ರಾಜಕೀಯ ಸಮೀಕರಣದಲ್ಲಿ ವ್ಯತ್ಯಾಸ: ಮುಲಾಯಂ ಸಿಂಗ್ ಬದುಕಿದ್ದಾಗ ಗೆಲವು ಅನಾಯಾಸ; ಮೈನ್ ಪುರಿಯಲ್ಲಿ ಡಿಂಪಲ್ ಗೆಲುವು ತ್ರಾಸ!

ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್‌ಗೆ ಮೈನ್‌ಪುರಿ ಉಪಚುನಾವಣೆಯು ಸರಳವಾದ ಸಂಗತಿಯಾಗಿರುವುದಿಲ್ಲ, ಹಿಂದಿನ ಚುನಾವಣೆಗಳಲ್ಲಿ ಆಕೆಯ ಮಾವ ಮುಲಾಯಂ ಸಿಂಗ್ ಯಾದವ್ ಇದ್ದ ಕಾರಣ ಡಿಂಪಲ್ ಅನಾಯಾಸವಾಗಿ ಗೆಲುವು ಸಾಧಿಸುತ್ತಿದ್ದರು.
ಡಿಂಪಲ್ ಯಾದವ್
ಡಿಂಪಲ್ ಯಾದವ್

ಮೈನ್ ಪುರಿ: ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್‌ಗೆ ಮೈನ್‌ಪುರಿ ಉಪಚುನಾವಣೆಯು ಸರಳವಾದ ಸಂಗತಿಯಾಗಿರುವುದಿಲ್ಲ, ಹಿಂದಿನ ಚುನಾವಣೆಗಳಲ್ಲಿ ಆಕೆಯ ಮಾವ ಮುಲಾಯಂ ಸಿಂಗ್ ಯಾದವ್ ಇದ್ದ ಕಾರಣ ಡಿಂಪಲ್  ಅನಾಯಾಸವಾಗಿ ಗೆಲುವು ಸಾಧಿಸುತ್ತಿದ್ದರು ಎಂದು ಕೆಲ ಸ್ಥಳೀಯ ನಿವಾಸಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಇತ್ತೀಚೆಗೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಮೃತ ಪಟ್ಟ ಹಿನ್ನೆಲೆಯಲ್ಲಿ ಸೊಸೆ ಡಿಂಪಲ್ ಗೆ ಅನುಕಂಪದ ಮತಗಳು ಬೀಳಲಿವೆ ಎಂಬುದು ಕೆಲವರ ವಾದ. ಮೈನ್‌ಪುರಿ ಸಂಸದೀಯ ಸ್ಥಾನಕ್ಕೆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಹೆಸರನ್ನು ಎಸ್‌ಪಿ ತನ್ನ ಅಭ್ಯರ್ಥಿಯನ್ನಾಗಿ ನವೆಂಬರ್ 10 ರಂದು ಘೋಷಿಸಿತ್ತು.

ಈ ಲೋಕಸಭಾ ಕ್ಷೇತ್ರವನ್ನು ಕಸಿದುಕೊಳ್ಳಲು ಬಿಜೆಪಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ ಡಿಂಪಲ್ ಯಾದವ್‌ಗೆ ಉಪಚುನಾವಣೆ ಖಂಡಿತವಾಗಿಯೂ ಸರಳವಾಗುವುದಿಲ್ಲ. ಹೆಚ್ಚಿನ ಸಂಖ್ಯೆಯ ಬಿಜೆಪಿ ನಾಯಕರು ಈಗಾಗಲೇ ನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ" ಎಂದು ಉದ್ಯಮಿ ಧೀರೇಂದ್ರ ಕುಮಾರ್ ಗುಪ್ತಾ ಪಿಟಿಐಗೆ ತಿಳಿಸಿದ್ದಾರೆ. ಆದರೆ ಬಿಜೆಪಿಗೂ ಕೂಡ ಈ ತಕ್ಷೇತ್ರದ ಗೆಲುವು ಅಷ್ಟು ಸುಲಭವಲ್ಲ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಮಾಡದಿದ್ದರೆ ರಘುರಾಜ್ ಸಿಂಗ್ ಶಕ್ಯಾ ಗೆಲುವು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ.

'ನೇತಾ ಜೀ' (ಮುಲಾಯಂ ಸಿಂಗ್ ಯಾದವ್) ಮತ್ತು ಅವರ ಪುತ್ರ ಅಖಿಲೇಶ್ ಯಾದವ್ ನಡುವೆ ಯಾವುದೇ ಹೋಲಿಕೆ ಮಾಡಬಾರದು, ಏಕೆಂದರೆ ಹಿಂದಿನವರಿಗೆ ಅವರ ಪ್ರತಿಯೊಬ್ಬ ಮತದಾರರು ತಿಳಿದಿದ್ದರು. ಆದರೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕೆಂದು ಎಸ್ ಪಿ ಮುಖಂಡರು ಹೆಚ್ಚು ಕಡಿಮೆ ಕ್ಷೇತ್ರದ ಪ್ರತಿ ಮನೆಗೂ ಭೇಟಿ ನೀಡುತ್ತಿದ್ದಾರೆ ಎಂದಿದ್ದಾರೆ.

ಉಪಚುನಾವಣೆಯು ಯಾದವ್ ಕುಟುಂಬಕ್ಕೆ ಗುರುತಿನ ಕದನವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತದಾರರೊಂದಿಗೆ ಸಂಪರ್ಕ ಸಾಧಿಸಲು ವಿಫಲವಾದರೆ, ಲಕ್ನೋದಿಂದ ಸಚಿವರು ಸೇರಿದಂತೆ ಹಿರಿಯ ನಾಯಕರನ್ನು ಪ್ರಚಾರಕ್ಕೆ ಕರೆತರುವುದು ಕಡಿಮೆ ಪರಿಣಾಮ ಬೀರುತ್ತದೆ ಎಂದು ಉದ್ಯಮಿ ಹೇಳಿದರು.

ಮುಲಾಯಂ ಸಿಂಗ್ ಯಾದವ್ ಅಥವಾ 'ನೇತಾ ಜಿ' ಅವರ ಬೆಂಬಲಿಗರ ಗೈರುಹಾಜರಿಯಿಂದಾಗಿ ಮೈನ್‌ಪುರಿಯ ಎಸ್‌ಪಿ ಕೋಟೆಯನ್ನು ಭೇದಿಸಲು ಮುಂಬರುವ ಉಪಚುನಾವಣೆ ಬಿಜೆಪಿಗೆ ಉತ್ತಮ ಅವಕಾಶವಾಗಿದೆ ಎಂದು ಹೊಟೆಲ್ ಉದ್ಯಮಿ ಹೇಮಂತ ಪಚೌರಿ ಅಭಿಪ್ರಾಯಪಟ್ಟಿದ್ದರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com