ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು: ಮೋಹನ್ ಭಾಗವತ್

ವ್ಯಾಖ್ಯಾನದ ಪ್ರಕಾರ ಭಾರತದಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು ಮತ್ತು ನೆಲದ ಸಾಂಸ್ಕೃತಿಕ ನೀತಿಯಿಂದಾಗಿ ದೇಶದಲ್ಲಿ ವೈವಿಧ್ಯತೆ ಪ್ರವರ್ಧಮಾನಕ್ಕೆ ಬಂದಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್...
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್

ದರ್ಭಾಂಗಾ(ಬಿಹಾರ): ವ್ಯಾಖ್ಯಾನದ ಪ್ರಕಾರ ಭಾರತದಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು ಮತ್ತು ನೆಲದ ಸಾಂಸ್ಕೃತಿಕ ನೀತಿಯಿಂದಾಗಿ ದೇಶದಲ್ಲಿ ವೈವಿಧ್ಯತೆ ಪ್ರವರ್ಧಮಾನಕ್ಕೆ ಬಂದಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೋಮವಾರ ಪ್ರತಿಪಾದಿಸಿದ್ದಾರೆ.

ಭಾರತ ಮಾತೆಯನ್ನು ಸ್ತುತಿಸುವ ಸಂಸ್ಕೃತ ಶ್ಲೋಕಗಳನ್ನು ಹೇಳಲು ಒಪ್ಪುವ ಮತ್ತು ನೆಲದ ಸಂಸ್ಕೃತಿಯ ರಕ್ಷಣೆಗೆ ಬದ್ಧರಾಗಿರುವ ಪ್ರತಿಯೊಬ್ಬರು ಹಿಂದೂಗಳು ಎಂದು ಭಾಗವತ್ ಹೇಳಿದ್ದಾರೆ.

ನಾಲ್ಕು ದಿನಗಳ ಬಿಹಾರ ಪ್ರವಾಸವನ್ನು ಮುಕ್ತಾಯಗೊಳಿಸುವ ಮುನ್ನ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, 'ಸ್ವಯಂಸೇವಕರು'(ಆರ್‌ಎಸ್‌ಎಸ್ ಸ್ವಯಂಸೇವಕರು) ಪ್ರದರ್ಶಿಸುವ ನಿಸ್ವಾರ್ಥ ಸೇವಾ ಮನೋಭಾವವನ್ನು ದೇಶದ ಎಲ್ಲಾ ನಾಗರಿಕರು ಅಳವಡಿಸಿಕೊಳ್ಳಬೇಕು ಎಂದರು.

"ಹಿಂದೂಸ್ಥಾನದಲ್ಲಿ ವಾಸಿಸುವ ಕಾರಣ ಎಲ್ಲರೂ ಹಿಂದೂಗಳು ಎಂದು ಜನ ಅರ್ಥಮಾಡಿಕೊಳ್ಳಬೇಕು. . ಅವರು ಯಾವುದೇ ಧರ್ಮ, ಸಂಸ್ಕೃತಿ, ಭಾಷೆ ಮತ್ತು ಆಹಾರ ಪದ್ಧತಿ ಮತ್ತು ಸಿದ್ಧಾಂತವನ್ನು ಅನುಸರಿಸಿದರೂ ಅವರು ಹಿಂದೂಗಳೇ ಆಗಿರುತ್ತಾರೆ. ಹಿಂದುತ್ವ ಎಂಬುದು ಶತಮಾನಗಳ ಹಳೆಯ ಸಂಸ್ಕೃತಿಯ ಹೆಸರು" ಎಂದು ಭಾಗವತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com