾದ ಮೊಹಮ್ಮದ್ ಅಲ್ತಾಫ್ ವಾನಿ, ಅಬ್ದುಲ್ ರಹೀಮ್ ರಾಥರ್, ಅಬ್ದುಲ್ ಮಜೀದ್ ಭಟ್, ಅಲ್ತಾಫ್ ಶಾ ಮತ್ತು ಅಬ್ದುಲ್ ಕಬೀರ್ ಪಠಾಣ್, ಮಾಜಿ ಎಂಎಲ್‌ಸಿಗಳಾದ ಬಶೀರ್ ಶಾ ಮತ್ತು ಚೌಧರಿ ನಿಜಾಮುದ್ದೀನ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.
24 ಗಂಟೆಯೊಳಗೆ ತೆರವು ಮಾಡಲು ವಿಫಲವಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.