ಜಾರ್ಖಂಡ್: ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಸ್ನೇಹಿತೆಯ ಬಾಲ್ಯವಿವಾಹ ತಡೆದ ಬಾಲಕಿ!
ಜಾರ್ಖಂಡ್‌ನ ಕೊಡೆರ್ಮಾದಲ್ಲಿ 13 ವರ್ಷದ ಬಾಲಕಿ ತನ್ನ ಸ್ನೇಹಿತೆಯ ಬಾಲ್ಯವಿವಾಹವನ್ನು ತಡೆದ ಘಟನೆ ನಡೆದಿದೆ. ಈ ಬಾಲಕಿ ಧೈರ್ಯ ಮಾಡಿ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾಳೆ.
Published: 29th November 2022 09:55 AM | Last Updated: 29th November 2022 06:45 PM | A+A A-

ಸಾಂದರ್ಭಿಕ ಚಿತ್ರ
ರಾಂಚಿ: ಜಾರ್ಖಂಡ್‌ನ ಕೊಡೆರ್ಮಾದಲ್ಲಿ 13 ವರ್ಷದ ಬಾಲಕಿ ತನ್ನ ಸ್ನೇಹಿತೆಯ ಬಾಲ್ಯವಿವಾಹವನ್ನು ತಡೆದ ಘಟನೆ ನಡೆದಿದೆ. ಈ ಬಾಲಕಿ ಧೈರ್ಯ ಮಾಡಿ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾಳೆ. ಆಕೆಯ ಸ್ನೇಹಿತೆ ಮದುವೆಯಾಗುವ ಬದಲು ಓದಲು ಬಯಸಿದ್ದಳು. ಹೀಗಾಗಿ ಬಾಲಕಿಯನ್ನು ಬಾಲ್ಯವಿವಾಹದಿಂದ ರಕ್ಷಿಸುವಂತೆ ಅಧಿಕಾರಿಗಳ ಬಳಿ ಹೋಗಿ ಮನವಿ ಮಾಡಿದಳು. ಸ್ಥಳೀಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಬಾಲಕಿಯನ್ನು ರಕ್ಷಿಸಿ ಕಸ್ಟಡಿಗೆ ತೆಗೆದುಕೊಂಡರು.
ಸುದ್ದಿ ಗೊತ್ತಾದ ಕೂಡಲೇ ಜಾರ್ಖಂಡ್ ಹೈಕೋರ್ಟ್ ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿ ಅಗತ್ಯವಿರುವ ಕ್ರಮವನ್ನು ತೆಗೆದುಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (DLSA) ನಿರ್ದೇಶಿಸಿತು. ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡು ಕೊಡೆರ್ಮಾದ ಕಸ್ತೂರಬಾ ಗಾಂಧಿ ವಸತಿ ಶಾಲೆಗೆ ದಾಖಲಿಸಲಾಗಿದೆ.
ಕೊಡೆರ್ಮಾ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಸೋಟಿಯವರ್ ಗ್ರಾಮದಲ್ಲಿ ಕಳೆದ ಶುಕ್ರವಾರ ಈ ಘಟನೆ ನಡೆದಿದೆ. ಆಕೆಯ ಸ್ನೇಹಿತೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿದ್ದು, ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ನಂತರ ಡಿಎಲ್‌ಎಸ್‌ಎ, ಚೈಲ್ಡ್‌ಲೈನ್ ಮತ್ತು ಸ್ಥಳೀಯ ಆಡಳಿತದ ಸಹಾಯದಿಂದ ಭಾನುವಾರ ಕಸ್ತೂರಬಾ ಬಾಲಿಕಾ ವಿದ್ಯಾಲಯಕ್ಕೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಸಹಾಯವಾಣಿಗೆ ಕರೆ ಮಾಡುವ ಮೂಲಕ ತನ್ನದೇ ವಿವಾಹವನ್ನು ತಡೆದ ಅಪ್ರಾಪ್ತೆ; ನರ್ಸ್ ಆಗುವ ಕನಸು
ಬಾಲಕಿ ಹೇಳಿದ್ದೇನು: 1098 ಸಂಖ್ಯೆಗೆ ಕರೆ ಮಾಡಿದ ಬಾಲಕಿ, 13 ವರ್ಷದ ಹುಡುಗಿಯಾಗಿರುವ ನನ್ನ ಸ್ನೇಹಿತೆಯನ್ನು ಬಲವಂತವಾಗಿ ಮದುವೆ ಮಾಡಲು ನೋಡುತ್ತಿದ್ದಾರೆ. ಮದುವೆಯಾದರೆ ಮುಂದೆ ಓದಲು ಸಾಧ್ಯವಾಗುವುದಿಲ್ಲ. ಆಕೆಯ ಭವಿಷ್ಯದ ದೃಷ್ಟಿಯಿಂದ ಬಾಲಕಿಯ ವಿವರವಾದ ವಿಳಾಸವನ್ನು ನೀಡಿ ಆಕೆಯನ್ನು ರಕ್ಷಿಸಲು ವಿನಂತಿಸಿದಳು, ನಂತರ ಸ್ಥಳೀಯ ಆಡಳಿತಕ್ಕೆ ತಿಳಿಸಲಾಯಿತು, ಕೂಡಲೇ ಕಾರ್ಯಪ್ರವೃತ್ತರಾದರು ಎಂದು ಚೈಲ್ಡ್‌ಲೈನ್ ನಿರ್ದೇಶಕಿ ಇಂದ್ರಮಣಿ ಸಾಹು ಹೇಳುತ್ತಾರೆ.
ಜಾರ್ಖಂಡ್ ಹೈಕೋರ್ಟ್ ಈ ವಿಷಯವನ್ನು ಅರಿತುಕೊಂಡಿತು ಬಾಲಕಿಯನ್ನು ಕೊಡೆರ್ಮಾದ ಕಸ್ತೂರ್ಬಾ ಬಾಲಿಕಾ ವಿದ್ಯಾಲಯಕ್ಕೆ ಸೇರಿಸಿತು. ಬಾಲಕಿಯ ಪೋಷಕರು ಆಕೆಯನ್ನು ಗಿರಿದಿಹ್‌ನ 22 ವರ್ಷದ ಯುವಕನಿಗೆ ಮದುವೆ ಮಾಡಲು ನಿರ್ಧರಿಸಿದ್ದರು.
ಬಾಲಕಿ ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದಳು, ಈಕೆಗೆ 17 ವರ್ಷದ ಅಣ್ಣ ಮತ್ತು ಒಂಬತ್ತು ವರ್ಷದ ಕಿರಿಯ ತಮ್ಮನಿದ್ದಾನೆ ಮತ್ತು 12 ವರ್ಷದ ತಂಗಿಯೂ ಇದ್ದಾಳೆ.